Puttakkana Makkalu: ಪುಟ್ಟಕ್ಕನಿಗೆ ಸಿಕ್ಕಿಬಿಟ್ಲು ಸಹನಾ, ಇದು ಸಿಂಗಾರಮ್ಮನ ಕಥೆ ಮುಗಿಯೋ ಹೊತ್ತು

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಈ ವಾರ ಟಿ ಆರ್ ಪಿ ಯಲ್ಲಿ ಹಿಂದಕ್ಕೆ ಬಿದ್ದಿದೆ. ಆದರೆ ಹೊಸ ಹೊಸ ಟ್ವಿಸ್ಟ್ ಗಳು ಮುಂದಿನ ವಾರಗಳಲ್ಲಿ ಮತ್ತೆ ಟಾಪ್ ಐದಕ್ಕೆ ಪ್ರವೇಶ ನೀಡುವುದಾ, ಮತ್ತೆ ಮೊದಲನೇ ಸ್ಥಾನವನ್ನು ಪಡೆಯುವುದಾ? ಎನ್ನುವುದನ್ನ ಕಾದು ನೋಡಬೇಕಾಗಿದೆ. ಈಗ ಇವೆಲ್ಲವುಗಳ ನಡುವೆ ಸೀರಿಯಲ್ ನ ಹೊಸ ಟ್ವಿಸ್ಟ್ ಎಲ್ಲರ ಗಮನ ಸೆಳೆದಿದೆ.

ಮಗಳು ಬದುಕಿದ್ದಾಳೆ ಎನ್ನುವ ನಂಬಿಕೆಯಿಂದ ಮಗಳನ್ನು ಹುಡುಕಿಕೊಂಡು ಪುಟ್ಟಕ್ಕ ಬೆಂಗಳೂರು ನಗರಕ್ಕೆ ಬಂದಿದ್ದಾಳೆ. ಮತ್ತೊಂದು ಕಡೆ ಸಿಂಗಾರಮ್ಮ ಪುಟ್ಟಕ್ಕನ ಮೇಲೆ ಅಪವಾದ ಬರುವ ಹಾಗೆ ಮಾಡಿದ್ದಾಳೆ. ಮನೆಯಲ್ಲಿ ಪುಟ್ಟಕ್ಕ ಇಲ್ಲದ ವಿಚಾರ ತಿಳಿದ ಕಂಠಿ ಗೆಳೆಯರ ಜೊತೆಗೆ ಪುಟ್ಟಕ್ಕನ್ನ ಹುಡುಕ್ಕೊಂಡು ಬಂದಿದ್ದಾನೆ.

ಈ ವೇಳೆ ಒಂದು ದೇವಸ್ಥಾನದಲ್ಲಿ ಪುಟ್ಟಕ್ಕ ಕಂಠಿ (Kanthi) ಕಣ್ಣಿಗೆ ಬಿದ್ದಿದ್ದಾಳೆ. ಅಲ್ಲದೇ ತಾನು ಬಂದಿರುವುದು ಏಕೆ ಎನ್ನುವುದನ್ನು ತಿಳಿಸಿದ್ದಾಳೆ. ಇದೇ ವೇಳೆ ಗುಡಿಯಲ್ಲಿ ಮ್ಯಾಕ್ಸ್ ವೆಲ್ ಜೊತೆಗೆ ಬಂದಿದ್ದ ಸಹನಾ ಅಮ್ಮನನ್ನ ನೋಡಿ ಕೊನೆಗೂ ತನ್ನ ತಾಯಿಯ ಮುಂದೆ ಬಂದಿದ್ದಾಳೆ. ಪುಟ್ಟಕ್ಕ ಮಗಳನ್ನು ನೋಡಿ ಖುಷಿಯಾಗಿದ್ದಾಳೆ.

ಇನ್ನೊಂದು ಕಡೆ ಸಿಂಗಾರಮ್ಮ ಸ್ನೇಹ ವಾಪಸ್ ಬರೋ ಹಾಗೆ ಮಾಡೋ ಕುತಂತ್ರ ಮಾಡಿದ್ದಾಳೆ. ಈಗ ಕಂಠಿ ಪುಟ್ಟಕ್ಕ ಸಿಕ್ಕಿರೋ ವಿಚಾರ ಸ್ನೇಹ ಹೇಳಿ ಅವಳನ್ನ ತಡೀತಾನಾ?? ಸಹನಾ (Sahana) ಬಂಗಾರಮ್ಮ ತನ್ನ ಹೊಟೇಲ್ ಗೆ ಬಂದ ವಿಚಾರವನ್ನು, ಜೈಲಿನ ಬಳಿ ನೋಡಿದ್ದನ್ನ ಕಂಠಿಗೆ ಹೇಳ್ತಾಳಾ? ಅನ್ನೋದನ್ನ ಕಾದು ನೋಡಬೇಕಾಗಿದೆ. ‌

Leave a Comment