Prashanth Sambargi: ಚಂದನ್ ನಿವೇದಿತಾ ಡಿವೋರ್ಸ್ ಬಗ್ಗೆ ಪ್ರಶಾಂತ್ ಸಂಬರ್ಗಿ ಅಚ್ಚರಿಯ ಹೇಳಿಕೆ, ಸ್ವಿಫ್ಟ್ ಬಿಟ್ಟು ಬೆನ್ಜ್ ಅಂದಿದ್ಯಾಕೆ ?

Written by Soma Shekar

Published on:

---Join Our Channel---

Prashanth Sambargi: ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Nivedita Gowda) ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಸ್ಪರ್ಧಿಯಾಗಿ ಹೆಸರನ್ನು ಮಾಡಿರುವ ಪ್ರಶಾಂತ್ ಸಂಬರಗಿ (Prashanth Sambargi) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡು, ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರ ಆಗಲು ಚಿಕ್ಕದಾದ ಸಂಶಯ ಸಾಕು ಎಂದು ಬರೆದುಕೊಂಡು ಚಂದನ್ ಅವರ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.‌

ಅದು ಮಾತ್ರವೇ ಅಲ್ಲದೇ ಅವರು ಯೂಟ್ಯೂಬ್ ಚಾನೆಲ್ ನ ಸಂದರ್ಶನ ಒಂದರಲ್ಲಿ ಒಂದಷ್ಟು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.‌ ನನಗೆ ಚಂದನ್ ಆತ್ಮೀಯ ಗೆಳೆಯ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಚಂದನ್ ನಾಯಕ. ನಾನು ಅದರಲ್ಲಿ ಪೊಲೀಸ್ ಪಾತ್ರವನ್ನು ಮಾಡಿದ್ದು 15 ದಿನಗಳ ಕಾಲ ಒಟ್ಟಿಗೆ ಶೂಟಿಂಗ್ ಮಾಡಿದ್ದೇವೆ. ಖುಷಿಪಟ್ಟಿದ್ದೇವೆ ಹೊಡೆದಾಡಿಕೊಂಡಿದ್ದೇವೆ.

ಚಂದನ್ ಮತ್ತು ನಿವೇದಿತಾ ಸ್ಯಾಂಡಲ್ವುಡ್ ನ ಪವರ್ ಕಪಲ್. ಆದರೆ ಹೀಗೆ ಅವರು ಏಕಾಏಕಿ ದೂರಾದ ವಿಷಯ ಕೇಳಿ ಎಲ್ಲರೂ ಶಾಕ್ ಆದರು. ಆದರೆ ನನಗೆ ಈ ವಿಚಾರ ಹೊಸಸಲ್ಲ ನನಗಿದು ಒಂದು ವರ್ಷದ ಹಿಂದೆಯೇ ಗೊತ್ತಿತ್ತು ಎಂದಿದ್ದಾರೆ. ದಸರಾ ಸಂದರ್ಭದಲ್ಲಿ ಚಂದನ್ ಪ್ರಪೋಸ್ ಮಾಡಿರುವ ಬಗ್ಗೆ ನನ್ನ ಧಿಕ್ಕಾರ ಕೂಡಾ ಇತ್ತು. ಆದರೂ ಕೊನೆಗೆ ಕ್ಷಮಿಸಿ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದೆ.

ಈ ತಿಂಗಳಲ್ಲಿ ಸಿನಿಮಾ ಪ್ರಮೋಷನ್ ಗೆ ಚಂದನ್ ಬರಲಿಲ್ಲ. ಆರು ತಿಂಗಳ ಹಿಂದೆಯೇ ಚಂದನ್ ಬಗ್ಗೆ ಹಿಂಟ್ ಸಿಕ್ಕಿತ್ತು ಚಂದನ್ ಮನಸ್ಥಿತಿ ಸರಿ ಇಲ್ಲ ಎಂದು. ಚಂದನ್ ಅಮೆರಿಕಾಗೆ ಮ್ಯೂಸಿಕ್ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಿವೇದಿತಾ ಹೋಗಲಿಲ್ಲ. ನನ್ನ ಮೊದಲ ಪ್ರಶ್ನೆ ಇದ್ದಿದ್ದು ಅವಳನ್ನ ಯಾಕೆ ಕರ್ಕೊಂಡು ಹೋಗ್ತಿಲ್ಲ ಅಂತ. ಬೇರೆ ಟ್ರಿಪ್ ಗೆ ನೀನು ಕರ್ಕೊಂಡು ಹೋಗಿಲ್ಲ, ಬೇರೆ ಅವ್ರು ಕರ್ಕೊಂಡು ಹೋಗ್ತಾರೆ.

ನೀನು ನಿನ್ನ ಎಮೋಷನ್ಸ್ ಗೆ ಸ್ಪಂದಿಸಿಲ್ಲ ಅಂದರೆ ಬೇರೆ ಯಾರೋ ಕೊಡ್ತಾರೆ. ನೀನು ನಿನ್ನ ವಸ್ತುವನ್ನು ಕಾಪಾಡಿಕೋ ಅಂತ ಅನೇಕ ಬಾರಿ ಹೇಳಿದ್ದೇನೆ. ನಿನ್ನೆ ನಗ್ತಾನೆ ಬಂದು ಹೋದರು. ಆದರೆ ಚಂದನ್ ಗೆ ನೋವಾಗಿದೆ. ಇರೋ ಸ್ವಿಫ್ಟ್ ಕಾರನ್ನ ಬಿಟ್ಟು ಬೆನ್ಜ್ ಕಾರ್ ಬೇಕಂದ್ರೆ ನಾವೇನು ಮಾಡೋದಕ್ಕೆ ಆಗೋದಿಲ್ಲ. ಬೆಸ್ಟ್ ಹಿಂದೆ ಹೋಗಿರುವಂತಹವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತವರು ಯಾರು ಅಂತ ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆ.

ಚಂದನ್ ಗೆ ನಮ್ಮ ಬ್ರದರ್ಲಿ ಸಪೋರ್ಟ್ ಮತ್ತು ಎಮೋಷನಲ್ ಸಪೋರ್ಟ್ ಇದೆ ಎಂದು ಪ್ರಶಾಂತ್ ಸಂಬರಗಿ ಹೇಳುವ ಮೂಲಕ ಶೀಘ್ರದಲ್ಲೇ ಚಂದನ್ ಮತ್ತು ನಿವೇದಿತಾ ಅವರ ವಿಚ್ಛೇದನಕ್ಕೆ ಸ್ಪಷ್ಟ ಕಾರಣ ಗೊತ್ತಾಗುತ್ತೆ ಅನ್ನೋ ರೀತಿಯಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಸದ್ಯಕ್ಕಂತೂ ಈ ವಿಚ್ಚೇದನದ ಕುರಿತಾಗಿ ಬಹಳಷ್ಟು ಸುದ್ದಿಗಳು ಹರಿದಾಡಿವೆ.

Leave a Comment