ಪ್ರಿಯಾಂಕ ಚೋಪ್ರಾ ಪತಿಗೆ ಪ್ರಾಣ ಭಯ; ಕಾರ್ಯಕ್ರಮದ ವೇದಿಕೆಯಿಂದಲೇ ಓಡಿ ಹೋದ Nick Jonas

Written by Soma Shekar

Published on:

---Join Our Channel---

Nick Jonas : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಪತಿ ಮತ್ತು ಪಾಪ್ ಸ್ಟಾರ್ ಸಹಾ ಆಗಿರುವ ನಿಕ್ ಜೋನಾಸ್ (Nick Jonas) ವೀಡಿಯೋ ಒಂದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವೀಡಿಯೋದಲ್ಲಿ ನಿಕ್ ತನ್ನ ಅಂಗರಕ್ಷಕರಿಗೆ ಸನ್ನೆ ಮಾಡುತ್ತಾ ವೇದಿಕೆಯಿಂದ ಓಡಿ ಹೋಗುವುದು ಕಂಡು ಬಂದಿದೆ.

ನಿಕ್ ತಮ್ಮ ಡೇಸ್ ವರ್ಲ್ಡ್ ಟೂರ್‌ ನ ಭಾಗವಾಗಿ ಮಂಗಳವಾರ ಪ್ರೇಗ್‌ ನಲ್ಲಿ ಸಹೋದರರಾದ ಕೆವಿನ್ ಮತ್ತು ಜೋ ಜೋನಾಸ್ ಜೊತೆಗೆ ಒಂದು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರ ಹಣೆಗೆ ಲೇಸರ್ ಲೈಟ್ ಬಿದ್ದಿದ್ದು, ಯಾರೋ ಗುರಿ ಇಟ್ಟ ಹಾಗೆ ಅದು ಕಂಡಿತ್ತು. ಇದರಿಂದ ಪ್ರಾಣ ಭಯದಿಂದ ನಿಕ್ ವೇದಿಕೆ ಮೇಲಿಂದ ಓಡಿ ಹೋಗಿದ್ದಾರೆ.

ನಿಕ್ ತಮ್ಮ ಪ್ರದರ್ಶನದಿಂದ ಹೀಗೆ ಅರ್ಧಕ್ಕೆ ಓಡಿ ಹೋಗಿದ್ದು ಶಾಕಿಂಗ್ ಎನಿಸಿದೆ. ಈ ಘಟನೆಯ ನಂತರ ಶಾರ್ಪ್ ಶೂಟರ್ ಅವರ ಹಣೆಗೆ ಗುರಿಯಿಟ್ಟಿದ್ದರಿಂದಲೇ ಅವರು ಅಪಾಯದಿಂದ ಪಾರಾಗಲು ಓಡಿ ಹೋಗಿದ್ದಾರೆನ್ನುವ ಸುದ್ದಿಗಳು ಹರಿದಾಡಿವೆ.

ಇದು ಖಚಿತವಾಗಿ ಶಾರ್ಪ್ ಶೂಟರ್ ಗಳು ನಿಕ್ ನ ಗುರಿಯಾಗಿಸಿ ಮಾಡಿದ ಪ್ರಯತ್ನವೋ ಅಥವಾ ಯಾರಾದರೂ ಕಿಡಿಗೇಡಿಗಳು ತಮಾಷೆಗಾಗಿ ಮಾಡಿದ್ದೋ ಎನ್ನುವುದು ತನಿಖೆಯಿಂದ ಹೊರ ಬರಬೇಕಾಗಿದ್ದು, ನಿಖ್ ಮಾತ್ರ ಈ ಘಟನೆಯಿಂದ ಭಯಪಟ್ಟಿದ್ದಾರೆ.

Sai Pallavi ಬೇಡ ಎಂದು ರಿಜೆಕ್ಟ್ ಮಾಡಿದ ಈ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡು ಮಿಂಚಿದ್ದವು

Leave a Comment