Puttakkana Makkalu : ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ. ಇತ್ತೀಚಿನ ಹೊರ ಹೊಸ ತಿರುವುಗಳು ಕಥೆಗೆ ಹೊಸ ದಿಕ್ಕನ್ನ ನೀಡಿದ್ದು, ಪ್ರೇಕ್ಷಕರಿಗೆ ಇನ್ನಷ್ಟು ಮನರಂಜನೆ ನೀಡುತ್ತಿದೆ. ಹೊಸ ಪಾತ್ರಗಳ ಎಂಟ್ರಿ ಕುತೂಹಲವನ್ನು ಕೆರಳಿಸಿದೆ. ಆದರೆ ಇವೆಲ್ಲವುಗಳ ನಡುವೆ ಪ್ರಮುಖ ಪಾತ್ರವೊಂದು ಕಳೆದ ಕೆಲವು ವಾರಗಳಿಂದಲೂ ನಾಪತ್ತೆಯಾಗಿರುವ ವಿಚಾರವು ಸಹಾ ಎಲ್ಲರ ಗಮನಕ್ಕೆ ಬಂದಿದೆ.
ಹೌದು, ಪುಟ್ಟಕ್ಕನ ಸವತಿ ರಾಜಿ ಪಾತ್ರ ಇತ್ತೀಚಿನ ದಿನಗಳಲ್ಲಿ ಕಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಆ ಪಾತ್ರದಲ್ಲಿದ್ದ ನಟಿ ಹಂಸ (Actress Hamsa) ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದು. ಅವರು ಬಿಗ್ ಬಾಸ್ (BBK 11) ಮನೆಯಿಂದ ಹೊರ ಬಂದ ಮೇಲೆ ನಟಿ ಸೀರಿಯಲ್ ತಂಡಕ್ಕೆ ಸರಿಯಾದ ಮಾಹಿತಿ ನೀಡದೇ ಸೀರಿಯಲ್ ನಿಂದ ಹೊರ ಬಂದಿದ್ದರು ಎನ್ನುವ ಸುದ್ದಿಗಳಾದವು. ಅಲ್ಲದೇ ನಿರ್ದೇಶಕರು ಈ ಬಗ್ಗೆ ದೂರು ನೀಡಿರುವುದಾಗಿಯೂ ಹೇಳಿದ್ದರು.
ಹಾಗಾದರೆ ಸೀರಿಯಲ್ ನಲ್ಲಿ ರಾಜಿ ಪಾತ್ರ ರೀ ಎಂಟ್ರಿ ಯಾವಾಗ ಎನ್ನುತ್ತಿದ್ದ ಪ್ರೇಕ್ಷಕರಿಗೆ ಹೊಸ ಪ್ರೊಮೊದಲ್ಲಿ ಉತ್ತರ ಕಂಡಿದೆ. ಹೌದು, ಪುಟ್ಟಕ್ಕನ ಗಂಡ ಕಾರ್ಯವೊಂದನ್ನ ಮುಗಿಸಿ ನದಿ ಸ್ನಾನಕ್ಕೆಂದು ನೀರಿಗೆ ಇಳಿದ ಸಂದರ್ಭದಲ್ಲಿ ಹೊಸ ಮುಖವೊಂದು ನೀರಿಂದ ಮೇಲೆ ಎದ್ದಿದೆ. ಇದನ್ನ ನೋಡಿದ ನೆಟ್ಟಿಗರು ಯಾವುದು ಈ ಹೊಸ ಪಾತ್ರದ ಎಂಟ್ರಿ ಎನ್ನುತ್ತಿದ್ದಾರೆ.
ಇದೇ ವೇಳೆ ಒಂದಷ್ಟು ಜನ ಕಾಮೆಂಟ್ ಗಳನ್ನು ಮಾಡುತ್ತಾ, ಹೊಸ ಪಾತ್ರ ಏನಲ್ಲ, ರಾಜಿ ರೀ ಎಂಟ್ರಿ ಆಗ್ತಿದೆ ಎಂದಿದ್ದಾರೆ. ನಟಿ ಹಂಸ ಅವರ ಬದಲಾಗಿ ಬೇರೊಬ್ಬ ನಟಿ ಆ ಪಾತ್ರಕ್ಕೆ ಬಂದಿರೋ ಹಾಗಿದೆ ಎನ್ನುತ್ತಿದ್ದಾರೆ. ನೆಟ್ಟಿಗರು ಮಾಡ್ತಿರೋ ಊಹೆ ಸರಿಯಾಗಿದೆಯಾ? ಅನ್ನೋದು ಇವತ್ತಿನ ಎಪಿಸೋಡ್ ನಲ್ಲಿ ಗೊತ್ತಾಗಲಿದೆ.