Kannada Serials: ಕಾತರರಾಗಿ ಕಾಯ್ತಿದ್ದ ಪ್ರೇಕ್ಷಕರಿಗೆ ಒಂದೇ ರೀತಿಯ ಶಾಕ್ ಕೊಟ್ಟ ಸೀರಿಯಲ್ ಗಳು; ನಿರೀಕ್ಷೆ ಸುಳ್ಳಾಯ್ತು

Written by Soma Shekar

Published on:

---Join Our Channel---

Kannada Serials: ಕಿರುತೆರೆಯ ಧಾರಾವಾಹಿಗಳಲ್ಲಿ (Kannada Serials) ಪ್ರೇಕ್ಷಕರ ಕುತೂಹಲವನ್ನು ಕೆರಳಿಸೋದಕ್ಕೆ ಕಥೆಯಲ್ಲಿ ಟ್ವಿಸ್ಟ್ ಗಳನ್ನ ಇಡೋದು ಸಾಮಾನ್ಯವಾದ ವಿಚಾರ. ಆದರೆ ಈ ಸಲ ಒಂದೇ ಸಮಯದಲ್ಲಿ ಎರಡು ವಾಹಿನಿಗಳ ಎರಡು ಜನಪ್ರಿಯ ಸೀರಿಯಲ್ ಗಳ ಬಹಳ ಮುಖ್ಯವಾದ ಘಟ್ಟ‌ ಅಂತ ಪ್ರೊಮೊ ನೋಡಿ ಖುಷಿಯಾಗಿದ್ದವರಿಗೆ ಅನಂತರ ಶಾಕ್ ಜೊತೆಗೆ ಬೇಸರ ಸಹಾ ಆಗಿದೆ.

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಸಹನಾಳನ್ನ ಹುಡುಕಿಕೊಂಡು ಬಂದ ಪುಟ್ಟಕ್ಕನಿಗೆ ದೇವಸ್ಥಾನದಲ್ಲಿ ಸಹನಾ ಸಿಕ್ಕಿ ತಾಯಿ ಮಗಳು ಒಂದಾಗೋ ಕ್ಷಣವನ್ನು ಪ್ರೊಮೋದಲ್ಲಿ ನೋಡಿದ್ದವರಿಗೆ ನಂತರ ಸೀರಿಯಲ್ ನಲ್ಲಿ ಶಾಕ್ ಸಿಕ್ಕಿದೆ. ಯಾಕಂದ್ರೆ ಅದು ಅಷ್ಟು ಕೂಡಾ ಕನಸಾಗಿತ್ತು.

ಇನ್ನು ರಾಮಾಚಾರಿ (Ramachari) ಸೀರಿಯಲ್ ನಲ್ಲಿ ವಾಪಸ್ ಬಂದ ಕಿಟ್ಟಿ ಅಣ್ಣನ ಮದುವೆ ಮಾಡಿಸಿ ಮನೆಗೆ ಕರ್ಕೊಂಡು ಬಂದಾಗ, ವೈಶಾಖ ಬಗ್ಗೆ ಎಲ್ಲಾ ಸತ್ಯವನ್ನು ಹೇಳ್ತಾನೆ. ಇದನ್ನ ನೋಡಿದ ಪ್ರೇಕ್ಷಕರು ಸಹಾ ಖುಷಿಯಾಗಿದ್ದರು. ವೈಶಾಖ ಮತ್ತು ಮಾನ್ಯತ ಆಟಕ್ಕೆ ತೆರೆ ಬಿತ್ತು ಅನ್ಕೊಂಡಿದ್ರು ಆದ್ರೆ ಇಲ್ಲೂ ಕೂಡಾ ಟ್ವಿಸ್ಟ್ ಅನ್ನೋ ಹಾಗೆ ಆ ಇಡೀ ದೃಶ್ಯ ಕನಸಾಗಿತ್ತು.

ಹೀಗೆ ಒಂದು ಕಡೆ ಪುಟ್ಟಕ್ಕನ ಮಕ್ಕಳು ಇನ್ನೊಂದು ಕಡೆ ರಾಮಾಚಾರಿ ಎರಡರಲ್ಲೂ ಏನೋ ಒಂದು ಹೊಸ ವಿಶೇಷಕ್ಕಾಗಿ ಕಾಯ್ತಿದ್ದವರಿಗೆ ಎರಡೂ ಕಡೆ ಭರ್ಕರಿ ಶಾಕ್ ಮಾತ್ರ ಎದುರಾಗಿದೆ. ಪ್ರೊಮೊ ಹೊರ ಬಂದಾಗಲೇ ಕೆಲವರು ಕಾಮೆಂಟ್ ಮಾಡಿ ಇದೆಲ್ಲಾ ನಿಜ ಅಲ್ಲ, ಕನಸಾಗಿರುತ್ತೆ ಎಂದು ಹೇಳಿದ್ದ ಮಾತುಗಳೇ ಈಗ ನಿಜವಾಗಿದೆ.

Leave a Comment