Puttakkana Makkalu : ಕನ್ನಡ ಕಿರುತೆರೆಯಲ್ಲಿ ಟಿ ಆರ್ ಪಿ ವಿಚಾರದಲ್ಲಿ ನಂಬರ್ ಒನ್ ಸ್ಥಾನವನ್ನು ಪಡ್ಕೊಂಡಿರೋ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu), ಹಿರಿಯ ನಟಿ ಉಮಾಶ್ರೀ (Umashree) ಅವರು ಪ್ರಮುಖ ಪಾತ್ರದಲ್ಲಿ ಇರೋ ಈ ಸೀರಿಯಲ್ ನ ಪ್ರತಿಯೊಂದು ಪಾತ್ರವೂ ಕೂಡಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡ್ಕೊಂಡಿದೆ. ಈಗ ಸೀರಿಯಲ್ ನಲ್ಲಿ ನಡೀತಾ ಇರೋ ಕಥೆಯಲ್ಲಿ ಪುಟ್ಟಕ್ಕನ ಮಗಳು ಸಹನಾ ಮತ್ತು ಮುರುಳಿ ಮೇಷ್ಟ್ರ ನಡುವಿನ ವೈಮನಸ್ಸಿನ ಎಪಿಸೋಡ್ ಗಳು ವಿಶೇಷವಾಗಿ ಪ್ರೇಕ್ಷಕರ ಗಮನ ಸೆಳೆದಿದೆ.
ಅತ್ತೆ ಮನೆಯಲ್ಲಿ ಸಾವಿನ ಅಂಚಿನವರೆಗೆ ಹೋದ ಸಹನಾ (Sahana) ಈಗ ಅದನ್ನೆಲ್ಲಾ ನಂಬದೇ ಇರೋ ಗಂಡ ಬೇಡ ಅಂತ ಕೋರ್ಟ್ ಮೆಟ್ಟಿಲು ಹತ್ತಿದ್ರೆ, ತಾಯಿ ಹೇಳಿದ್ದೇ ನಿಜ ಅಂತ ಸಹನಾನ ನಂಬದ ಮುರುಳಿ (Muruli) ಮೇಷ್ಟ್ರು ಕೂಡಾ ಸಹನಾಗೆ ವಿಚ್ಚೇದನ ಕೊಡೋದಕ್ಕೆ ನಿರ್ಧಾರ ಮಾಡಿ ಕೋರ್ಟ್ ಗೆ ಬಂದಿದ್ದಾರೆ. ನಿನ್ನೆ ಕೋರ್ಟ್ ಎಪಿಸೋಡ್ ಪ್ರಸಾರ ಆದ್ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಇದ್ರ ಬಗ್ಗೆ ಒಂದು ದೊಡ್ಡ ಚರ್ಚೆಯೇ ಶುರುವಾಗಿದೆ ಅಂದ್ರೆ ಸುಳ್ಳಲ್ಲ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿರುವವರು, ತಾವು ನ್ಯಾಯವಾದಿಗಳು ಎಂದು ಹೇಳುತ್ತಾ ಕೆಲವರು ಕಾಮೆಂಟ್ ಮಾಡಿದ್ದು, ಈ ಸೀರಿಯಲ್ನಲ್ಲಿ ಕೋರ್ಟ್ ಅನ್ನೋ ಕಲ್ಪನೆಉಲ್ಲಿ ನಡೆಯುವಂತ ಕೋರ್ಟ್ ನ ವಿಧಿ ವಿಧಾನ ಭಾರತದ ಯಾವುದೇ ನ್ಯಾಯಾಲಯಗಳಿಗೆ ಹೊಂದಾಣಿಕೆ ಆಗೋದಿಲ್ಲ. ದಯಮಾಡಿ ನ್ಯಾಯಾಂಗ, ನ್ಯಾಯಾಂಗದಲ್ಲಿ ನಡೆಯುವ ಪ್ರಕ್ರಿಯವನ್ನು ತಪ್ಪಾಗಿ ಬಿಂಬಿಸಿರುವದು ವೀಕ್ಷಕರಿಗೆ ತಪ್ಪು ಮಾಹಿತಿ ನೀಡಿದಂತೆ ಕಂಡು ಬರುತ್ತದೆ ಎಂದಿದ್ದಾರೆ.
