Puttakkana Makkalu: ಕಾದಿದೆ ಬಿಗ್ ಟ್ವಿಸ್ಟ್: ಸಹನಾ ಸಾವು ಪ್ರೇಕ್ಷಕರಿಗೆ ಶಾಕ್, ಆದ್ರೂ ಒಪ್ಪಲೇಬೇಕಾದ ಸತ್ಯ ಇಲ್ಲಿದೆ

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಪುಟ್ಟಕ್ಕನ ಹಿರಿಯ ಮಗಳು ಸಹನಾ ಸಾವು ಪ್ರೇಕ್ಷಕರಿಗೆ ಶಾಕ್ ನೀಡಿದೆ. ಸಹನಾ (Sahana) ಸತ್ತಿದ್ದು ನಿಜಾನಾ? ಸಹನಾ ಪಾತ್ರಕ್ಕೆ ನಿರ್ದೇಶಕರು ಇಷ್ಟು ಬೇಗ ಕೊನೆ ಮಾಡಿಬಿಟ್ರಾ? ಅಂತೆಲ್ಲಾ ಪ್ರೇಕ್ಷಕರನ್ನ ಹೊಸ ಹೊಸ ಪ್ರಶ್ನೆಗಳು ಕಾಡುತ್ತಿದೆ. ಇನ್ನೊಂದು ಕಡೆ ಮತ್ತೊಂದು ಪ್ರೇಕ್ಷಕ ವರ್ಗ ಇಲ್ಲ ಸಹನಾ ಸತ್ತಿರೋಕೆ ಸಾಧ್ಯವೇ ಇಲ್ಲ ಅಂತಾನೂ ಕಾಮೆಂಟ್ ಗಳನ್ನ ಮಾಡ್ತಾ ಇದ್ದಾರೆ. ಈಗ ಸೀರಿಯಲ್ ನಲ್ಲಿ ಒಂದು ದೊಡ್ಡ ಬಿಗ್ ಟ್ವಿಸ್ಟ್ ಕಾದಿದೆ ಅನ್ನೋದು ಪ್ರೇಕ್ಷಕರಿಗೆ ಅಚ್ಚರಿಯನ್ನು ಮೂಡಿಸಿದೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸಹನಾ ಪಾತ್ರವನ್ನ ಮಾಡಿರುವ ನಟಿ ಅಕ್ಷರಾ (Akshara) ಅವರು ಧಾರಾವಾಹಿಯಲ್ಲಿ ಒಂದು ಬಿಗ್ ಸರ್ಪ್ರೈಸ್ ಇದೆ ಎನ್ನುವ ಮಾತನ್ನು ಹೇಳಿದ್ದರು. ಆದ್ದರಿಂದ ಇದು ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ. ಸೀರಿಯಲ್ ನಲ್ಲಿ ನಡೆದಿದ್ದೇನು ಅನ್ನೋದಾದ್ರೆ ಸಹನಾ ಶವ ಅನ್ಕೊಂಡು ಪುಟ್ಟಕ್ಕ ಮತ್ತು ಕುಟುಂಬದವರು ನೋವಿನಿಂದಲೇ ದಹನ ಸಂಸ್ಕಾರವನ್ನು ಮಾಡಿದ್ದಾರೆ. ಪುಟ್ಟಕ್ಕನ ಗೋಳಂತೂ ನೋಡೋಕೆ ಆಗದಂತಾಗಿದೆ.

ಆದರೆ ವಾಸ್ತವದಲ್ಲಿ ಸಹನಾ ಸತ್ತಿಲ್ಲ, ಯಾರದೋ ಶವವನ್ನ ಸಹನಾ ಅನ್ಕೊಂಡು ಪುಟ್ಟಕ್ಕ ಮತ್ತು ಕುಟುಂಬ ಅಂತಿಮ ಸಂಸ್ಕಾರವನ್ನು ಮಾಡಿದ್ದಾರೆ. ಆದರೆ ಅಸಲಿಗೆ ಸಹನಾಳನ್ನು ಒಂದು ದೇವಸ್ಥಾನದವರು ರಕ್ಷಣೆ ಮಾಡಿದ್ದಾರೆ. ಅಲ್ಲಿ ಸಹನಾ ಬಸ್ ನಲ್ಲಿ ಆದ ತೊಂದರೆ, ಹೇಗೆ ಆಕ್ರಮಣ ಮಾಡಿದವರಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಎಲ್ಲವನ್ನೂ ವಿವರಿಸಿ ಹೇಳಿದ್ದಾಳೆ. ಅಲ್ಲಿಗೆ ಸಹನಾ ಸತ್ತಿಲ್ಲ ಅನ್ನೋದು ಖಾತ್ರಿ ಆಗಿದೆ.

ಸದ್ಯಕ್ಕೆ ಸಹನಾ ಬದುಕಿರೋದಂತೂ ಸತ್ಯ. ಮುಂದೆ ಸಹನಾ ಪುಟ್ಟಕ್ಕ ಮತ್ತು ಮನೆ ಅವ್ರ ಕಣ್ಣಿಗೆ ಮತ್ತೆ ಯಾವಾಗ ಕಾಣಿಸಿಕೊಳ್ತಾಳೆ. ಏನಾದ್ರು ಸಾಧನೆ ಮಾಡಿ ಅಥವಾ ತನ್ನ ಕಾಲ ಮೇಲೆ ತಾನು ನಿತ್ಕೊಳ್ತಾಳಾ? ಮುಂದೆ ಮುರುಳಿ ಮೇಷ್ಟ್ರು ಸಹನಾ ಹತ್ರ ಕ್ಷಮೆ ಕೇಳಿ ಮತ್ತೆ ಇಬ್ರೂ ಒಟ್ಟಾಗಿ ಜೀವನ ನಡೆಸ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ. ಕನ್ನಡ ಕಿರುತೆರೆಯಲ್ಲಿ ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಂಬರ್ ಒನ್ ಸ್ಥಾನದಲ್ಲಿ ಬೀಗುತ್ತಿದೆ.

Leave a Comment