Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸದ್ಯಕ್ಕೆ ಕಿರುತೆರೆಯಲ್ಲಿ ಅತ್ಯಧಿಕ ಟಿ ಆರ್ ಪಿ ಪಡೆಯುತ್ತಿರುವ ನಂಬರ್ ಒನ್ ಸೀರಿಯಲ್ ಆಗಿದೆ. ಹೊಸ ಹೊಸ ತಿರುವುಗಳು, ಕಥೆಯ ವೇಗ ವಿಶೇಷವಾಗಿ ಎಲ್ಲರ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ರಾಜಿ (Raji) ಮತ್ತು ರಾಧ (Radha) ಇಬ್ಬರೂ ಸೇರಿಕೊಂಡು ಸ್ನೇಹಾಳನ್ನ ಬಂಗಾರಮ್ಮನ ಮುಂದೆ ಕೆಟ್ಟವಳನ್ನಾಗಿ ತೋರಿಸೋದಕ್ಕೆ ಎಲ್ಲಾ ಪ್ಲಾನ್ ಮಾಡಿದ್ರು, ಆದರೆ ಅಜ್ಜಿ ಚೌಡವ್ವನ ಬುದ್ಧಿವಂತಿಕೆಯಿಂದಾಗಿ ರಾಜಿ ಮತ್ತು ರಾಧಾ ಇಬ್ಬರಿಗೂ ಅವಮಾನ ಎದುರಾಗಿದೆ.
ಬಂಗಾರಮ್ಮನ (Bangaramma) ಮನೆ ಪತ್ರ ಅಡ ಇಟ್ಟು ಹಣ ಪಡೆಯೋಕೆ ಸ್ನೇಹ ಪ್ಲಾನ್ ಮಾಡಿ ಪತ್ರಗಳನ್ನ ಪುಟ್ಟಕ್ಕನ ಮನೆಯಲ್ಲಿ ಇಟ್ಟಿದ್ದಾಳೆ ಅಂತ ರಾಧಾ ಹೇಳಿದ್ದಳು. ಅದಕ್ಕೆ ಸಾಥ್ ನೀಡಿದವಳು ರಾಜಿ. ಆದರೆ ಇವರ ಕುತಂತ್ರ ಅರಿತುಕೊಂಡ ಅಜ್ಜಿ ಪುಟ್ಟಕ್ಕನ ಮನೆಗೆ ಹೋಗಿ ಪತ್ರವನ್ನು ಅಲ್ಲಿಂದ ತೆಗೆದುಕೊಂಡಿದ್ದಾರೆ. ಮನೆಯೆಲ್ಲಾ ಪತ್ರಕ್ಕಾಗಿ ಹುಡುಕಾಡಿದ ರಾಜಿಗೆ ಪತ್ರ ಸಿಗದೇ ಪಿತ್ರ ನೆತ್ತಿಗೇರಿ ಸ್ನೇಹ ಮೇಲೆ ಕೈಮಾಡೋಕೆ ಹೋಗಿದ್ದಾಳೆ.
ಆದ ರಾಜಿ ಕೆನ್ನೆಗೆ ಬಾರಿಸಿದ ಬಂಗಾರಮ್ಮ ಸ್ನೇಹ ಈಗ ಬಂಗಾರಮ್ಮನ ಸೊಸೆ ಅಂತ ಹೇಳಿದ್ದಾಳೆ. ಅಲ್ಲಿಗೆ ರಾಧಾ ಮತ್ತು ರಾಜಿ ಮಾಡಿದ ಪ್ಲಾನ್ ಅವರಿಗೇ ಉಲ್ಟಾ ಹೊಡೆದಿದೆ. ಈ ಗಲಾಟೆ ಎಲ್ಲಾ ಮುಗಿಯುವ ವೇಳೆಗೆ ಅಜ್ಜಿ ಅಂದರೆ ಬಂಗಾರಮ್ಮನ ತಾಯಿ ಅಲ್ಲಿಗೆ ಬಂದಿದ್ದು, ವಿಷಯವನ್ನ ಜಾಸ್ತಿ ಎಳೆಯೋದು ಬೇಡ ಅಂತ ರಾಜಿನ ಅಲ್ಲಿಂದ ಕಳಿಸಿದ್ದಾಗಿದೆ.
ಇದಾದ ನಂತರ ಅಜ್ಜಿ ರಾಧಾ ಕಡೆಗೆ ದೃಷ್ಟಿ ಹರಿಸಿದ್ದಾರೆ. ಅಲ್ಲದೇ ಬಂಗಾರಮ್ಮ ಮತ್ತು ಸ್ನೇಹನ ನೋಡಿದರೆ ನಿನಗೆ ಏನು ಅನಿಸುತ್ತೆ ಅಂತ ಕೇಳಿದ್ದು, ರಾಧಾ ಏನೂ ಅರಿಯದ ಮುಗ್ಧಳ ಹಾಗೆ ನಟಿಸುತ್ತಾ ಖುಷಿ ಆಗುತ್ತೆ ಎಂದಿದ್ದು, ಅಜ್ಜಿ ಆಗಲೇಬೇಕು ಅಂದಿದ್ದು ಮಾತ್ರವಲ್ಲದೇ ಇನ್ಮೇಲಾದ್ರು ಸರಿಯಾಗಿರು ಅಂತ ರಾಧಾಗೆ ಬುದ್ಧಿಮಾತನ್ನು ಹೇಳಿದ್ದಾರೆ.
ಆಗ ರಾಧ ನಾನೇನು ಮಾಡಿದೆ ಎಂದು ಕೇಳಿದಾಗ ಅಜ್ಜಿ ಗಟ್ಟಿಯಾಗಿ ಆವಾಜ್ ಹಾಕಿದ್ದಾರೆ. ಅಜ್ಜಿ ರಾಧ ಅಸಲಿ ಮುಖವನ್ನು ಎಲ್ಲರ ಮುಂದೆ ಬಯಲು ಮಾಡೋಕೆ ಹೊರಟಿರೋ ಹಾಗೆ ಕಂಡಿದೆ. ಇನ್ಮುಂದೆ ರಾಧಾ ಆಟಗಳಿಗೆ ಬೀಳುತ್ತಾ ಬ್ರೇಕ್, ಸ್ನೇಹ ಸಹಾ ರಾಧಾಗೆ ಇನ್ಮುಂದೆ ಪಾಠ ಕಳಿಸ್ತಾಳಾ ಅನ್ನೋದನ್ನ ಕಾದು ನೋಡಬೇಕಾಗಿದೆ.