Preity Zinta: ವರ್ಷಗಳ ನಂತರ ನಟನೆಗೆ ಕಮ್ ಬ್ಯಾಕ್; ಸ್ಟಾರ್ ನಟಿಯ ನಿರ್ಧಾರಕ್ಕೆ ಅಭಿಮಾನಿಗಳು ಥ್ರಿಲ್

Written by Soma Shekar

Published on:

---Join Our Channel---

Preity Zinta : ಬಾಲಿವುಡ್ ನಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದಿರುವ ನಟಿ ಪ್ರೀತಿ ಜಿಂಟಾ (Preity Zinta) ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದ ದಿನಗಳಲ್ಲಿ ಎಲ್ಲಾ ಸ್ಟಾರ್ ಗಳ ಜೊತೆಗೆ ನಾಯಕಿಯಾಗಿ ನಟಿಸಿ ಸ್ಟಾರ್ ನಟಿಯಾಗಿ ಹೆಸರನ್ನು ಮಾಡಿದವರು. ಆದರೆ ಮದುವೆಯ ನಂತರ ನಟಿ ವಿದೇಶದಲ್ಲಿ ನೆಲೆಸಿದ್ದು, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಐಪಿಎಲ್ ವಿಚಾರವಾಗಿ ನಟಿ ಆಗಾಗ ಭಾರತಕ್ಕೆ ಬರುತ್ತಾರೆ. ನಟಿಯ ಅಭಿಮಾನಿಗಳು ಮಾತ್ರ ಪ್ರೀತಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. .

ಇದೀಗ ನಟಿ ತಮ್ಮ ಅಭಿಮಾನಿಗಳ ನಿರೀಕ್ಷೆಯನ್ನು ನಿಜ ಮಾಡಲು ಸಜ್ಜಾಗಿದ್ದು, ಬಾಲಿವುಡ್ ನ ಹಿರಿಯ ಸ್ಟಾರ್ ನಟ ಸನ್ನಿ ಡಿಯೋಲ್ (Sunny Deol) ಜೊತೆಗೆ ಸಿನಿಮಾವೊಂದರಲ್ಲಿ ಡ್ಯುಯೆಟ್ ಮಾಡಲು ಪ್ರೀತಿ ತಯಾರಿ ನಡೆಸಿದ್ದಾರೆ. ಗದರ್ 2 (Gadar 2) ಸಿನಿಮಾದ ಮೂಲಕ ದೊಡ್ಡ ಸಕ್ಸಸ್ ನ ಪಡೆದುಕೊಂಡಿರೋ ನಟ ಸನ್ನಿ ಡಿಯೋಲ್ ತಮ್ಮ ಹೊಸ ಸಿನಿಮಾದಲ್ಲಿ ಪ್ರೀತಿ ಜಿಂಟಾ ಜೊತೆಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ.

ಸನ್ನಿ ಮತ್ತು ಪ್ರೀತಿ ಜೊತೆಯಾಗಿ ನಟಿಸುತ್ತಿರುವ ಈ ಸಿನಿಮಾಕ್ಕೆ ‘ಲಾಹೋರ್ 1947’ (Lahore 1947) ಎನ್ನುವ ಶೀರ್ಷಿಕೆಯನ್ನು ನೀಡಲಾಗಿದ್ದು, ಸಿನಿಮಾವನ್ನು ರಾಜ್‍ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದು, ಬಾಲಿವುಡ್ ನ ಸ್ಟಾರ್ ನಟ ಅಮೀರ್ ಖಾನ್ (Amir Khan) ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಚಿತ್ರೀಕರಣದ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.

ಪ್ರೀತಿ ಜಿಂಟಾ ಮತ್ತು ಸನ್ನಿ ಡಿಯೋಲ್ ಇಬ್ಬರೂ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಇವರ ನಡುವೆ ಒಂದು ಉತ್ತಮವಾದ ಸ್ನೇಹ ಬಾಂಧವ್ಯ ಇದ್ದು, ಈಗ ವರ್ಷಗಳ ನಂತರ ಈ ಜೋಡಿ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದು, ಪ್ರೀತಿ ಜಿಂಟಾ ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಖುಷಿಯನ್ನು ನೀಡಿದೆ.

Leave a Comment