Mohan Lal: ಕೇರಳದ ವಯನಾಡಿನಲ್ಲಿ ನಡೆದಂತಹ ಭೀಕರವಾದ ಭೂಕುಸಿತದ (Waynad Landslide) ವಿಚಾರವು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಅಲ್ಲಿ ನಡೆದ ದುರಂತವನ್ನು ಕಂಡು ಅನೇಕರು ಸಂತಾಪವನ್ನು ಸೂಚಿಸಿದ್ದಾರೆ ಹಾಗೂ ಸಂತ್ರಸ್ತರಿಗೆ ದೇಶದ ವಿವಿಧ ಕಡೆಗಳಿಂದ ಪರಿಹಾರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯು ಹರಿದು ಬರುತ್ತಿದೆ. ಸ್ಟಾರ್ ಗಳು ದೇಣಿಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಕೇರಳದಲ್ಲಿ (Kerala) ನಡೆದ ಈ ದುರಂತದಿಂದ ಸಂತ್ರಸ್ತರಾದವರ ನೆರವಿಗಾಗಿ ಮತ್ತು ಪುನರ್ವಸತಿಗಾಗಿ ಸ್ಟಾರ್ ಕಲಾವಿದರು ಲಕ್ಷಗಳು ಹಾಗೂ ಕೋಟಿಗಳ ಮೊತ್ತದಲ್ಲಿ ದೇಣಿಗೆಯನ್ನು ನೀಡುತ್ತಿದ್ದಾರೆ. ಮಲೆಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ ಮತ್ತು ಅವರ ಮಗ ದುಲ್ಕರ್ ಸಲ್ಮಾನ್ ಜಂಟಿಯಾಗಿ ಸಿಎಂಡಿಆರ್‌ಎಫ್‌ಗೆ 35 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮವು ಸಂತ್ರಸ್ತ ಸಮುದಾಯಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸುತ್ತಿದೆ. ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಖ್ಯಾತ ನಟ ಮೋಹನ್ ಲಾಲ್ (Mohan Lal) ಅವರು ಶನಿವಾರ ತಮ್ಮ ಸೇನಾ ಸಮವಸ್ತ್ರವನ್ನು ಧರಿಸಿ ಭೂಕುಸಿತ ಪೀಡಿತ ವಯನಾಡ್ ತಲುಪಿದ್ದಾರೆ.
ಮೆಪ್ಪಾಡಿಯ ಸೇನಾ ಶಿಬಿರಕ್ಕೆ ಆಗಮಿಸಿದ ನಟ, ಅಧಿಕಾರಿಗಳೊಂದಿಗೆ ಕೆಲಹೊತ್ತು ಚರ್ಚೆ ನಡೆಸಿ, ಇತರರೊಂದಿಗೆ ಭೂಕುಸಿತ ಪೀಡಿತ ಪ್ರದೇಶಕ್ಕೆ ತೆರಳಿದರು. ಇದು ಮಾತ್ರವೇ ಅಲ್ಲದೇ ನಟ ಮೋಹನ್ ಲಾಲ್ ಅವರು ಸಂತ್ರಸ್ತರ ಪುನರ್ವಸತಿಗಾಗಿ ಪರಿಹಾರ ನಿಧಿಗೆ ಮೂರು ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
Chiranjeevi: ವಯನಾಡು ಸಂತ್ರಸ್ತರಿಗೆ ಮಿಡಿದ ಚಿರಂಜೀವಿ, ರಾಮ್ ಚರಣ್; ದೇಣಿಗೆ ನೀಡಿದರು ದೊಡ್ಡ ಮೊತ್ತ