Neenade Na: ನಂ.01 ಆಗಿರೋ ನೀನಾದೆ ನಾ ಸೀರಿಯಲ್ ಮುಕ್ತಾಯ ಆಗ್ತಿರೋದ್ಯಾಕೆ? ಬೇಸರದಲ್ಲಿ ಪ್ರೇಕ್ಷಕರು

Written by Soma Shekar

Published on:

---Join Our Channel---

Neenade Na : ಕೆಲವೊಂದು ವಾಹಿನಿಗಳಲ್ಲಿ ಸೀರಿಯಲ್ ಗಳು (Serials) ಕಥೆ ಎಲ್ಲಿಂದ ಎಲ್ಲಿಗೋ ಹೋಗಿ ಏನೇನೋ ಆಗಿ, ಸೋಶಿಯಲ್ ಮೀಡಿಯಾಗಳಲ್ಲಿ ಜನರ ಟೀಕೆ, ಟಿಪ್ಪಣಿ ಬಂದು ಟ್ರೋಲ್ ಆದರೂ ಮೆಗಾ ಸೀರಿಯಲ್ ಗಳಾಗಿ ವರ್ಷಗಳ ಗಟ್ಟಲೇ ಪ್ರಸಾರ ಕಂಡರೆ ಇನ್ನೂ ಕೆಲವು ವಾಹಿನಿಗಳಲ್ಲಿ ಜನರ ಮೆಚ್ಚುಗೆ ಪಡೆದ ಸೀರಿಯಲ್ ಗಳೇ ಬಹಳ ಬೇಗ ಮುಕ್ತಾಯವಾಗುತ್ತವೆ.

ಈಗ ಜನ ಮೆಚ್ಚುಗೆ ಪಡೆದಿದ್ದ ನೀನಾದೆ ನಾ‌ (Neenade Na) ಸೀರಿಯಲ್ ಸಹಾ ಕೊನೆಯಾಗುತ್ತಿದ್ದು, ಈ ವಿಚಾರವನ್ನು ಸೀರಿಯಲ್ ತಂಡವೇ ಹೇಳಿದ್ದು, ಒಂದು ವೀಡಿಯೋ ಸಿದ್ಧಪಡಿಸಿ ಹೇಳಿರುವುದು ಅಚ್ಚರಿಯನ್ನು ಮೂಡಿಸಿದೆ. ಸಾಮಾನ್ಯವಾಗಿ ಸೀರಿಯಲ್ ಮುಗಿಯೋದನ್ನ ವಾಹಿನಿ ಅಥವಾ ಸೀರಿಯಲ್ ತಂಡ ಹೇಳೋದಿಲ್ಲ. ವೀಕ್ಷಕರೇ ಊಹಿಸಿರುತ್ತಾರೆ.‌

ಆದರೆ ನೀನಾದೆ ನಾ ಸೀರಿಯಲ್ ನ ಅಂತಿಮ ಎಪಿಸೋಡ್ ಗಳು ಪ್ರಸಾರ ಮಾಡುವ ವಿಚಾರವನ್ನು ಹೇಳಲಾಗಿದ್ದು, ವೀಡಿಯೋದಲ್ಲಿ ಹೀರೋಯಿನ್ ವೇದಾ ನಾನು ಮತ್ತೆ ಬರ್ತೀನಿ ಎಂದು ಹೇಳ್ತಾಳೆ. ಆಗ ವಿಕ್ರಮ್ ಪ್ರತಿ ಅಂತ್ಯಕ್ಕೂ ಹೊಸ ಆರಂಭ ಇರುತ್ತದೆ ಅಂತ ಹೇಳ್ತಾನೆ. ಅಲ್ಲಿಗೆ ಈ ಸೀರಿಯಲ್ ಹೊಸ ಸರ್ಪ್ರೈಸ್ ಕೊಡಲಿದೆ ಎನ್ನೋದು ಪಕ್ಕಾ ಆಗಿದೆ.

ಸ್ಟಾರ್ ಸುವರ್ಣ ವಾಹಿನಿಯ ಸೀರಿಯಲ್ ಗಳ ಟಿಆರ್‌ಪಿ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ನೀನಾದೆ ನಾ ಮುಗಿಯುತ್ತಿದೆ ಎನ್ನುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಬಹುಶಃ ಹೊಸ ರಿಯಾಲಿಟಿ ಶೋ ಗಾಗಿ ಸೀರಿಯಲ್ ನ ಮುಗಿಸುತ್ತಿರಬಹುದು ಎನ್ನುವ ಊಹೆಯನ್ನು ಮಾಡುತ್ತಿದ್ದಾರೆ ಪ್ರೇಕ್ಷಕರು.

Actor Darshan: ದರ್ಶನ್ ಇನ್ಯಾರ ಜೊತೆ ಮಾತಾಡ್ಬೇಕು? ಅಲ್ಲಿ ಕ್ರಿಮಿನಲ್ಸ್ ಅಲ್ದೇ ಮತ್ಯಾರು ಸಿಕ್ತಾರೆ ? ಸುಮಲತಾ ಅಂಬರೀಶ್

Leave a Comment