Puttakkana Makkalu: ಕಥೆಯಲ್ಲಿ ಮತ್ತೆ ಹೊಸ ಟ್ವಿಸ್ಟ್ ಗಳು, ಕಂಠಿ ಮತ್ತು ಸಹನಾಗೆ ಎದುರಾಯ್ತು ಹೊಸ ಸವಾಲು

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಈ ವಾರ ಟಾಪ್ ಐದರ ರೇಸ್ ಗೆ ಎಂಟ್ರಿ ಕೊಡುತ್ತಾ? ಮತ್ತೆ ಟಾಪ್ ಒನ್ ಸೀರಿಯಲ್ ಆಗುತ್ತಾ ಅನ್ನೋ ನಿರೀಕ್ಷೆಗಳು ಅಭಿಮಾನಿಗಳಿಗೆ ಖಂಡಿತ ಇದೆ. ಕಳೆದ ವಾರ ಬಹಳಷ್ಟು ಸಮಯದ ನಂತರ ಇದ್ದಕ್ಕಿದ್ದ ಹಾಗೆ ಪುಟ್ಟಕ್ಕನ ಮಕ್ಕಳು ಒಂದೇ ಸಮಯಕ್ಕೆ ಟಾಪ್ ಒನ್ ನಿಂದ ಕೆಳಗೆ ಬಂದಿದ್ದು ಮಾತ್ರವಲ್ಲ ಟಾಪ್ ಐದರಿಂದಲೇ ಹೊರಕ್ಕೆ ಬಂದಿದ್ದು ಶಾಕಿಂಗ್ ಎನಿಸಿದೆ.

ಇನ್ನು ಈ ವಾರ ಒಂದಷ್ಟು ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರ ಗಮನವನ್ನ ಸೆಳೆದಿದೆ. ಈಗ ಮತ್ತೆ ಕಥೆಯಲ್ಲಿ ರೋಚಕ ತಿರುವುಗಳು ಎದುರಾಗೋ ಸೂಚನೆ ಸಿಕ್ಕಿದೆ.‌ ಹೌದು, ಮುರುಳಿ ಮೇಷ್ಟ್ರು ಎರಡನೇ ಮದುವೆಗೆ ಒಪ್ಪಿದ್ದಾರೆ. ಈ ವೇಳೆ ಅಡುಗೆ ಮಾಡೋ ಜವಾಬ್ದಾರಿ ಸಹನಾಗೆ (Sahana) ಸಿಕ್ಕಿದೆ. ವಿನುತ ಗೊತ್ತಿಲ್ಲದೇನೇ ಕೇಟರಿಂಗ್ ಆರ್ಡರ್ ನ ಸಹನಾಗೆ ನೀಡಿದ್ದಾಗಿದೆ.

ಮತ್ತೊಂದು ಕಡೆ ಡಿಸಿ ಆಗೇ ಆಗ್ತೀನಿ ಅಂತಿದ್ದ ಸ್ನೇಹ (Sneha) ಕನಸಿಗೆ ಕಲ್ಲು ಹಾಕೋದಕ್ಕೆ ಸಿಂಗಾರಮ್ಮ ಎಲ್ಲಾ ಸಿದ್ಧತೆ ಮಾಡಿದ್ದು, ಎಂ ಎಲ್ ಎ ನೆರವಿನಿಂದ ಅಧಿಕಾರಿಗಳಿಗೆ ಲಂಚ ನೀಡಿ ಸ್ನೇಹಾಳನ್ನ ಪರೀಕ್ಷೆಯಲ್ಲಿ ಅನರ್ಹ ಮಾಡೋದಕ್ಕೆ ಎಲ್ಲಾ ತಯಾರಿ ನಡೆದಿದೆ. ಈ ವಿಷಯ ಈಗ ಕಂಠಿಗೂ (Kanti) ಸಹಾ ಗೊತ್ತಾಗಿದೆ.‌

ಈಗ ಮುರುಳಿ ಮೇಷ್ಟ್ರ ಮದುವೆಗೆ ಊಟದ ಆರ್ಡರ್ ತಗೊಂಡ ಸಹನಾ ಮತ್ತೆ ಮುರುಳಿ ಕಣ್ಮುಂದೆ ಬರೋ ಜಾಗೆ ಆಗುತ್ತಾ? ಸ್ನೇಹ ಕನಸಿಗೆ ಕೊಳ್ಳಿ ಇಡೋ ಪ್ರಯತ್ನವನ್ನು ಕಂಠಿ ಹೇಗಾದ್ರು ಮಾಡಿ ತಡೀತಾನ? ಅನ್ನೋ ಕುತೂಹಲ ಮೂಡಿದ್ದು ಉತ್ತರಕ್ಕಾಗಿ ಕಾದು ನೋಡಬೇಕಾಗಿದೆ.

Viral Video: ಭಾರೀ ಮಳೆಗೆ ನಡುಗಿದ ವಡೋದರಾ, ಮನೆ ಮಹಡಿ ಮೇಲೆ ವಿರಮಿಸಿದ ಮೊಸಳೆ; ವೀಡಿಯೋ ವೈರಲ್

Leave a Comment