Malaika Arora: ರಸ್ತೇಲಿ ಬಿದ್ದ ಕಸ ಎತ್ತಿದ ಮಲೈಕಾ, ಸಾಕು ನಾಟಕ ಅಂತ ತಿವಿದ ನೆಟ್ಟಿಗರು ಹೇಳಿದ್ರು ಶಾಕಿಂಗ್ ಸತ್ಯ

Written by Soma Shekar

Published on:

---Join Our Channel---

Malaika Arora: ಫಿಟ್ನೆಸ್ ವಿಚಾರದಿಂದಾಗಿಯೇ ಹೆಸರು ಮತ್ತು ಜನಪ್ರಿಯತೆಯನ್ನು ಪಡೆದಿರುವ ಬಾಲಿವುಡ್ (Bollywood) ನಟಿಯರಲ್ಲಿ ಮಲೈಕಾ ಅರೋರಾ (Malaika Arora) ಸಹಾ ಒಬ್ಬರಾಗಿದ್ದಾರೆ. ‌ನಟಿ ತಮ್ಮ ಫಿಟ್ನೆಸ್ ವಿಚಾರದಲ್ಲಿ ಎಷ್ಟು ಗಮನಕೊಡ್ತಾರೆ ಅಂದರೆ ಜಿಮ್ ಗೆ ಬರುವಾಗಲೇ ಬಹುತೇಕ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ನಟಿ ಬೀಳುತ್ತಾರೆ. ಪ್ರತಿಬಾರಿಯೂ ತನ್ನ ಜಿಮ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುವ ನಟಿ ಆಗಾಗ ವರ್ಕ್ ಔಟ್ ವೀಡಿಯೋಗಳನ್ನ ಸಹಾ ಶೇರ್ ಮಾಡಿಕೊಳ್ಳುತ್ತಾರೆ.

ಇಂದು ಮಲೈಕಾ ಅವರ ಹೊಸ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಲ್ಲಿ ನಟಿಯ ಮತ್ತೊಂದು ಗುಣ ಹೊರ ಬಿದ್ದಿದೆ. ಪ್ರತಿದಿನದ ಹಾಗೆ ನಟಿ ತಮ್ಮ ಜಿಮ್ ಗೆ (Gym) ಹೋಗುವ ದಾರಿಯಲ್ಲಿ ನಡೆದು ಹೋಗುವಾಗ ಹೊರಗೆ ಗೇಟ್ ಹತ್ತಿರ ಕಸ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಕಾಲಿನಿಂದ ಕಸವನ್ನೆಲ್ಲಾ ಒಂದು ಕಡೆ ಎಳೆದು ನಂತರ ತಮ್ಮ ಕೈಗಳಿಂದ ಕಸವನ್ನು ಎತ್ತಿಕೊಂಡು ಅದನ್ನು ಕಸದ ತೊಟ್ಟಿಗೆ ಹಾಕಿದ್ದಾರೆ.

ನಟಿ ಕಸವನ್ನು ಅದರ ಸರಿಯಾದ ಜಾಗಕ್ಕೆ ಸೇರಿಸುವ ಮೂಲಕ ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಮಲೈಕಾ ಹೀಗೆ ಕಸವನ್ನು ಎತ್ತಿ ಹಾಕುವ ವೇಳೆಯಲ್ಲಿ ಪಾಪರಾಜಿಗಳು ಒಂದಷ್ಟು ಫೋಟೋಗಳನ್ನ ಕ್ಲಿಕ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ. ಆದರೆ ವೈರಲ್ ಆದ ಫೋಟೋಗಳನ್ನು ನೋಡಿ ಮೆಚ್ಚುಗೆಗಳು ಹರಿದು ಬರುವುದರ ಜೊತೆಗೆ ನಟಿಯನ್ನು ಭರ್ಜರಿಯಾಗಿ ಟ್ರೋಲ್ ಸಹಾ ಮಾಡಲಾಗುತ್ತಿದೆ.‌

ಕಾಮೆಂಟ್ ಮಾಡಿವರೊಬ್ಬರು ನಟಿ ಎಲ್ಲಾ ಕಡೆ ಬಹಳ ಚೆನ್ನಾಗಿ ನಟಿಸ್ತಾರೆ ರೋಲ್ ಕ್ಯಾಮರಾ ಆ್ಯಕ್ಷನ್ ಎಂದಿದ್ದಾರೆ. ಅಲ್ಲಿ ಪಾಪರಾಜಿಗಳ ಕ್ಯಾಮರಾ ಆನ್ ನಲ್ಲಿ ಇದೆ ಅನ್ನೋದು ಮಲೈಕಾಗೆ ಗೊತ್ತಿದೆ ಅದಕ್ಕೆ ಸ್ವಚ್ಚತೆ ಬಗ್ಗೆ ಇಷ್ಟೆಲ್ಲಾ ಕಾಳಜಿ ಅಂತ ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ. ಇವರು ತಮ್ಮ ಮನೆಯಲ್ಲಿ ಕಸ ಎತ್ತೋಕೆ ಕೆಲಸದವರನ್ನು ಇಟ್ಕೊಳ್ತಾರೆ ಆದರೆ ಜನರ ಮುಂದೆ ಶೋ ಆಫ್ ಮಾಡೋಕೆ ಬೀದಿಯ ಕಸ ತೆಗೀತಾರೆ ಅಂತ ಟೀಕೆ ಮಾಡಿದ್ದಾರೆ.

Leave a Comment