Vastu Tips: ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ನವಿಲು ಗರಿಯನ್ನು ಬಹಳ ಶುಭ ಮತ್ತು ಪವಿತ್ರ ಎಂದೇ ಹೇಳಲಾಗಿದೆ. ನವಿಲು ಗರಿಯನ್ನು ವಿವಿಧ ರೀತಿಯ ಧಾರ್ಮಿಕ ಆಚರಣೆಗಳಲ್ಲಿ ಬಳಸುವುದು ಉಂಟು. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ನವಿಲು ಗರಿ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಸಕಾರಾತ್ಮಕ ಶಕ್ತಿಯನ್ನ ಹೆಚ್ಚಿಸುತ್ತದೆ ಎನ್ನಲಾಗಿದ್ದು, ಮನೆಯ ಈ ಸ್ಥಳಗಳಲ್ಲಿ ಇದನ್ನು ಇಟ್ಟರೆ ಶುಭವೆಂದು ಹೇಳಲಾಗಿದೆ.
ದೇವರ ಕೋಣೆ : ಮನೆಯಲ್ಲಿನ ದೇವರಕೋಣೆಯನ್ನು ಅತ್ಯಂತ ಪವಿತ್ರ ಸ್ಥಾನವೆಂದು ಗುರುತಿಸಲಾಗುತ್ತದೆ. ಇಲ್ಲಿ ನವಿಲು ಗರಿ ಇಡುವುದರಿಂದ ಸುಖ ಸಮೃದ್ಧಿಯ ಜೊತೆಗೆ ಮನೆಯಲ್ಲಿ ಶಾಂತಿ ನೆಮ್ಮದಿ ಕೂಡಾ ದೊರೆಯುತ್ತದೆ ಎನ್ನಲಾಗಿದೆ.
ಹಣ ಇಡುವ ಜಾಗ : ಹಣ ಇಡುವ ಜಾಗದಲ್ಲಿ ನವಿಲು ಗರಿಯನ್ನು ಇಟ್ಟರೆ ಅದರಿಂದ ಧನ ವೃದ್ಧಿಯಾಗುವುದೆಂದು ಹೇಳಲಾಗಿದೆ. ಧನವನ್ನು ಆಕರ್ಷಿಸುವ ಶಕ್ತಿಶಾಲಿ ಮಾರ್ಗವಿದು ಎಂದು ಸಹಾ ಹೇಳಲಾಗಿದೆ.
ಸ್ಟಡಿ ಡೆಸ್ಕ್ : ಓದಲು ಅಥವಾ ಅಧ್ಯಯನಕ್ಕಾಗಿ ಕೂರುವ ಕಡೆ ಇರುವ ಡೆಸ್ಕ್ ಅಥವಾ ಟೇಬಲ್ ಮೇಲೆ ನವಿಲು ಗರಿಯನ್ನು ಇಡುವುದರಿಂದ ವಿದ್ಯೆಯ ವಿಚಾರದಲ್ಲಿ ಯಶಸ್ಸು, ಕೆರಿಯರ್ ಗೆ ಉತ್ತಮ ಎಂದು ಸಹಾ ಹೇಳಲಾಗುತ್ತದೆ.
ಮನೆಯ ಪ್ರವೇಶ ದ್ವಾರ : ಸಕಾರಾತ್ಮಕತೆಯನ್ನು ಮತ್ತು ಸಮೃದ್ಧಿಗೆ ಸ್ವಾಗತವನ್ನು ಕೋರಲು ನವಿಲು ಗರಿಯನ್ನು ಮನೆಯ ಪ್ರವೇಶ ದ್ವಾರದ ಬಳಿ ಇಡುವುದು ಸೂಕ್ತ ಎನ್ನಲಾಗಿದೆ. ಇದರ ಮನಮೋಹಕ ಹಾಗೂ ಜೀವಂತ ಬಣ್ಣಗಳು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ.
ನವಿಲು ಗರಿ ಇಡಲು ಸೂಕ್ತ ಸ್ಥಳ : ದಿಕ್ಕುಗಳಿಗೆ ಸಂಬಂಧಿಸಿದಂತೆ, ಉತ್ತರ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಟ್ಟರೆ ಇದು ಸಂಪತ್ತಿನ ದೇವರಾದ ಕುಬೇರನನ್ನು ಸಂತೋಷಪಡಿಸುತ್ತದೆ ಮತ್ತು ಆರ್ಥಿಕ ಲಾಭವನ್ನು ತರುತ್ತದೆ ಎನ್ನಲಾಗಿದ್ದು, ಉತ್ತರವನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
ನವಿಲು ಗರಿ ಇಡುವುದಾದರೆ ಅದನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಮೊದಲ ಷರತ್ತು. ಮುರಿದ ಅಥವಾ ಹಾನಿಗೊಳಗಾದ ನವಿಲು ಗರಿಯನ್ನು ಮನೆಯಲ್ಲಿ ಇಡಬಾರದು. ಅದನ್ನು ಯಾವಾಗಲೂ ಗೌರವದಿಂದ ಇಟ್ಟುಕೊಳ್ಳಿ. ಅಲ್ಲದೇ ಮುಖ್ಯವಾಗಿ ಅದನ್ನು ಲೋಹದ ಪಾತ್ರೆಯಲ್ಲಿ ಇಡಬೇಡಿ.
ವಿಶೇಷ ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ಗ್ರಂಥಗಳ ನಂಬಿಕೆಗಳನ್ನು ಆಧರಿಸಿದೆ ಮತ್ತು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ.
Meenu Muneer : ಒಬ್ಬ ಮಂಚಕ್ಕೆ ನೂಕಿದ, ಇನ್ನೊಬ್ಬ ಬಾಗಿಲು ಬಡಿದ, ಮಾಲಿವುಡ್ ಕರಾಳತೆ, ಜನಪ್ರಿಯ ನಟಿ ಸಂಚಲನ ಹೇಳಿಕೆ