ಅಲ್ಲದೇ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಈ ರೀತಿಯಾಗಿ ನಡೆಯೋದಿಲ್ಲ, ಕೋರ್ಟ್ ಕಲಾಪದ ದೃಶ್ಯ ನಾನೊಬ್ಬ ನ್ಯಾಯವಾದಿಯಾಗಿ ನನಗೆ ನೋವುಂಟು ಮಾಡಿದೆ ಎಂದಿದ್ದಾರೆ. ಇನ್ನೂ ಕೆಲವರು ಇದೆಂತ ಕೋರ್ಟ್ ಸೀನ್ ಸಹನಾ ಪರ ಇರೋ ಲಾಯರ್ ಮಾತಾಡಲ್ಲ, ಮುರುಳಿ ಕಡೆ ಇರೋ ಲಾಯರ್ ಇಲ್ದೇ ಇರೋ ಆರೋಪಗಳನ್ನೆಲ್ಲಾ ಮಾಡ್ತಾನೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
ಮತ್ತೊಬ್ಬರು ತಮ್ಮ ಕಾಮೆಂಟ್ ನಲ್ಲಿ, ವಿಚ್ಛೇದನಕ್ಕೆ ಬಂದ್ರೆ ಶಿಕ್ಷೆ ಕೊಡೋ ನ್ಯಾಯ. ಇದು ಯಾವ ಕಾನೂನಿನಲ್ಲಿ ಇದೆ ಅಂದ್ರೆ, ಇನ್ನೊಬ್ಬರು ಇವತ್ತಿನ ಕೋರ್ಟ್ ಸೀನಂತೂ ಸಿಕ್ಕಾಪಟ್ಟೆ ಹಾಸ್ಯಾಸ್ಪದವಾಗಿತ್ತು. ಯಾವುದೇ ಕೇಸ್ ಒಂದೇ ದಿನದಲ್ಲಿ ಇತ್ಯರ್ಥವಾಗಲ್ಲ ಅಂತಾದ್ರಲ್ಲಿ ಅಸಂಬದ್ಧ ವಾದಗಳ ಮಾಡುವ ಲಾಯರ್, ಮಾತೇ ಆಡದ ಸಹನಾ ಪರ ಲಾಯರ್. ಇನ್ನ ಜಡ್ಜ್ ಚೌರ ಕಾಣದ ತಲೆ,ಸ್ನಾನ ಮಾಡದೆ ಪರಪರ ಕೆರ್ಕೋತಾ 7 ವರ್ಷ ಜೈಲಿಗೆ ಕಳಿಸೋ ಮಾತಾಡ್ತಾ ಇದಾನೆ.
ಏನು ಕ್ರೈಂ ನಡೆದಿದೆ ಜೈಲಿಗೆ ಹಾಕ್ಕೋಕ್ಕೆ. ಸಹನಾ ಹೇಳೋದ್ರಲ್ಲಿ ಸರಿ ಇಲ್ಲಾ ಅಂದ್ರೆ ಡೈವೋರ್ಸ್ ಕೊಡ್ಸಿ. ಅದ್ಬಿಟ್ಟು ಕೊಲೆ ಮಾಡಿದ್ದಾಳೆ ಅನ್ನೋ ತರ ಜೈಲಿಗೆ ಕಳಿಸ್ತಾ ಇದೀರಲ್ಲ. ಡೈರೆಕ್ಟರ್ ಸಾಹೇಬರೇ ಒಮ್ಮೆ ಕೋರ್ಟ್ನಲ್ಲಿ ಹೋಗಿ ನೋಡಿ ನಂತರ ಶೂಟಿಂಗ್ ಮಾಡಿ. ಹುಚ್ಚುಚ್ಚಾಗಿ ತೋರಿಸಬೇಡಿ ಕೋರ್ಟ್ ಸೀನ್ಗಳನ್ನ ಅಂತ ಸಿಟ್ಟು ವ್ಯಕ್ತಪಡಿಸಿದ್ದಾರೆ. ಕೋರ್ಟ್ ನಲ್ಲಿ ಇಷ್ಟು ಬೇಗ ತೀರ್ಮಾನ ಸಿಕ್ಕಿರೋದು ಒಂದು ಇತಿಹಾಸ ಬಿಡಿ ಅಂತ ವ್ಯಂಗ್ಯ ಸಹಾ ಮಾಡ್ತಾ ಇದ್ದಾರೆ.
ಒಟ್ನಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಕೋರ್ಟ್ ಸೀನ್ ಬಗ್ಗೆ ಪರ ವಿರೋಧ ಮಾತುಗಳು ಕೇಳಿ ಬರ್ತಾ ಇದೆ. ಕೆಲವರು ಇದು ಅನ್ಯಾಯ, ಸಹನಾಗೆ ನ್ಯಾಯ ಸಿಗಬೇಕು ಅಂತಾನೂ ಕಾಮೆಂಟ್ ಮಾಡಿದ್ರೆ, ಒಂದಷ್ಟು ಜನರು ಈ ಕೋರ್ಟ್ ದೃಶ್ಯವೇ ಸರಿಯಾಗಿಲ್ಲ, ಮೊದಲು ಕಾನೂನುಗಳ ಬಗ್ಗೆ ತಿಳ್ಕೊಂಡು ಸರಿಯಾದ ರೀತಿಯಲ್ಲಿ ತೋರ್ಸಿ ಅಂತಿದ್ದಾರೆ.