Viral News: ಮಳೆಗಾಲದಲ್ಲಿ ಮಳೆ ಬರೋದು ಸಾಮಾನ್ಯವಾದ ವಿಚಾರ. ಅದರಲ್ಲೂ ಈ ಬಾರಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗಿಯೇ ಇದೆ. ಆದರೆ ಮಳೆಗಾಲದಲ್ಲಿ ಆಗಸದಿಂದ ಮಳೆ ಹನಿಗಳ ಬದಲಾಗಿ ಚಿನ್ನ ಮತ್ತು ಬೆಳ್ಳಿ ಉದುರಿದರೆ ಹೇಗಿರುತ್ತೆ? ಖಂಡಿತ ಇದನ್ನ ಊಹೆ ಮಾಡಿಕೊಳ್ಳೋಕೂ ಕಷ್ಟ. ಇಂತದ್ದೆಲ್ಲಾ ಏನಿದ್ದರೂ ಕಥೆಗಳಲ್ಲಿ, ಕಲ್ಪನೆಯಲ್ಲಿ ಮಾತ್ರ ಸಾಧ್ಯ.
ಆದರೆ ಈಗ ಒಂದು ಅಚ್ಚರಿಯ ಘಟನೆ ನಡೆದಿದ್ದು (Viral News), ಇದನ್ನು ಕೇಳಿ ಎಲ್ಲರಿಗೂ ಸಹಾ ಶಾಕ್ ಆಗಿದೆ ಏಕೆಂದರೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನ (Murshidabad) ಬೀದಿಗಳಲ್ಲಿ ನೆಲದ ಮೇಲೆ ಬೆಳ್ಳಿಯ ಹರಳುಗಳು (Silver Pearls) ಬಿದ್ದಿದ್ದು, ಜನರು ಅವುಗಳನ್ನು ಆರಿಸಿಕೊಳ್ಳಲು ಮುಂದಾದ ವಿಚಿತ್ರ ಘಟನೆಯೊಂದು ನಡೆದಿದೆ.
ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಹೀಗೆ ಎಲ್ಲರೂ ಸಹಾ ಬೆಳ್ಳಿಯ ಹರಳುಗಳನ್ನು ಹೆಕ್ಕಲು ಮುಂದಾಗಿದ್ದು, ಇಷ್ಟೊಂದು ಬೆಳ್ಳಿಯ ಹರಳುಗಳು ಎಲ್ಲಿಂದ ಬಂದವು ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ, ಆಕಾಶದಿಂದ ಬೆಳ್ಳಿಯ ಮಳೆಯಾಗಿದೆ ಎನ್ನುವುದು ಜನರ ಮಾತಾಗಿದೆ.
ಆದರೆ ವಾಸ್ತವದಲ್ಲಿ ನಡೆದ ಘಟನೆ ಏನೆಂಬುದು ಅನಂತರ ಬೆಳಕಿಗೆ ಬಂದಿದೆ. ಗಡಿ ಪ್ರದೇಶಗಳಿಗೆ ಬೆಳ್ಳಿ ಹರಳುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದು, ಈ ವೇಳೆ ರಸ್ತೆಗಳಲ್ಲಿ ಅದನ್ನು ಬೀಳಿಸಿಕೊಂಡು ಹೋಗಿದ್ದಾರೆ. ಸತ್ಯ ತಿಳಿಯದ ಜನರು ಬೆಳ್ಳಿ ಹರಳುಗಳ ಮಳೆಯಾಗಿದೆ ಎಂದು ಭ್ರಮಿಸಿದ್ದಾರೆ.
ರಸ್ತೆಯಲ್ಲಿ ಬೆಳ್ಳಿ ಹರಳುಗಳು ಬಿದ್ದಿವೆ ಎನ್ನುವ ವಿಚಾರವು ಒಬ್ಭರಿಂದ ಮತ್ತೊಬ್ಬರಿಗೆ ಕಾಡ್ಗಿಚ್ಚಿನಂತೆ ಹಬ್ಬಿದ್ದು, ವಿಷಯ ತಿಳಿದ ಕೂಡಲೇ ನಾ ಮುಂದೆ ತಾ ಮುಂದು ಎನ್ನವಂತೆ ಅನೇಕರು ಅದನ್ನು ಸಂಗ್ರಹಿಸಲು ಮುಗಿ ಬಿದ್ದಿದ್ದಾರೆ.
Milana Nagaraj : ಅದ್ದೂರಿಯಾಗಿ ನಡೆದ ಮಿಲನಾ ನಾಗರಾಜ್ ಸೀಮಂತ ಫೋಟೋಗಳು, ಹರಿದು ಬಂತು ಶುಭ ಹಾರೈಕೆಗಳು