Puttakkana Makkalu ಅಸಲಿ ಅತ್ತೆಯನ್ನ ಪತ್ತೆ ಹಚ್ಚಿದ ಸ್ನೇಹ, ನಾವು ಇದನ್ನ ನಂಬಲ್ಲ ಎಂದು ರೊಚ್ಚಿಗೆದ್ದ ನೆಟ್ಟಿಗರು

Written by Soma Shekar

Published on:

---Join Our Channel---

Puttakkana Makkalu : ಪ್ರಸಾರದ ಸಮಯ ಬದಲಾದ ಮೇಲೆ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಟಿ ಆರ್ ಪಿ ಕುಸಿದು ಟಾಪ್ ಐದರಿಂದ ಹೊರಗೆ ಬಂದಿತ್ತು. ಆದರೆ ಈಗ ಮತ್ತೆ ಟಾಪ್ ಮೂರರ ಸ್ಥಾನವನ್ನು ಪಡೆದಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡ್ತಾ ಇದೆ.

ಸೀರಿಯಲ್ ನಲ್ಲಿ ಬಂಗಾರಮ್ಮನ (Bangaramma) ಸ್ಥಾನಕ್ಕೆ ಖಳನಾಯಕಿ ಸಿಂಗಾರಮ್ಮ ಎಂಟ್ರಿ ಕೊಟ್ಟು ತನ್ನ ಕುತಂತ್ರಗಳನ್ನು ನಡೆಸೋವಾಗ್ಲೇ ಸ್ನೇಹಾಗೆ ಈ ವಿಷಯ ಗೊತ್ತಾಗಿದೆ. ಸ್ನೇಹ ಪೋಲಿಸರ ಸಹಾಯದಿಂದ ಬಂಗಾರಮ್ಮನ ಪತ್ತೆ ಹಚ್ಚಿ ಬಂಧನದಿಂದ ಬಿಡುಗಡೆ ಮಾಡ್ಸಿದ್ದಾಳೆ ಅನ್ನೋದು ಹೊಸ ಪ್ರೊಮೊದಲ್ಲಿ ಕಂಡಿದೆ.

ಆದ್ರೆ ಪ್ರೊಮೋ ನೋಡಿದ ಮೇಲೆ ನೆಟ್ಟಿಗರು ಮಾತ್ರ ಇದನ್ನ ಒಪ್ಪೋದಕ್ಕೆ ಸಿದ್ಧವಾಗಿಲ್ಲ. ಸ್ನೇಹ ಪತ್ತೆ ಹಚ್ಚಿದೇನೋ ನಿಜ ಇರಬಹುದು ಆದ್ರೆ ಅದು ಬಂಗಾರಮ್ಮ ಅಲ್ಲ ಅಂತ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ. ಸ್ನೇಹ (Sneha) ಸಿಂಗಾರಮ್ಮನ ಎದುರು ನಿಂತು ನೀನು ಬಂಗಾರಮ್ಮ ಅಲ್ಲ ಅನ್ನೋ ಮಾತುಗಳನ್ನ ಹೇಳಿದ್ದಳು.

ಮೊದಲೇ ಸಿಂಗಾರಮ್ಮ ಖತರ್ನಾಕ್ ಕಿಲಾಡಿ. ಸ್ನೇಹ ಇಂತದ್ದೇನಾದ್ರು ಮಾಡೇ ಮಾಡ್ತಾಳೆ ಅಂತ ಆಲೋಚನೆ ಮಾಡಿ ಬಂಗಾರಮ್ಮನ್ನ ಬೇರೆ ಕಡೆ ಶಿಫ್ಟ್ ಮಾಡಿ ತಾನೇ ಬಂಗಾರಮ್ಮನ ಜಾಗದಲ್ಲಿ ಕಿಡ್ನಾಪ್ ಆಗಿರೋ ತರ ಕೂತಿರಬಹುದು ಅನ್ನೋದು ಕೆಲವರ ಅಭಿಪ್ರಾಯ ಆಗಿದೆ.

ಈಗ ಸ್ನೇಹ ಪತ್ತೆ ಹಚ್ಚಿದ್ದು, ರೌಡಿಗಳಿಂದ ಕಾಪಾಡಿಕೊಂಡಿದ್ದು ತನ್ನ ಅತ್ತೆ ಬಂಗಾರಮ್ಮನ್ನ ಅತ್ತೆ ಮತ್ತೆ ಸಿಂಗಾರಮ್ಮನ ಮೋಸಕ್ಕೆ ದಾಳವಾದ್ಲ ಸ್ನೇಹ ಅನ್ನೋದನ್ನ ಕಾದು ನೋಡಬೇಕಾಗಿದೆ. ಅಲ್ಲಿವರೆಗೆ ಜನರ ಪ್ರಶ್ನೆ, ಅನುಮಾನಕ್ಕೆ ಉತ್ತರ ಅಂತೂ ಇಲ್ಲ.

Bigg Boss Kannada 11 ಎರಡನೇ ವಾರಕ್ಕೆ ನರಕದ ಮನೆ ಆಯ್ತು ಧ್ವಂಸ; ನರಕದ ಕತೆ ಮುಗಿದಿದ್ದು ಯಾಕೆ

Leave a Comment