Neenade Na: ಮತ್ತೆ ಬರ್ತಿದ್ದಾರೆ ವಿಕ್ರಂ ವೇದ, ನೀನಾದೆ ನಾ ಹೊಸ ಅಧ್ಯಾಯದ ಬಗ್ಗೆ ಥ್ರಿಲ್ಲಾದ್ರು ಫ್ಯಾನ್ಸ್

Written by Soma Shekar

Published on:

---Join Our Channel---

Neenade Na: ಸ್ವಾರ್ ಸುವರ್ಣ ವಾಹಿನಿಯ ನಂಬರ್ ಒನ್ ಸೀರಿಯಲ್ ಅಂತಾನೇ ಹೆಸರನ್ನು ಮಾಡಿರುವ ನೀನಾದೆ ನಾ (Neenade Na) ಸೀರಿಯಲ್ ಕಿರುತೆರೆಯ ಪ್ರೇಕ್ಷಕರ ಅಚ್ಚು ಮೆಚ್ಚಿನ ಸೀರಿಯಲ್ ಗಳಲ್ಲಿ ಒಂದಾಗಿತ್ತು. ದಿಲೀಪ್ ಶೆಟ್ಟಿ (Dileep Shetty) ಅವರು ನಾಯಕ ವಿಕ್ರಂ ಆಗಿ, ಖುಷಿ ಶಿವು (Khushi Shivu)ಅವರು ನಾಯಕಿ ವೇದಾ ಆಗಿ ಕಾಣಿಸಿಕೊಂಡು, ಇವರಿಬ್ಬರ ನಡುವಿನ ಪ್ರೇಮದ ಕಥೆ ನೀನಾದೆ ನಾ ಇನ್ನೇನು ಮುಗೀತಿದೆ ಅನ್ನೋವಾಗ್ಲೇ ನೀನಾದೆ ನಾ ಕಥೆಯ ಹೊಸ ಅಧ್ಯಾಯ ವಾಹಿನಿ ಹೊಸ ಪ್ರೊಮೋ ಶೇರ್ ಮಾಡಿದೆ.‌

ಹೌದು, ಹೊಸ ಸೀರಿಯಲ್ ನಲ್ಲಿ ಮತ್ತೆ ದಿಲೀಪ್ ಮತ್ತು ಖುಷಿ ಅವರು ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ‌. ವಾಹಿನಿ ಶೇರ್ ಮಾಡಿರೋ ಪ್ರೊಮೊದಲ್ಲಿ ನಾಯಕನನ್ನ ಡಾನ್ ಹಾಗೂ ಜನರ ಪ್ರೀತಿ ಗಳಿಸಿದ ನಾಯಕನಂತೆ ತೋರಿಸಿಲಾಗಿದ್ರೆ, ನಾಯಕಿಯು ನಾಯಕನ ದಂಧೆಗಳನ್ನು ನಿಲ್ಲಿಸಲು ಅವನಿಗೆ ಬುದ್ಧಿ ಕಲಿಸಲು ಎದುರಾಗಿ ನಿಂತ ಧೈರ್ಯವಂತೆ ಅನ್ನೋ ತರ ಕಂಡಿದ್ದಾಳೆ.

ಎರಡು ವಿಭಿನ್ನವಾದ ವ್ಯಕ್ತಿತ್ವಗಳ ಪಾತ್ರಗಳಾಗಿ ಇಲ್ಲಿ ನಾಯಕ ಮತ್ತು ನಾಯಕಿ ಕಂಡಿದ್ದಾರೆ. ಹೊಸ ಸೀರಿಯಲ್ ನಲ್ಲಿ ನಾಯಕ ಮತ್ತು ನಾಯಕಿ ಹೆಸರುಗಳು ಸಹಾ ವಿಕ್ರಂ ಮತ್ತು ವೇದಾನೇ ಆಗಿರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಹೊಸ ಪ್ರೊಮೊ ಅಭಿಮಾನಿಗಳಿಗೆ ಮಾತ್ರ ಸಖತ್ ಖುಷಿ ನೀಡುತ್ತಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ನೀನಾದೆ ನಾ ಕೊನೆಯ ಎಪಿಸೋಡ್ ಗಳು ಪ್ರಸಾರವಾಗುವ ಬಗ್ಗೆ ವಾಹಿನಿ ಶೇರ್ ಮಾಡಿದ ಪ್ರೊಮೋ ನೋಡಿ ಸೀರಿಯಲ್ ಮುಗೀತಿದೆ ಎಂದು ಬೇಸರಗೊಂಡವರಿಗೆ ಈಗ ವಿಕ್ರಂ ವೇದಾ ಹೊಸ ರೂಪದಲ್ಲಿ ಬರುವ ವಿಚಾರವು ಥ್ರಿಲ್ಲಿಂಗ್ ಅನುಭವ ನೀಡಿದೆ.

Hrithik Roshan: ನಿಮಗೆ ನಾಚಿಕೆ ಆಗಲ್ವಾ? ಹೃತಿಕ್ ಮೇಲೆ ಫ್ಯಾನ್ಸ್ ಆಕ್ರೋಶ, ಒಂದು ವೀಡಿಯೋ ಹಚ್ಚಿದ ಕಿಚ್ಚು

Leave a Comment