Chattisgarh: ಓಯೋ ರೂಮ್ ಬಂದ್ ಮಾಡಿಸಿದ್ದಕ್ಕೆ ಬಿಜೆಪಿ ಶಾಸಕನ ಕಚೇರಿ ಮುಂದೆ ಕಿಸ್ ಮಾಡಿದ ಆಕ್ರೋಶ ಹೊರ ಹಾಕಿದ ಜೋಡಿ

Written by Soma Shekar

Published on:

---Join Our Channel---

Chattisgarh : ಛತ್ತೀಸ್ಗಢದ (Chattisgarh) ವೈಶಾಲಿ ನಗರದಲ್ಲಿ ಓಯೋ (Oyo) ರೂಮ್ ಗಳನ್ನು ಮತ್ತು ಹೊಟೇಲ್ ಗಳನ್ನು ಬಂದ್ ಮಾಡಿಸಿದ್ದರಿಂದ ರೊಚ್ಚಿಗೆದ್ದ ಜೋಡಿಯೊಂದು ಸ್ಥಳೀಯ ಬಿಜೆಪಿ ನಾಯಕನೊಬ್ಬರ ಮನೆಯ ಮುಂದೆ ಪ್ರತಿಭಟನೆ ನಡೆಸುವುದಕ್ಕಾಗಿ ಮಾಡಿದ ಕೆಲಸ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ ಮತ್ತು ಈ ವಿಚಾರವಾಗಿ ವ್ಯಾಪಕವಾಗಿ ಟೀಕೆಗಳು ಹರಿದು ಬರುತ್ತಿದೆ. ಅಲ್ಲದೇ ಅನೇಕರು ಇಂದಿನ ಯುವಕ ಯುವತಿಯರಿಗೆ ಏನಾಗಿದೆ ಎಂದು ಪ್ರಶ್ನೆಯನ್ನು ಸಹಾ ಮಾಡುತ್ತಿದ್ದಾರೆ.

ನಗರದಲ್ಲಿ ಓಯೋ ರೂಮ್ ಗಳನ್ನು ಮತ್ತು ಹೊಟೇಲ್ ಗಳನ್ನು ಬಂದ್ ಮಾಡಿರುವುದರಿಂದ ಸಿಟ್ಟಾದ ಒಂದು ಜೋಡಿ, ಪ್ರತಿಭಟನೆಯನ್ನು ಮಾಡುವ ಸಲುವಾಗಿ ಬಿಜೆಪಿ ಶಾಸಕರ ಕಚೇರಿಯ ಮುಂದೆ ಬಂದು ಅಲ್ಲಿ ಕಿಸ್ಸಿಂಗ್ ಮಾಡಲು ತೊಡಗಿಕೊಂಡಿದ್ದಾರೆ. ವೈಶಾಲಿ ನಗರದಲ್ಲಿ ಒಯೋ ಹೊಟೇಲ್ ಮತ್ತು ರೂಮ್ ಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಎಂದು ಬಿಜೆಪಿ ನಾಯಕ ರಿಕೇಶ್ ಸೇನ್ (Rikesh Sen) ಅವರು ಒಯೋ ರೂಮ್ ಗಳನ್ನು ಬಂದ್ ಮಾಡಿಸಿದ್ದರು.

ಅಲ್ಲದೇ ಎಲ್ಲೆಲ್ಲಿ ವೇಶ್ಯಾವಾಟಿಕೆ ನಡೆಯುವುದೋ ಅಲ್ಲಿ ಸ್ವತಃ ದಾಳಿಯನ್ನು ನಡೆಸುವುದಾಗಿ ಎಚ್ಚರಿಕೆಯನ್ನು ಸಹಾ ನೀಡಿದ್ದರು. ರಿಕೇಶ್ ಸೇನ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡ ಅಪರಿಚಿತ ಜೋಡಿಯೊಂದು ರಿಕೇಶ್ ಸೇನ್ ಅವರ ಕಚೇರಿಯ ಮುಂದೆ ಬಂದು, ಕಿಸ್ಸಿಂಗ್ ಮಾಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಮೂರು ಲಕ್ಷಕ್ಕೂ ಅಧಿಕ ಮಂದಿ ವೀಡಿಯೋವನ್ನು ನೋಡಿದ್ದಾರೆ.

ಬಿಜೆಪಿ ಶಾಸಕನಾಗಿರುವ ರಿಕೇಶ್ ಸೇನ್ (Rikesh Sen) ಅವರ ಪಕ್ಷದ ಕಚೇರಿಯೂ ವೈಶಾಲಿ ನಗರದ ಜಲೇಬಿ ಚೌಕ್‌ನಲ್ಲಿ ಇದ್ದು, ಅಪರಿಚಿತ ಜೋಡಿಯೊಂದು ಇಲ್ಲಿ ಬಹಿರಂಗವಾಗಿಯೇ ಕಿಸ್ಸಿಂಗ್‌ನಲ್ಲಿ ತೊಡಗಿದೆ. ಒಯೋ ರೂಮ್‌ಗಳ ನೆಪದಲ್ಲಿ ನಗರದಲ್ಲಿ ವೇಶ್ಯಾವಾಟಿಕೆ ಹಾವಳಿ ವ್ಯಾಪಕವಾಗಿದ್ದು, ಎಲ್ಲೆಲ್ಲಿ ಹೀಗೆ ವೇಶ್ಯಾವಾಟಿಕೆ ನಡೆಯುತ್ತಿದೆಯೋ ಅಲ್ಲೆಲ್ಲಾ ಪೊಲೀಸರೊಂದಿಗೆ ತಾನು ಸ್ವತಃ ಭೇಟಿ ನೀಡಿ ದಾಳಿ ನಡೆಸುವುದಾಗಿ ಶಾಸಕ ರಿಕೇಶ್ ಸೇನ್ ಹೇಳಿದ್ದರು.

Leave a Comment