South Heroins ಅತಿ ಹೆಚ್ಚು ಸಂಭಾವನೆ ಪಡೆಯೋ ಸೌತ್ ಬ್ಯೂಟಿ ಯಾರು? ರಶ್ಮಿಕಾ ಅಥವಾ ಅನುಷ್ಕಾ ಅಲ್ಲ

Written by Soma Shekar

Published on:

---Join Our Channel---

South Heroins: ಸಿನಿಮಾ ಅನ್ನೋ ಟಾಪಿಕ್ ಬಂದಾಗ ಅಲ್ಲಿ ನಟ, ನಟಿಯರು ಪಡೆಯೋ ಸಂಭಾವನೆ ಸಹಾ ಚರ್ಚೆಯ ವಿಷಯವಾಗಿರುತ್ತೆ. ಸಾಮಾನ್ಯವಾಗಿ ಸ್ಟಾರ್ ನಟ, ನಟಿಯರು ಕೋಟಿ ಗಳಲ್ಲಿ ಸಂಭಾವನೆ ಪಡೀತಾರೆ. ಆದರೆ ನಾಯಕ ಮತ್ತು ನಾಯಕಿಯ ಸಂಭಾವನೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ವ್ಯತ್ಯಾಸ ಅಂತೂ ಖಂಡಿತ ಇದೆ.

ಹಾಗಾದ್ರೆ ಸೌತ್ ಸಿನಿಮಾಗಳಲ್ಲಿ (South Heroins) ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು? ಅನ್ನೋ ವಿಚಾರ ಬಂದಾಗ ಬಹಳಷ್ಟು ಜನ ತೆಲುಗು ಸಿನಿಮಾ ನಟಿಯರೇ ಇರಬೇಕು ಅಂತ ಗೆಸ್ ಮಾಡ್ತಾರೆ. ಹಾಗಾದ್ರೆ ಇದು ನಿಜಾನಾ? ಯಾರು ಅತಿ ಹೆಚ್ಚು ಸಂಭಾವನೆ ಪಡೀತಾರೆ ಅಂತ ತಿಳಿಯೋಣ ಬನ್ನಿ.

ವರದಿಗಳ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ನಯನತಾರಾ (Nayanthara) ಆಗಿದ್ದಾರೆ. ತಮಿಳಿನಲ್ಲಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯನ್ನು ಪಡೆದಿರೋ ಈ ನಟಿ ಸಿನಿಮಾವೊಂದಕ್ಕೆ ಬರೋಬ್ಬರಿ 10-12 ಕೋಟಿ ಸಂಭಾವನೆ ಪಡೀತಾರೆ.

ನಯನತಾರಾ ನಂತರದ ಸ್ಥಾನದಲ್ಲಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಇದ್ದಾರೆ. ಈ ನಟಿ ಸಿನಿಮಾವೊಂದಕ್ಕೆ 5-7 ಕೋಟಿ ಸಂಭಾವನೆ ಪಡೀತಾರೆ. ಆದರೆ ಕಥೆ ಹಿಡಿಸಿದಾಗ ನಟಿ ಕಡಿಮೆ ಸಂಭಾವನೆಗೆ ಸಹಾ ಓಕೆ ಅಂತಾರೆ ಎನ್ನಲಾಗಿದೆ.

ಇನ್ನು ಮೂರನೇ ಸ್ಥಾನದ ವಿಚಾರಕ್ಕೆ ಬಂದರೆ ಫ್ಲಾಪ್ ಸಿನಿಮಾಗಳನ್ನು ನೀಡಿದರೂ ಭರ್ಜರಿ ಬೇಡಿಕೆ ಇರುವ ಪೂಜಾ ಹೆಗ್ಡೆ (Pooja Hegde) ಇದ್ದು ಈ ನಟಿ ಸಿನಿಮಾವೊಂದಕ್ಕೆ 5 ಕೋಟಿ ಚಾರ್ಜ್ ಮಾಡ್ತಾರೆ.

ನಾಲ್ಕನೇ ಸ್ಥಾನದಲ್ಲಿ ನಟಿ ತ್ರಿಶಾ (Trisha Krishnan) ಇದ್ದು ಈ ನಟಿ ಸಿನಿಮಾವೊಂದಕ್ಕೆ 4-6 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವುದು ಸುದ್ದಿ.‌

ಐದನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಇದ್ದು ಪ್ರಸ್ತುತ ಇವರು ಸಿನಿಮಾವೊಂದಕ್ಕೆ 3-4 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.

ಸಮಂತಾ (Samantha) ಪ್ರಸ್ತುತ ಹೆಚ್ಚು ಸಿನಿಮಾ ಮಾಡುತ್ತಿಲ್ಲವಾದರೂ ನಟಿ ಸಿನಿಮಾವೊಂದಕ್ಕೆ 3-5 ಕೋಟಿ ಸಂಭಾವನೆ ಪಡೆಯುತ್ತಾರೆ. ಇತ್ತೀಚಿಗೆ ದೇವರ ಸಿನಿಮಾದಲ್ಲಿ ನಟಿಸಿದ ಜಾನ್ವಿ ಕಪೂರ್ ಮೊದಲ ಸಿನಿಮಾಕ್ಕೆ 5 ಕೋಟಿ ಪಡೆದು ಸುದ್ದಿಯಾಗಿದ್ದಾರೆ.

ನನ್ನ ವೀಡಿಯೋ ಲೀಕ್ ಮಾಡೋ ಬೆದರಿಕೆ ಹಾಕಿದ್ದ ಸ್ಟಾರ್ ನಟನ ಮಗ; ಶಾಕಿಂಗ್ ಮಾತು ಹೇಳಿದ Ananya Pandey

Leave a Comment