Optical Illusion: ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವಂತಹ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಅನ್ನು ಹುಟ್ಟು ಹಾಕಿರುವಂತಹ ಚಿತ್ರಗಳಾಗಿದೆ. ಈ ಚಿತ್ರಗಳು ಮನುಷ್ಯರ ಬುದ್ಧಿಗೆ ಮತ್ತು ದೃಷ್ಟಿಗೆ ಸವಾಲನ್ನು ಹಾಕುತ್ತವೆ. ಮೆದುಳಿಗೆ ಇದು ಕೆಲಸವನ್ನು ನೀಡುತ್ತದೆ. ಇಂತಹ ಚಿತ್ರಗಳು ಬಹಳ ಬೇಗ ವೈರಲ್ ಸಹಾ ಆಗುತ್ತವೆ.
ಇಲ್ಲಿರೋ ಚಿತ್ರದಲ್ಲಿ ಅಂದರೆ ದೃಷ್ಡಿ ಭ್ರಮೆಯನ್ನು ಉಂಟು ಮಾಡುವ ಚಿತ್ರದಲ್ಲಿ ವಿಭಿನ್ನವಾದ ಸಂಖ್ಯೆಗಳು ಅಡಗಿಕೊಂಡಿವೆ. ಇದನ್ನು ನೋಡಿದ ಜನರು ವಿಭಿನ್ನ ಸಂಖ್ಯೆಗಳನ್ನು ಗುರುತಿಸುತ್ತಿದ್ದಾರೆ. ಚಿತ್ರದಲ್ಲಿರುವ ಸಂಖ್ಯೆಗಳನ್ನು ಸರಿಯಾಗಿ ಗುರುತಿಸುವ ಸಾಮರ್ಥ್ಯವು ಒಬ್ಬರ ದೃಷ್ಟಿಯ ತೀಕ್ಷ್ಣತೆಯನ್ನು ಅವಲಂಬಿಸಿರುತ್ತದೆ ಎನ್ನುವುದರ ಮೇಲೆ ಅವಲಂಬಿಸಿದೆ.
ತೀಕ್ಷ್ಣವಾದ ನೋಟವನ್ನು ಹೊಂದಿರುವವರು ಈ ದೃಷ್ಟಿ ಭ್ರಮೆಯ ಚಿತ್ರದೊಳಗಿರುವ ಎಲ್ಲಾ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಬಲ್ಲರು. ಆಪ್ಟಿಕಲ್ ಭ್ರಮೆಯೊಳಗಿರುವ ಕಪ್ಪು ಮತ್ತು ಬಿಳಿ ಚುಕ್ಕೆಗಳ ನಡುವೆ ಇರುವ ಸಂಖ್ಯೆಗಳನ್ನು ನೀವು ಗುರುತಿಸಬಲ್ಲಿರಾ? ನಿಮ್ಮ ಕಣ್ಣಿಗೆ ಚುಕ್ಕಿಗಳು ಸುತ್ತುತ್ತಿರುವ ಹಾಗೆ ಕಾಣಬಹುದು. ಆದರೆ ಸರಿಯಾಗಿ ಗಮನಿಸಿದರೆ ನಿಮಗೆ ಸಂಖ್ಯೆಗಳು ಗೋಚರಿಸುತ್ತವೆ.
ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ಎಷ್ಟು ಬೇಗ ನೀವು ಈ ಚಿತ್ರದಲ್ಲಿರುವ ಸಂಖ್ಯೆಗಳನ್ನು ಗುರುತಿಸುವಿರೋ ನಿಮ್ಮ ದೃಷ್ಟಿ ಅಷ್ಟೊಂದು ಆ್ಯಕ್ಟೀವ್ ಆಗಿದೆ ಎಂದೇ ಅರ್ಥ. ಹಾಗಾದ್ರೆ ಇನ್ನೇಕೆ ತಡ, ಈ ಚಿತ್ರದಲ್ಲಿರುವ ಸರಿಯಾದ ಸಂಖ್ಯೆಯನ್ನು ಗುರುತಿಸಿ ಮತ್ತು ಉತ್ತರವನ್ನು ಕಾಮೆಂಟ್ ಮಾಡಿ ಹೇಳಿ.