Posani Krishna: ತೆಲುಗು ಸಿನಿಮಾ ರಂಗದ ಜನಪ್ರಿಯ ಹಾಸ್ಯ ನಟ ಮತ್ತು ಪೋಷಕ ನಟನಾಗಿ ಗುರ್ತಿಸಿಕೊಂಡಿರುವ ಪೊಸಾನಿ ಕೃಷ್ಣ (Posani Krishna) ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ವಿಚಾರಗಳ ಬದಲಾಗಿ ಬೇರೆಯವರನ್ನ ಟೀಕೆ ಮಾಡುವ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗಿದ್ದರು. ವೈಎಸ್ಆರ್ಸಿಪಿ ಸೇರಿದ ನಂತರ ಪೊಸಾನಿ ಕೃಷ್ಣ ಮುರಳಿ, ಚಂದ್ರ ಬಾಬು ನಾಯ್ಡು ವಿರುದ್ಧ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದ್ದರು. ದಿನಗಳು ಕಳೆದ ಹಾಗೆ ತೆಲುಗಿನ ಹಿರಿಯ ನಟ ಮೆಗಾಸ್ಟಾರ್ ಖ್ಯಾತಿಯನ್ನು ಪಡೆದಿರುವ ಚಿರಂಜೀವಿಯನ್ನು ಟೀಕೆ ಮಾಡಲು ಪ್ರಾರಂಭಿಸಿದರು.
ಒಂದು ಹಂತದಲ್ಲಿ ಈ ನಟನಿಗೆ ಸಿನಿಮಾಗಳಲ್ಲಿ ಆಫರ್ ಗಳು ಸಿಗದೇ ಹೋಯಿತು.. ಆರಂಭದಲ್ಲಿ ಈ ನಟ ಪ್ರಜಾರಾಜ್ಯಂ ಪಕ್ಷದಲ್ಲಿ ಸೇರಿಕೊಂಡು ಚುನಾವಣೆಗೆ ಸ್ಪರ್ಧಿಸಿ ಸೋಲನ್ನ ಅನುಭವಿಸಿದ್ದರು. ಬಳಿಕ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಪಾರ್ಟಿಯನ್ನು ಸೇರಿಕೊಂಡರು. ಅಲ್ಲಿಂದ ಚಂದ್ರ ಬಾಬು ನಾಯ್ಡು, ಪವನ್ ಕಲ್ಯಾಣ್ ಕುರಿತಾಗಿ ನಾಲಗೆ ಹರಿ ಬಿಡಲು ಪ್ರಾರಂಭಿಸಿದರು. ಈಗ ಚಂದ್ರ ಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತಿರುವಾಗ ವೇಳೆಯಲ್ಲೇ ಪೊಸಾನಿ ಕೃಷ್ಣ ಸಿನಿಮಾ ಕೆರಿಯರ್ ಕೊನೆಯಾಗಲಿದೆ ಎನ್ನುವ ಮಾತುಗಳು ಹೇಳಿ ಬರುತ್ತಿದೆ.
ವೈಎಸ್ಆರ್ ಸಿ ಪಿ (YSRPC) ಸೇರಿದ ಮೇಲೆ ಪೊಸಾನಿ ಕೃಷ್ಣ ತಮ್ಮ ಮಾತುಗಳಿಂದಾಗಿಯೇ ಸಾಕಷ್ಟು ಕೆಟ್ಟ ಹೆಸರನ್ನು ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಟನನ್ನು ಬಹಳಷ್ಟು ಜನ ಟೀಕಿಸಲು ಪ್ರಾರಂಭ ಮಾಡಿದರು. ನಟ ಪವನ್ ಕಲ್ಯಾಣ್ ಅವರನ್ನು ಕುರಿತಾಗಿ ಸಾಕಷ್ಟು ಕೆಟ್ಟ ಮಾತುಗಳನ್ನು ಆಡುವ ಮೂಲಕ ಇನ್ನಷ್ಟು ಚರ್ಚೆಗೆ ಕಾರಣವಾಗಿದ್ದರು. ಒಂದು ಹಂತದಲ್ಲಿ ಪವನ್ ಕಲ್ಯಾಣ್ ಅವರನ್ನು ಅ ಶ್ಲೀ ಲ ಮತ್ತು ತುಚ್ಚ ಪದಗಳನ್ನು ಬಳಸಿ ನಿಂದನೆ ಮಾಡಲು ಮುಂದಾದರು.
ನಟ ಪೊಸಾನಿ ಕೃಷ್ಣ ಚಿರಂಜೀವಿ (Chiranjeevi) ಹಾಗೂ ಪವನ್ ಕಲ್ಯಾಣ್ (Pawan Kalyan) ಅವರ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಜಗನ್ಮೋಹನ್ ರೆಡ್ಡಿ ಅವರು ಕೂಡಾ ಪೋಸಾನಿಯನ್ನು ನಂಬಿ ಆಂಧ್ರ ಪ್ರದೇಶ ಫಿಲಂ ಡೆವಲಪ್ಮೆಂಟ್ ನಲ್ಲಿ ಒಂದು ಪ್ರಮುಖ ಪಾತ್ರವನ್ನು ನೀಡಿದರು. ಆದರೆ ಪೊಸಾನಿ ಅತ್ತೆ ಕಡೆಗೆ ಸರಿಯಾಗಿ ಗಮನವನ್ನು ನೀಡಲೇ ಇಲ್ಲ. ಈಗ ಅವರು ಯಾರನ್ನ ಕಟುವಾಗಿ ನಿಂದನೆ ಮಾಡಿದ್ದರೋ ಅವರೇ ಅಧಿಕಾರ ಪಡೆದುಕೊಂಡಿದ್ದಾರೆ ಇನ್ಮುಂದೆ ಪೊಸಾನಿ ವರ್ತನೆ ಹೇಗಿರಲಿದೆ ಎನ್ನುವುದು ಚರ್ಚೆಯ ವಿಷಯವಾಗಿದೆ.