Puttakkana Makkalu : ಜೀ ಕನ್ನಡ (Zee Kannada) ವಾಹಿನಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿ ಹೊಸ ಹೊಸ ಟ್ವಿಸ್ಟ್ ಗಳೊಂದಿಗೆ ಪ್ರೇಕ್ಷಕರನ್ನ ಇನ್ನಷ್ಟು ತನ್ನ ಕಡೆ ಸೆಳೆಯುತ್ತಾ ಯಶಸ್ಸಿನ ಓಟವನ್ನು ನಡೆಸುತ್ತಿದೆ. ಸೀರಿಯಲ್ ಕಥೆಯಲ್ಲಿ ಮೂಡಿಬಂದಿರುವ ಹೊಸ ಟ್ವಿಸ್ಟ್ ನಲ್ಲಿ ಸ್ನೇಹಾಳನ್ನ ಕಳೆದುಕೊಂಡು ನೋವಿನಲ್ಲಿದ್ದ ಪುಟ್ಟಕ್ಕನ ಮನೆಗೆ, ಆಕೆಯ ಮಡಿಲಿಗೆ ಸತ್ತಳೆಂದು ಭಾವಿಸಿದ್ದ ಹಿರಿ ಮಗಳು ಸಹನಾ ಮರಳಿ ಬಂದಿದ್ದಾಳೆ. ಆದರೆ ಪುಟ್ಟಕ್ಕನಿಗೆ ಹಿರಿಮಗಳು ಬಂದಿದ್ದು ಖುಷಿಯನ್ನು ನೀಡಿಲ್ಲ ಬದಲಾಗಿ ಪುಟ್ಟಕ್ಕ ಕೆಂಡಾಮಂಡಲವಾಗಿದ್ದಾಳೆ.
ಸ್ನೇಹಾನ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಮರಳಿದ ಹಿರಿಮಗಳು ಸಹನಾಳನ್ನ ನೋಡಿ ತೀವ್ರ ಅಸಮಾಧಾನಗೊಂಡಿದ್ದಾಳೆ ಪುಟ್ಟಕ್ಕ. ಅಲ್ಲದೆ ದೊಡ್ಡ ಮಗಳನ್ನು ನೋಡಿ ಪುಟ್ಟಕ್ಕ ಮೂರ್ಚೆ ಹೋಗಿದ್ದಾಳೆ. ನಂತರ ಎಚ್ಚರಗೊಂಡ ಪುಟ್ಟಕ್ಕ ಸಹನಾಳನ್ನ ನೋಡಿ ಅವಳ ಕೆನ್ನೆಗೆ ಕೋಪದಿಂದ ಬಾರಿಸಿದ್ದಾಳೆ. ಬದುಕಿದ್ದರೂ ಸತ್ತ ಹಾಗೆ ನಾಟಕ ಮಾಡಿದ್ಯಾ ಅಂತ ಮಗಳ ಮೇಲೆ ಸಿಟ್ಟಾಗಿದ್ದಾಳೆ.
ಮಗಳನ್ನು ಕಳೆದುಕೊಂಡಿರುವ ದುಃಖದಲ್ಲಿರುವ ತಾಯಿಯಾಗಿ ಪುಟ್ಟಕ್ಕನ ಪಾತ್ರದಲ್ಲಿರುವ ನಟಿ ಉಮಾಶ್ರೀ (Umashree) ಅವರ ಮನೋಜ್ಞ ಅಭಿನಯಕ್ಕೆ ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಕಾಮೆಂಟ್ ಗಳ ಮೂಲಕ ಉಮಾಶ್ರೀ ಅವರ ಅಭಿನಯವನ್ನು ಹಾಡಿ ಹೊಗಳುತ್ತಿದ್ದಾರೆ. ಉಮಾಶ್ರೀ ಅವರ ನಟನೆಗೆ ಅವರೇ ಸರಿ ಸಾಟಿ ಎಂದು ಹೇಳುತ್ತಿದ್ದಾರೆ.
ಕಷ್ಟಪಟ್ಟು ಬೆಳೆಸಿದ ಹೆಣ್ಣು ಮಕ್ಕಳನ್ನು ಕಳೆದುಕೊಂಡ ತಾಯಿಯ ದುಃಖ ಹೇಗಿರುತ್ತದೆ ಅನ್ನೋದನ್ನ ಉಮಾಶ್ರೀ ಅವರು ಬಹಳ ಸಹಜವಾಗಿ ನಟಿಸಿ ತೋರಿಸುತ್ತಿದ್ದಾರೆಂದು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಹೊಸ ಪ್ರೊಮೋ ಎಲ್ಲರ ಗಮನ ಸೆಳೆದಿದೆ. ಸೀರಿಯಲ್ ನಲ್ಲಿ ಸ್ನೇಹ ಪತ್ರ ಕೊನೆಯಾಗಿದ್ದು ಮಾತ್ರ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.
Bigg Boss ಮನೆಯಲ್ಲಿ ದೀಪಾವಳಿ ಸಂಭ್ರಮದ ನಡುವೆ ಭಾವುಕರಾದ ಮನೆ ಮಂದಿ