Bollywood Actress: ನನ್ನದು ಆ ನಟಿಯಷ್ಟು ದೊಡ್ಡದಾಗಿಲ್ಲ, ಬಾಲಿವುಡ್ ನಟಿಯ ಬೋಲ್ಡ್ , ಶಾಕಿಂಗ್ ಹೇಳಿಕೆ

Written by Soma Shekar

Published on:

---Join Our Channel---

Bollywood Actress: ಕೆಲವು ನಟಿಯರು ತಮ್ಮ ಸಿನಿಮಾಗಳಿಗಿಂತ ತಮ್ಮ ಖಾಸಗಿ ಜೀವನ ಮತ್ತು ನೀಡುವ ಹೇಳಿಕೆಗಳಿಂದಲೇ ದೊಡ್ಡ ಸುದ್ದಿಯಾಗುತ್ತಾರೆ. ಅಂತಹ ನಟಿಯರಲ್ಲಿ (Bollywood Actress) ಹಿರಿಯ ನಟಿ ನೀನಾ ಗುಪ್ತಾ ಸಹಾ ಒಬ್ಬರಾಗಿದ್ದಾರೆ. ನೀನಾ ಗುಪ್ತಾ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಹೆಸರನ್ನು ಮಾಡಿದಂತಹ ನಟಿ. ಮದುವೆಗೂ ಮೊದಲೇ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಟಿ ಮದುವೆಗೆ ಮೊದಲೇ ನಡೆದ ಅಫೇರ್ ಬಗ್ಗೆ ಯಾವುದೇ ಮುಜುಗರ ಇಲ್ಲದೇ ಮಾತನಾಡುತ್ತಾರೆ.

ಈಗ ಸೋಶಿಯಲ್ ಮೀಡಿಯಾದಲ್ಲಿ ನೀನಾ ಗುಪ್ತಾ (Neena Gupta) ಅವರು ಈ ಹಿಂದೆ ಒಮ್ಮೆ ಕಪಿಲ್ ಶರ್ಮಾ ನಿರೂಪಣೆ ಮಾಡುವ ಶೋ ಒಂದರಲ್ಲಿ ಆಡಿದ್ದ ಮಾತುಗಳ ವೀಡಿಯೋ ತುಣುಕುಗಳು ಮತ್ತೊಮ್ಮೆ ವೈರಲ್ ಆಗಿದೆ. ಬಾಲಿವುಡ್ ನಲ್ಲಿ ಬಂದ ಸಿನಿಮಾ ಪಂಗಾದ ಪ್ರಚಾರ ಕಾರ್ಯದ ಭಾಗವಾಗಿ ಕಪಿಲ್ ಶರ್ಮಾ (Kapil Sharma) ಶೋ ಗೆ ಬಂದಿದ್ದ ವೇಳೆ ನೀನಾ ಗುಪ್ತಾ ಯಾವುದೇ ಹಿಂಜರಿಕೆ ಇಲ್ಲದೇ ಈ ಮಾತುಗಳನ್ನಾಡಿದ್ದರು.

ಇಷ್ಟಕ್ಕೂ ವಿಚಾರ ಏನು ಎನ್ನುವುದಾದರೆ ಕಪಿಲ್ ನೀನಾ ಅವರ ಜೊತೆ ಮಾತನಾಡುವಾಗ ನೀವು ಹಾಲಿವುಡ್ ನ ಬೇವಾಚ್ ಸಿನಿಮಾದ ನಾಯಕಿ ಪಮೇಲಾ ಆ್ಯಂಡರ್ಸನ್ ಪಾತ್ರವನ್ನು ಮಾಡಬೇಕು ಅನ್ನೋ ಆಸೆ ಇದ್ಯಂತೆ ಹೌದಾ ಎನ್ನುವ ಪ್ರಶ್ನೆಯನ್ನ ಕೇಳಿದಾಗ ನೀನಾ ಅದಕ್ಕೆ ಉತ್ತರ ನೀಡ್ತಾ ನನಗೆ ಅಷ್ಟು ದೊಡ್ಡ ಬೂಬ್ಸ್ ಇಲ್ಲ ಎನ್ನುವ ಮಾತನ್ನು ಹೇಳಿದ್ದರು. ಕಪಿಲ್ ಆಗ ವೆಜ್ ಆನ್ಸರ್ ಕೊಡಿ ಎಂದಾಗ ನೀನಾ ನಿಮ್ಮ ಪ್ರಶ್ನೆ ಸಹಾ ವೆಜ್ ಆಗಿರಬೇಕಲ್ವಾ ಎಂದಿದ್ದರು.

ನೀನಾ ಗುಪ್ತಾ ಅವರ ಮಾತು ಕೇಳಿ ನಟಿ ಕಂಗನಾ ರಣಾವತ್ ಸೇರಿದಂತೆ ಉಳಿದವರು ಸಹಾ ಶಾಕ್ ಆಗಿದ್ದರು. ಈ ವೇಳೆ ಈ ಶೋನಲ್ಲಿ ಭಾಗವಹಿಸುವ ಹಿರಿಯ ನಟಿ ಅರ್ಚನಾ ಪೂರಣ್ ಸಿಂಗ್ ಜೋರಾಗಿ ನಗುತ್ತಾ, ನೀನಾ ಬಿಟ್ಟರೆ ಇನ್ಯಾರೂ ಸಹಾ ಹೀಗೆ ಓಪನ್ ಆಗಿ ಮಾತಾಡೋಕೆ ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ಸಹಾ ಹೇಳಿದ್ದರು.

Leave a Comment