Mokshagna: ಸಿನಿಮಾ ರಂಗಕ್ಕೆ ಬಾಲಯ್ಯನ ಪುತ್ರನ ಭರ್ಜರಿ ಎಂಟ್ರಿ; ಮೊದಲ ಸಿನಿಮಾಕ್ಕೆ ಸ್ಟಾರ್ ನಿರ್ದೇಶಕ ಆ್ಯಕ್ಷನ್, ಕಟ್

Written by Soma Shekar

Published on:

---Join Our Channel---

Mokshagna : ತೆಲುಗು ಸಿನಿಮಾ ರಂಗದ ಹಿರಿಯ ನಟ,‌ ಸ್ಟಾರ್ ನಟ ಬಾಲಕೃಷ್ಣ ಅವರ(Nandamuri Balakrishna) ಪುತ್ರ ಮೋಕ್ಷಜ್ಞ (Mokshagna) ಸಹಾ ಟಾಲಿವುಡ್ ಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಲೇ ಇದೆಯಾದರೂ ಯಾವಾಗ ಎಂಟ್ರಿ ಕೊಡ್ತಾರೆ ಅನ್ನೋದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಮೋಕ್ಷಜ್ಞ ಸಿನಿಮಾಕ್ಕೆ ಎಂಟ್ರಿ ಕೊಡೋದು ಅಧಿಕೃತವಾಗಿ ಘೋಷಣೆ ಆಗಿದೆ.

ನಿನ್ನೆ ಅಂದರೆ ಸೆಪ್ಟೆಂಬರ್ 6 ರಂದು ಮೋಕ್ಷಜ್ಞ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದೆ. ಸಿನಿಮಾ ರಂಗಕ್ಕೆ ಎಂಟ್ರಿ ನೀಡೋದಕ್ಕೆ ಬೇಕಾದ ರೀತಿಯಲ್ಲಿ ಮೋಕ್ಷಜ್ಞ ಸಿದ್ಧತೆ ನಡೆಸಿದ್ದಾರೆ.

ಸಿನಿಮಾ ಇಂಡಸ್ಟ್ರಿಗೆ ಯಾವ ರೀತಿ ಇರಬೇಕೋ ಹಾಗೆ ಅಂದರೆ ಭರ್ಜರಿ ಫಿಟ್ ಆಗಿ ಮೋಕ್ಷಜ್ಞ ಎಂಟ್ರಿ ಕೊಡ್ತಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ಸಖತ್ ಸ್ಲಿಮ್ ಮತ್ತು ಸ್ಮಾರ್ಟ್ ಆಗಿ ಮೋಕ್ಷಜ್ಞ ಕಾಣಿಸಿಕೊಂಡಿದ್ದಾರೆ.‌ ಈ ಸಿನಿಮಾಕ್ಕೆ ಸಿಂಬಾ (Simba) ಎನ್ನುವ ಟೈಟಲ್ ಅನ್ನು ನೀಡಿದ್ದಾರೆ.

ಮೋಕ್ಷಜ್ಞ ಅವರ ಮೊದಲ ಸಿನಿಮಾವನ್ನು ‘ಹನುಮಾನ್’ ಮೂಲಕ ದೊಡ್ಡ ಯಶಸ್ಸನ್ನು ಪಡೆದುಕೊಂಡ ನಿರ್ದೇಶಕ ಪ್ರಶಾಂತ್ ವರ್ಮಾ (Prashant Varma) ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕಾಗಿ ಮೋಕ್ಷಜ್ಞ ನಟನೆ, ಡ್ಯಾನ್ಸ್ ನಲ್ಲಿ ತರಬೇತಿ ಪಡೆದುಕೊಂಡು ಸಜ್ಜಾಗಿದ್ದಾರೆ.

Kamal Haasan: ಕಲಿಕೆಗೆ ವಯಸ್ಸು ಅಡ್ಡವಲ್ಲ, 69ರ ವಯಸ್ಸಲ್ಲಿ ಓದಲು ಅಮೆರಿಕಾಕ್ಕೆ ಹೋದ ಕಮಲ್; ಯಾವ ವಿಷಯ ಗೊತ್ತಾ?

Leave a Comment