Puttakkana Makkalu: ಒಂದೇ ಸಲಕ್ಕೆ ಮೂರು ಟ್ವಿಸ್ಟ್, ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಥೆಯ ವೇಗ ಹೆಚ್ಚಾಯ್ತು

Written by Soma Shekar

Published on:

---Join Our Channel---

Puttakkana Makkalu : ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಸಮಯ ಬದಲಾಗಿದ್ದೇ ತಡ ಎನ್ನುವಂತೆ ಒಂದೇ ವಾರದಲ್ಲಿ ದೊಡ್ಡ ಶಾಕ್ ತಗುಲಿದ್ದು, ಈ ಸೀರಿಯಲ್ ನಂಬರ್ ಒನ್ ಸ್ಥಾನ ಕಳೆದುಕೊಂಡಿದ್ದು ಮಾತ್ರವೇ ಅಲ್ಲದೇ ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಸಹಾ ವಿಫಲವಾಗಿದೆ. ಆದರೆ ಇದೇ ವೇಳೆ ಸೀರಿಯಲ್ ನ ಕಥೆಯ ವೇಗ ಹೆಚ್ಚಿದಂತೆ ಕಂಡಿದೆ ಎನ್ನುವುದು ಸತ್ಯ.

ಪುಟ್ಟಕ್ಕ ಮಗಳನ್ನ ಹುಡುಕಿಕೊಂಡು ನಗರಕ್ಕೆ ಬಂದಿದ್ದಾಳೆ. ಇನ್ನೊಂದು ಕಡೆ ಸಿಂಗಾರಮ್ಮ (Singaramma) ಪುಟ್ಟಕ್ಕನ ಮೇಲೆ ಕಳ್ಳತನದ ಆರೋಪ ಮಾಡಿದ್ದಾಳೆ. ಪುಟ್ಟಕ್ಕ ಮನೆ ಬಿಟ್ಟ ವಿಚಾರ ಕಂಠಿ ಸ್ನೇಹಾಗೆ ಹೇಳದೇ ದೆಹಲಿಗೆ ಕಳಿಸಿದ್ದಾನೆ. ಆದರೆ ಸಿಂಗಾರಮ್ಮ ರಾಜಿ ಮಾತು ಕೇಳಿ ಸ್ನೇಹಾನ ವಾಪಸ್ ಕರೆಸೋಕೆ ಪುಟ್ಟಕ್ಕ ಮನೇಲಿಲ್ಲ, ಕಂಠಿ ನಿನಗೆ ಸುಳ್ಳು ಹೇಳಿದ್ದಾನೆ ಅಂತ ಬತ್ತಿ ಇಟ್ಟಿದ್ದಾಳೆ.

ಸ್ನೇಹ ಕಂಠಿಗೆ (Kanthi) ಫೋನ್ ಮಾಡಿ ವಿಷಯ ತಿಳ್ಕೊಂಡು ವಾಪಸ್ ಬರ್ತೀನಿ ಅಂದಿದ್ದಾಳೆ. ಆದ್ರೆ ಕಂಠಿ ಬೇಡ, ಅಮ್ಮನನ್ನ ಹುಡುಕಿ ಕರ್ಕೊಂಡು ಬರ್ತೀನಿ ಅಂದಿದ್ದಾನೆ. ಇದೆಲ್ಲದರ ನಡುವೆ ಗುಡ್ ನ್ಯೂಸ್ ಅನ್ನೋ ಹಾಗೆ ಕಂಠಿಗೆ ಪುಟ್ಟಕ್ಕ ಸಿಕ್ಕಿದ್ದಾಳೆ. ಪುಟ್ಟಕ್ಕನಿಗೆ ಸಹನಾ ಸಿಕ್ಕಿದ್ದಾಳೆ. ಈಗ ಕಂಠಿ ಸ್ನೇಹಾಗೆ ಈ ವಿಷಯ ಹೇಳಿದರೆ ಬಂಗಾರಮ್ಮನ ಪ್ಲಾನ್ ಫ್ಲಾಪ್ ಆಗುತ್ತೆ.‌

ಕಥೆಯಲ್ಲಿ ಇಷ್ಟು ಬೇಗ ಒಂದರ ನಂತರ ಮತ್ತೊಂದು ಸಿಹಿ ಸುದ್ದಿ ತೋರ್ಸಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಕಥೆಯನ್ನು ಎಳೆಯೋ ಬದಲು ಹೀಗೆ ಕಥೆಯ ವೇಗ ಹೆಚ್ಚಿದ್ದನ್ನು ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ. ಇನ್ನು ಸಿಂಗಾರಮ್ಮನ ಅಸಲಿಯತ್ತು ಕೂಡಾ ಕಂಠಿಗೆ ಬೇಗ ಗೊತ್ತಾಗುತ್ತಾ? ಕಂಠಿ ತನ್ನ ನಿಜವಾದ ಅಮ್ಮನನ್ನ ಬೇಗ ಹುಡುಕಿ ಸಿಂಗಾರಮ್ಮನ ಆಟಕ್ಕೆ ಬ್ರೇಕ್ ಹಾಕ್ತಾನಾ? ಕಾದು ನೋಡಬೇಕಾಗಿದೆ.

Sara Annaiah: ಮುಂದಿನ ತಿಂಗಳೇ ನನ್ನ ಮದ್ವೆ ಅಂತ ಪೋಸ್ಟ್ ಹಾಕಿ ಕಂಡೀಶನ್ ಹಾಕಿದ ಸಾರಾ ಅಣ್ಣಯ್ಯ; ನಟಿ ಪೋಸ್ಟ್ ಗೆ ಫ್ಯಾನ್ಸ್ ಶಾಕ್

Leave a Comment