Puttakkana Makkalu: ಸಹನಾ ಬಾಳಲ್ಲಿ ಮತ್ತೊಂದು ಬರ ಸಿಡಿಲು; ಇರೋ ಒಂದು ನೆಲೆ ಕಳ್ಕೊಳ್ತಾಳಾ ಸಹನಾ?

Written by Soma Shekar

Published on:

---Join Our Channel---

Puttakkana Makkalu: ಕನ್ನಡ ಕಿರುತೆರೆಯಲ್ಲಿ ಪ್ರಸ್ತುತ ನಂಬರ್ ಒನ್ ಸ್ಥಾನದಲ್ಲಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯು ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಸೀರಿಯಲ್ ನ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಕಥೆಯಲ್ಲಿನ ಹೊಸ ಹೊಸ ಟ್ವಿಸ್ಟ್ ಗಳು ಇನ್ನಷ್ಟು ರೋಚಕತೆಯನ್ನು ಮೂಡಿಸಿದೆ. ಬಂಗಾರಮ್ಮನ ಜಾಗಕ್ಕೆ ಬಂದಿರುವ ಸಿಂಗಾರಮ್ಮನ ಕಥೆ ಒಂದು ಕಡೆಯಾದರೆ, ಮನೆ ಬಿಟ್ಟು ಬಂದಿರುವ ಸಹನಾ ದೊಡ್ಡ ನಗರದಲ್ಲಿ ಬದುಕನ್ನ ಕಟ್ಟಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಳೆ.

ತನ್ನ ಪುಟ್ಟ ಹೋಟೆಲ್ ಗೆ ತಿಂಡಿ ತಿನ್ನಲು ಬರುವ ಮ್ಯಾಕ್ಸ್ ವೆಲ್ ತನ್ನೂರಿನಲ್ಲಿ ತಮ್ಮದೇ ಮೆಸ್ ಹೋಗಿ ಬಂದ ವಿಚಾರ ತಿಳಿದ ಮೇಲೆ ಸಹನಾ ತನ್ನ ಹಣದಿಂದ ಪುಟ್ಟಕ್ಕನಿಗೆ ಒಂದು ಸೀರೆಯನ್ನ ಕೊಂಡುಕೊಂಡು, ಮ್ಯಾಕ್ಸ್ ವೆಲ್ ಕೈಗೆ ಅದನ್ನ ನೀಡಿ ತನ್ನ ತಾಯಿಗೆ ತಲುಪಿಸುವಂತೆ ಹೇಳಿದ್ದಾಳೆ ಹಾಗೂ ಪುಟ್ಟಕ್ಕ ತನ್ನ ತಾಯಿ ಅನ್ನೋ ಸತ್ಯವನ್ನ ತಿಳಿಸಿದ್ದಾಳೆ.

ಸಹನಾ ಹತ್ರ ಕೆಲಸ ಮಾಡುತ್ತಿರುವ ಚೋಟು ಸಹನಾಳನ್ನ ಅಕ್ಕ ನೀನು ಮನೆ ಬಿಟ್ಟು ಯಾಕೆ ಬಂದೆ, ಮತ್ತೆ ಯಾವಾಗ ಹೋಗ್ತೀಯಾ ಅಂತ ಪ್ರಶ್ನೆಯನ್ನು ಮಾಡಿದ್ದಾನೆ. ಆಗ ಸಹನಾ ಜೀವನದಲ್ಲಿ ತಾನು ಏನಾದ್ರೂ ಸಾಧನೆ ಮಾಡಿದ್ದೀನಿ ಅಂತ ಅನಿಸಿದಾಗ ಮತ್ತೆ ತನ್ನ ತಾಯಿ ಹತ್ರಕ್ಕೆ ಹೋಗೋದಾಗಿ ಹೇಳಿದ್ದಾಳೆ. ಆದರೆ ಇವೆಲ್ಲವುಗಳ ನಡುವೆ ಈಗ ಹೊಸದೊಂದು ಸಮಸ್ಯೆ ಶುರುವಾಗಿದೆ.

ಸಹನಾ ನಡೆಸುತ್ತಿರೋ ಹೋಟೆಲ್ ಗೆ ಬಂದಿರುವ ಒಬ್ಬ ಮಹಿಳೆ ಈ ಅಂಗಡಿ ನನ್ನದು, ನೀನು ಈಗಲೇ ಜಾಗ ಖಾಲಿ ಮಾಡು ಅಂತ ಸಹನಾಗೆ ಗಟ್ಟಿಯಾಗಿ ಮಾರ್ನಿಂಗ್ ಕೊಟ್ಟಿದ್ದಾಳೆ. ಮುಂದೆ ಸಹನ ಏನ್ ಮಾಡ್ತಾಳೆ, ಇದ್ದ ಒಂದು ಜೀವನ ಆಧಾರವನ್ನು ಮತ್ತೆ ಕಳೆದುಕೊಳ್ತಾಳಾ? ಅಥವಾ ಈ ಸಮಸ್ಯೆಯನ್ನು ದಿಟ್ಟತನದಿಂದ ಎದುರಿಸಿ ಹೋರಾಡ್ತಾಳಾ? ಕಾದು ನೋಡಬೇಕಾಗಿದೆ.

Gauri Khan: ಒಂದೇ ಟೈಮ್ ನಲ್ಲಿ ಇಬ್ಬರ ಜೊತೆ ಮಾಡಬೇಡ, ಮಗಳಿಗೆ ಶಾರೂಖ್ ಪತ್ನಿ ಕೊಟ್ಟ ಶಾಕಿಂಗ್ ಸಲಹೆ

Leave a Comment