Puttakkana Makkalu Serial: ಶುರುವಾಗುತಿದ್ಯಾ ಪುಟ್ಟಕ್ಕನ‌ ಮಕ್ಕಳ ಹೊಸ ಪರ್ವ? ಪ್ರೊಮೊದಲ್ಲೇ ಸಿಕ್ತು ಸುಳಿವು

Written by Soma Shekar

Published on:

---Join Our Channel---

Puttakkana Makkalu Serial : ಪುಟ್ಟಕ್ಕನ ಮಕ್ಕಳು ಸೀರಿಯಲ್ (Puttakkana Makkalu Serial) ಕಳೆದ ವಾರ ಕಡಿಮೆ ಟಿಆರ್‌ಪಿ ಇಂದಾಗಿ ಟಾಪ್ ಐದರಿಂದ ಹೊರಗೆ ಬಂದಾಗಿದೆ. ಅದರ ಬೆನ್ನಲ್ಲೇ ಈಗ ಸೀರಿಯಲ್ ನ ಕಥೆಯಲ್ಲಿನ ಹೊಸ ಹೊಸ ಬೆಳವಣಿಗೆಗಳು ಪ್ರೇಕ್ಷಕರ ಗಮನವನ್ನು ಸೆಳೆದಿದ್ದು, ಈ ವಾರ ಮತ್ತೆ ಪುಟ್ಟಕ್ಕನ ಮಕ್ಕಳು ತನ್ನ ಹಿಂದಿನ ಸ್ಥಾನವನ್ನು ಪಡೆದುಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ. ‌

ವಾಹಿನಿ ಶೇರ್ ಮಾಡಿರೋ ಹೊಸ ಪ್ರೊಮೊ ಗಳನ್ನು ನೋಡಿದಾಗ ಕಥೆಯಲ್ಲಿ ಎರಡನೇ ಅಧ್ಯಾಯದ ಆರಂಭಕ್ಕೆ ಸಜ್ಜಾಗಿದೆಯಾ ? ಎನ್ನುವಂತೆ ಕಂಡಿದೆ.‌ ಪ್ರೊಮೋಗಳಲ್ಲಿನ ದೃಶ್ಯಗಳನ್ನು ನೋಡಿದ ಪ್ರೇಕ್ಷಕರು ಸಹಾ ಖುಷಿಯಾಗಿದ್ದಾರೆ. ಹಾಗಾದರೆ ಏನದು ಹೊಸ ಟ್ವಿಸ್ಟ್ ಗಳು ಅನ್ನೋದನ್ನು ನೋಡೋಣ‌ ಬನ್ನಿ.

ಏನಾದ್ರೂ ಸಾಧನೆ ಮಾಡಬೇಕಂತ ಸಿಟಿಗೆ ಬಂದ ಸಹನಾ (Sahana) ಸ್ವಂತ ಕಾಲಿನ ಮೇಲೆ ನಿಲ್ಲೋದಕ್ಕೆ ಈಗ ತನ್ನದೇ ಸ್ವಂತ ಫುಡ್ ಟ್ರಕ್ ಆರಂಭಿಸಿದ್ದಾಳೆ. ಮತ್ತೊಂದು ಕಡೆ ಸ್ನೇಹ (Sneha) ಕೂಡಾ ದೆಹಲಿಯಲ್ಲಿ ಸಂದರ್ಶನಕ್ಕೆ ಹಾಜರಾಗಿ ಯಶಸ್ಸು ಪಡೆದು ಬಂದಿದ್ದು ಡಿಸಿ ಆಗೋದು ಪಕ್ಕಾ ಎನ್ನುವ ಸುಳಿವನ್ನು ನೀಡಾಗಿದೆ.

ಪುಟ್ಟಕ್ಕ ಕೂಡಾ ಸಹನಾ ಇನ್ನಿಲ್ಲ ಎನ್ನುವ ಸತ್ಯ ಒಪ್ಪಿದ್ದಾಗಿದೆ. ಅಲ್ಲದೇ ಮುರುಳಿ ಮೇಷ್ಟ್ರಿಗೆ (Muruli Mestru) ವಿನುತ ಜೊತೆಗೆ ಮದುವೆ ಆಗಿ ಅಂತ ಹೇಳಿದ್ದು, ಮುರುಳಿ ಕೂಡಾ ಅದಕ್ಕೆ ಒಪ್ಪಿಗೆ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸಿಂಗಾರಮ್ಮನ ಅಸಲಿಯತ್ತು ಪತ್ತೆ ಮಾಡಿ ಬಂಗಾರಮ್ಮನ ಮರಳಿ ಕರ್ಕೊಂಡು ಬರೋದು ಯಾವಾಗ ಅನ್ನೋದನ್ನ ಕಾದು ನೋಡಬೇಕಾಗಿದೆ.

Hamsa Lekha: ಕನ್ನಡದ ಹೆಸರಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ್ರಾ ಹಂಸಲೇಖ? ಹೊರ ಬಿತ್ತು ಆಕ್ರೋಶ

Leave a Comment