Puttakkana Makkalu: ಕಂಠಿ ಕಣ್ಣೆದುರು ಬಂದೇ ಬಿಡ್ತಾ ಸಿಂಗಾರಿ ಸತ್ಯ; ಕಂಠಿ ದನಿ ಕೇಳಿ ಬೆಚ್ಚಿ ಬಿದ್ದ ಸಿಂಗಾರಮ್ಮ

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ಟ್ವಿಸ್ಟ್ ಏನಂದ್ರೆ ಅದು ಸಿಂಗಾರಮ್ಮನ ಎಂಟ್ರಿ, ಸಹನಾ ಬದುಕಲ್ಲಿ ಆಗ್ತಿರೋ ಬದಲಾವಣೆಗಳೇ ಆಗಿದೆ. ಸಹನಾಳಿಗೆ ಸಿಂಗಾರಮ್ಮನ ಅಸಲಿಯತ್ತು ಗೊತ್ತಾಗಿದೆ. ಇದೇ ವೇಳೆ ಸಿಂಗಾರಮ್ಮನಿಗೆ ಸಹನಾ ಬದುಕಿರೋ ವಿಚಾರ ಗೊತ್ತಾಗಿದ್ದು, ಹೇಗಾದರೂ ಸಹನಾಳನ್ನ ತನ್ನ ದಾರಿಯಿಂದ ತೊಲಗಿಸಬೇಕೆಂತ ಕಾಯ್ತಿದ್ದಾಳೆ.

ಮತ್ತೊಂದು ಕಡೆ ಪುಟ್ಟಕ್ಕ ಮಗಳನ್ನು ಹುಡುಕಿಕೊಂಡು ಮತ್ತೊಮ್ಮೆ ಬಂದಿದ್ದು, ಕಂಠಿ (Kanthi) ಕೂಡಾ ಅಲ್ಲಿಗೆ ಬಂದಿದ್ದು, ಇಬ್ಬರಿಗೂ ಕಾಳಿ ಕಾಣಿಸಿದ್ದಾನೆ. ಇದೇ ವೇಳೆ ಬಂಗಾರಮ್ಮನ ರೂಪದಲ್ಲಿ ಇರೋ ಸಿಂಗಾರಮ್ಮ ರಾಜಿ ಕೈಯಲ್ಲಿ ಕಾಳಿಗೆ ಫೋನ್ ಮಾಡಿಸಿದ್ದಾಳೆ.

ಕಾಳಿ ಅವನ ಜೊತೆ ಗಾಡಿಯಲ್ಲಿ ಸಹನಾಳನ್ನ (Sahana) ಕರ್ಕೊಂಡು ಹೋಗಿದ್ದ ವಿಚಾರ ಮಾತಾಡ್ತಾ ಅವನಿಗೆ ವಾರ್ನಿಂಗ್ ಕೊಡೋವಾಗಲೇ ಕಾಳಿ ಫೋನ್ ಅನ್ನ ಕಂಠಿ ಕೈಗೆ ಕೊಟ್ಟಿದ್ದಾನೆ. ಫೋನ್ ನಲ್ಲಿ ಕಂಠಿ ದನಿಯನ್ನು ಕೇಳಿದ ಸಿಂಗಾರಮ್ಮನಿಗೆ ಸಹಾ ಶಾಕ್ ಆಗಿದೆ.

ಈಗಲಾದರೂ ಕಂಠಿಗೆ ಸಿಂಗಾರಮ್ಮನ ಬಗ್ಗೆ ಅನುಮಾನ ಬರುತ್ತಾ? ಪುಟ್ಟಕ್ಕನ ಕಣ್ಣಿಗೆ ಸಹನಾ ಕಾಣಿಸಿಕೊಳ್ತಾಳಾ? ಸಹನಾ ಬಗ್ಗೆ ಅವಳನ್ನ ನಾನು ಹುಡುಕಿಸಿ ಎಲ್ಲರ ಮುಂದೆ ಕರ್ಕೊಂಡು ಬರೋಕೆ ಇದೆಲ್ಲಾ ಮಾಡ್ತಿದ್ದೆ ಅಂತ ಸಿಂಗಾರಮ್ಮ ಹೊಸ ಆಟ ಆಡ್ತಾಳಾ? ಎಲ್ಲಾ ಪ್ರಶ್ನೆಗಳ ಉತ್ತರಕ್ಕೆ ಸೀರಿಯಲ್ ನೋಡಬೇಕಾಗಿದೆ.

Leave a Comment