Ranveer Singh: ಪ್ಯಾಂಟ್ ಬಿಚ್ಚಿಟ್ಟು ಪಕ್ಕದಲ್ಲಿ ಬಂದು ಕೂರ್ತಾನೆ; ರಣ್ವೀರ್ ಸಿಂಗ್ ಬಗ್ಗೆ ಸ್ಪೋಟಕ ಸತ್ಯ ತಿಳಿಸಿದ ಸ್ಟಾರ್ ನಟಿ

Written by Soma Shekar

Published on:

---Join Our Channel---

Ranveer Singh : ಬಾಲಿವುಡ್ (Bollywood) ನಟ ರಣ್ವೀರ್ ಸಿಂಗ್ (Ranveer Singh) ತಮ್ಮ ಬಿಂದಾಸ್ ಸ್ಟೈಲ್ ಮತ್ತು ಫ್ಯಾಷನ್ ವಿಚಾರವಾಗಿ ಆಗಾಗ ಸದ್ದು, ಸುದ್ದಿ ಮಾಡ್ತಾನೇ ಇರ್ತಾರೆ. ನಟ ಧರಿಸುವ ಚಿತ್ರ ವಿಚಿತ್ರ ಡ್ರೆಸ್ ಗಳನ್ನು ನೋಡಿ ಅಚ್ಚರಿ ಪಡ್ತಾರೆ ಜನ. ಸ್ವಲ್ಪ ಸಮಯದ ಹಿಂದೆ ನಟ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿ ದೊಡ್ಡ ವಿ ವಾ ದ ವನ್ನೇ ರಣ್ವೀರ್ ಮೈಮೇಲೆ ಎಳೆದುಕೊಂಡಿದ್ದರು. ಆಗ ಆ ವಿಚಾರವಾಗಿ ಎಲ್ಲೆಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿತ್ತು ಮತ್ತು ಪರ ವಿರೋಧ ಮಾತುಗಳು ಕೇಳಿ ಬಂದಿದ್ದವು.

ಆದರೆ ಈಗ ನಟಿ ಪರಿಣಿತಿ ಚೋಪ್ರಾ (Parineeti Chopra) ಸಂದರ್ಶನವೊಂದರಲ್ಲಿ ರಣ್ವೀರ್ ಕುರಿತಾಗಿ ಕೆಲವು ಸ್ಪೋಟಕ ವಿಷಯಗಳನ್ನು ತಿಳಿಸಿದ್ದು, ಆ ವಿಚಾರಗಳು ಈಗ ಮಾದ್ಯಮಗಳ ಪ್ರಮುಖ ಸುದ್ದಿಯಾಗಿರುವುದು ಮಾತ್ರವೇ ಅಲ್ಲದೇ ಅನೇಕರು ಶಾಕ್ ಆಗಿದ್ದಾರೆ. ಹೌದು, ನಟಿ ತಮ್ಮ ಮಾತಿನಲ್ಲಿ ರಣ್ವೀರ್ ಸಿಂಗ್ ಹೇಗೆ ಅಂದ್ರೆ ಪ್ಯಾಂಟ್ ಕೂಡಾ ಹಾಕಿಕೊಳ್ಳದೇ ನಿಮ್ಮ ಪಕ್ಕ ಬಂದು ಕೂರುತ್ತಾರೆ. ಆಗ ನಾವೇ ಅವರಿಗೆ ಪ್ಯಾಂಟ್ ಹಾಕಿಕೊಳ್ಳಿ ಅಂತ ಹೇಳೋ ಪರಿಸ್ಥಿತಿ ಎದುರಾಗುತ್ತೆ.

ಅಲ್ಲದೇ ರಣ್ವೀರ್ ಏನೂ ಆಗಿಲ್ಲ ಅನ್ನೋ ಹಾಗೆ ಇರ್ತಾರೆ. ಶೂಟಿಂಗ್ ನಲ್ಲಿ ಪ್ರತಿ ಎರಡು ಮೂರು ದಿನಕ್ಕೊಮ್ಮೆ ಇದು ಆಗುತ್ತೆ. ನಾನು ಶೂಟಿಂಗ್ ಸ್ಪಾಟ್ ನಲ್ಲಿ ಯಾರ ಮೇಕಪ್ ವ್ಯಾನ್ ಗೆ ಬೇಕಾದ್ರು ಎಂಟ್ರಿ ಕೊಡ್ತೀನಿ. ಆದರೆ ರಣ್ವೀರ್ ವ್ಯಾನ್ ಗೆ ಹೋಗಲ್ಲ. ಅವರು ಮಲಗಿರ್ತಾರೆ ಅಥವಾ ವಾಶ್ ರೂಂ ನಲ್ಲಿರ್ತಾರೆ. ಅಲ್ಲದೇ ಒಳಗೆ ಅವರು ಡ್ರೆಸ್ ಹಾಕಿದ್ದಾರೋ ಇಲ್ಲವೋ ಅನ್ನೋದು ಅನುಮಾನ. ಅದಕ್ಕೆ ಅವರ ವ್ಯಾನ್ ಗೆ ಹೋಗೋಕೆ ಮೊದಲೇ ಅವರಿಗೆ ಕೇಳಿ ಹೋಗಬೇಕು. ‌

ನಾನು ಅವರ ಜೊತೆಗೆ ಬ್ಯಾಂಡ್ ಬಜಾ ಭಾರತ್ ಚಿತ್ರದ ಶೂಟಿಂಗ್ ನಲ್ಲಿದ್ದಾಗ ಆಶ್ಚರ್ಯಪಟ್ಟಿದ್ದೆ. ಆಗ ನಾನು ರಣವೀರ್ ಸಿಂಗ್ ಕೊಠಡಿಗೆ ಹೋಗಿದ್ದೆ ಅಲ್ಲಿ ಅವರು ಬಟ್ಟೆ ಹಾಕದೇ ಕೂತಿದ್ರು, ಇನ್ನು ರೋಮ್ಯಾಂಟಿಕ್ ದೃಶ್ಯಕ್ಕಾಗಿ ಮೇಕ್ ಅಪ್ ಮಾಡಿಕೊಳ್ಳುತ್ತಿದ್ದೆ ಎಂದರು, ನಾನು ಅವರ ಕಡೆ. ನೋಡಿದರೆ ರಣವೀರ್ ಪ್ಯಾಂಟ್ ಇಲ್ಲದೇ ನಿಂತಿದ್ರು, ಅವರೊಬ್ಬ ಒಬ್ಬ ಶೇಮ್‌ಲೆಸ್ ಮ್ಯಾನ್ ಎಂದು ನಕ್ಕಿದ್ದಾರೆ ಪರಿಣೀತಿ ಚೋಪ್ರಾ.

Leave a Comment