Sai Dharam Tej: ಮೆಗಾ ಕುಟುಂಬದ ಕುಡಿಗಳ ವೈಮನಸ್ಸು, ಮನೆ ಜಗಳ ಈಗ ಸೋಶಿಯಲ್ ಮೀಡಿಯಾಕ್ಕೂ ಎಂಟ್ರಿ

Written by Soma Shekar

Published on:

---Join Our Channel---

Sai Dharam Tej: ಟಾಲಿವುಡ್ ನಲ್ಲಿ (Tollywood) ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ ಕುಟುಂಬ ಅಲ್ಲಿನ ದೊಡ್ಡ ಸಿನಿಮಾ ಕುಟುಂಬಗಳಲ್ಲಿ ಒಂದಾಗಿದೆ. ತೆಲುಗು ಚಿತ್ರರಂಗ ಎಂದಾಗ ಅಲ್ಲಿ ಎನ್ ಟಿ ರಾಮಾರಾವ್ ಕುಟುಂಬ , ಅಕ್ಕಿನೇನಿ ನಾಗೇಶ್ವರ ರಾವ್ ಕುಟುಂಬ ಹಾಗೂ ಚಿರಂಜೀವಿ ಅವರ ಕುಟುಂಬಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ. ಅದರಲ್ಲೂ ಚಿರಂಜೀವಿ ಅವರ ಕುಟುಂಬದಲ್ಲಿ ಏಳೆಂಟು ಜನ ಹೀರೋಗಳಾಗಿ ಗುರುತಿಸಿಕೊಂಡಿದ್ದಾರೆ ಎನ್ನುವುದು ವಿಶೇಷ‌.

ಆದರೆ ಮೆಗಾಸ್ಟಾರ್ ಫ್ಯಾಮಿಲಿ ಜೊತೆಗೆ ಅಲ್ಲು ಅರ್ಜುನ್ (Allu Arjun) ಅವರ ಬಾಂಧವ್ಯ ಮೊದಲಿನ ಹಾಗಿಲ್ಲ ಎನ್ನುವ ಸುದ್ದಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಚುನಾವಣಾ ಸಮಯದಲ್ಲಿ ಸೋದರ ಮಾವ ಪವನ್ ಕಲ್ಯಾಣ್ ಬದಲಾಗಿ ಜಗನ್ ಮೋಹನ್‌ ರೆಡ್ಡಿ ಪಕ್ಷದ ಅಭ್ಯರ್ಥಿಯ ಪರವಾಗಿ ಅಲ್ಲು ಅರ್ಜುನ್ ಸತಿ ಸಮೇತರಾಗಿ ಪ್ರಚಾರ ಮಾಡಿದ್ದು ಎರಡು ಕುಟುಂಬಗಳ ನಡುವೆ ಸಮಸ್ಯೆ ಇದೆ ಎನ್ನುವುದಕ್ಕೆ ಪುಷ್ಠಿ ನೀಡಿತ್ತು.

ಪವನ್ ಕಲ್ಯಾಣ್ (Pawan Kalyan) ದಾಖಲೆ ಮಟ್ಟದ ವಿಜಯ ಪಡೆದು ಇಡೀ ಕುಟುಂಬ ಸಂಭ್ರಮಿಸುವಾಗ ಅಲ್ಲು ಅರ್ಜುನ್ ಒಂದು ಟ್ವೀಟ್ ಮಾಡಿ ಶುಭಾಶಯ ಹೇಳಿದ್ದು ಬಿಟ್ಟರೆ, ಪವನ್ ಕಲ್ಯಾಣ್ ಅವರ ಗೆಲುವನ್ನು ಮೆಗಾ ಕುಟುಂಬ ಸಂಭ್ರಮಿಸುವಾಗ ಅಲ್ಲು ಅರ್ಜುನ್ ಎಲ್ಲೂ ಸಹಾ ಕಾಣಿಸಿಕೊಂಡಿಲ್ಲ. ಅಲ್ಲದೇ ಅಲ್ಲು ಅರ್ಜುನ್ ಬೆಂಬಲ ನೀಡಿದ್ದ ಅಭ್ಯರ್ಥಿಯ ಸೋಲಿನಿಂದ ಅವರನ್ನು ಟ್ರೋಲ್ ಸಹಾ ಮಾಡಲಾಗುತ್ತಿದೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ಮೆಗಾ ಕುಟುಂಬದ ಕುಡಿ, ಸ್ಟಾರ್ ಹೀರೋ ಆಗಿರುವ ಸಾಯಿ ಧರಮ್ ತೇಜಾ (Sai Dharam Tej)ಅವರು ಸೋಶಿಯಲ್ ಮೀಡಿಯಾಗಳಲ್ಲಿ ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹ ರೆಡ್ಡಿ ಇಬ್ಬರನ್ನೂ ಸಹಾ ಅನ್ ಫಾಲೋ ಮಾಡಿದ್ದಾರೆ. ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ನ ಮಾತ್ರ ಅವರು ಫಾಲೋ ಮಾಡ್ತಿದ್ದು, ಅಲ್ಲು ಅರ್ಜುನ್ ಮತ್ತು ಮೆಗಾ ಫ್ಯಾಮಿಲಿ ನಡುವೆ ಸಮಸ್ಯೆ ಇದೆ ಎನ್ನುವುದಕ್ಕೆ ಇದೊಂದು ಹೊಸ ಉದಾಹರಣೆ ಆಗಿದೆ.

Leave a Comment