DKD show: ಏಕಾಏಕೀ ಡಿಕೆಡಿ ಬಿಟ್ಟು ಹೊರ ಬಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಹನಾ; ಕಾರಣವಾದ್ರು ಏನು?

Written by Soma Shekar

Published on:

---Join Our Channel---

DKD Show : ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ ಪುಟ್ಟಕ್ಕನ ಮಕ್ಕಳುನಲ್ಲಿ (Puttakkana Makkalu) ಪುಟ್ಟಕ್ಕನ ಹಿರಿಯ ಮಗಳು ಸಹನಾ (Sahana) ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ನಟಿ ಅಕ್ಷರ (Akshara). ಸೀರಿಯಲ್ ಜೊತೆಗೆ ಅವರು ಇತ್ತೀಚೆಗೆ ಆರಂಭವಾದ ಕಿರುತೆರೆಯ ಅತ್ಯಂತ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗೆ ಹರ್ಷಿತ್ (Harshith) ಎನ್ನುವ ಸ್ಪರ್ಧಿಯ ಜೊತೆಗೆ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಆದರೆ ಈಗ ಅಕ್ಷರ ಅವರು ಶೋ ನಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವಾರವೂ ರವರು ಶೋನಲ್ಲಿ ಇರದ ಕಾರಣ ಹರ್ಷಿತ್ ಕೂಡಾ ಡ್ಯಾನ್ಸ್ ಮಾಡಿರಲಿಲ್ಲ. ಈ ವಾರ ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿಯಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಡ್ಯಾನ್ಸ್ ಮಾಡಿದ್ದಾರೆ.

ಶ್ರೀವಲ್ಲಿ ಅವರನ್ನು ಪರಿಚಯಿಸಿದ ಅನುಶ್ರೀ ಅವರು ಸಹನಾ ಕೆಲವೊಂದು ಕಾರಣಗಳಿಂದ ಈ ಶೋ (DKD Show) ನಿಂದ ಹೊರ ನಡೆದಿದ್ದಾರೆ ಎಂದಷ್ಟೇ ಹೇಳಿದ್ದಾರೆ. ಸಹನಾ ಡಿಕೆಡಿ ಇಂದ ಹೊರ ಬಂದಿರುವುದೇಕೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಕಾರಣ ಮಾತ್ರ ಗೊತ್ತಾಗಿಲ್ಲ.‌

ಅಕ್ಷರ ಅವರಿಗೆ ಇದು ಮೊದಲ ರಿಯಾಲಿಟಿ ಶೋ ಆಗಿತ್ತು. ಸಹನಾ ಪಾತ್ರದ ಮೂಲಕ ಅವರನ್ನು ಮೆಚ್ಚಿದ್ದ ಅಭಿಮಾನಿಗಳು ಡಿಕೆಡಿ ಯಲ್ಲಿ ಅವರನ್ನು ನೋಡಿ ಇನ್ನಷ್ಟು ಖುಷಿಯಾಗಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೇ ಶೋ ನಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.

Leave a Comment