Malaika Arora: ಮಲೈಕಾ ಅರ್ಜುನ್ ಕಪೂರ್ ಬ್ರೇಕಪ್, ಕೊನೆಗೂ ಬಾಯಿ ಬಿಟ್ಟ ಮಲೈಕಾ, ಸತ್ಯ ತಿಳಿಸಿದ ನಟಿ

Written by Soma Shekar

Published on:

---Join Our Channel---

Malaika Arora : ಬಾಲಿವುಡ್ ನಟಿ, ವಯಸ್ಸು 50 ಆದ್ರೂ ಬಳಕುವ ಬಳ್ಳಿಯಂತೆ ತನ್ನ ಫಿಟ್ನೆಸ್ ನಿಂದಲೇ ಸುದ್ದಿಯಾಗುವ ಮಲೈಕಾ ಅರೋರ (Malaika Arora) ಬಾಲಿವುಡ್ ನ ಯುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಮಲೈಕಾ ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದ ಮೇಲೆ ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಸಾಕಷ್ಟು ಸಲ ಸುದ್ದಿಯಾಗಿದ್ದಾರೆ. ಇಬ್ಭರೂ ಆಗಾಗ ಪ್ರವಾಸ, ಪಾರ್ಟಿ ಅಂತ ಎಂಜಾಯ್ ಮಾಡುತ್ತಾ ಫೋಟೋ, ವೀಡಿಯೋ ಶೇರ್ ಮಾಡುತ್ತಿದ್ದರು.

ಅರ್ಜುನ್ ಕಪೂರ್ ಮತ್ತು ಮಲೈಕಾ ಇಬ್ಬರೂ ಯಾವಾಗ ಮದುವೆ ಆಗ್ತಾರೆ ಎಂದು ಮಾದ್ಯಮಗಳಲ್ಲಿ ಅವರನ್ನು ಹಲವು ಬಾರಿ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದಲ್ಲದೇ ಆಗಾಗ ಇವರ ನಡುವಿನ ಬ್ರೇಕಪ್ (Malaika Arjun Breakup) ವಿಚಾರವಾಗಿ ಸಹಾ ಸುದ್ದಿಗಳು ಆಗುತ್ತದೆ. ಈಗ ಮತ್ತೊಮ್ಮೆ ಮಲೈಕಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ವಿಚಾರ ಎಲ್ಲೆಡೆ ಪ್ರಮುಖ ಸುದ್ದಿಯಾಗಿದ್ದು, ಈಗ ನಟಿ ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇಂತಹ ಟೀಕೆ ಟಿಪ್ಪಣಿಗಳನ್ನು ನೋಡಿಕೊಂಡೇ ನಾನು ನನ್ನ ವೃತ್ತಿ ಜೀವನವನ್ನು ಮಾಡಿದ್ದೇನೆ . ಆದ್ದರಿಂದ ಇದೆಲ್ಲವೂ ಸಹಾ ನನ್ನ ವೃತ್ತಿ ಜೀವನದ ಒಂದು ಭಾಗವಾಗಿದೆ. ಇಂತಹ ವಿಚಾರಗಳಿಗಾಗಿ ನಾನು ನನ್ನ ಬುದ್ಧಿ, ಸಮಯ ಮತ್ತು ವಿವೇಕ ವನ್ನು ವ್ಯರ್ಥ ಮಾಡುವುದಕ್ಕೆ ಬಯಸುವುದಿಲ್ಲ ಎನ್ನುವ ಮಾತನ್ನು ಹೇಳುವ ಮೂಲಕ ಬ್ರೇಕಪ್ ವಿಚಾರಕ್ಕೆ ಬ್ರೇಕ್ ಹಾಕಿದ್ದಾರೆ.

ಯಾರೋ ಮಾಡುವಂತಹ ಆರೋಪ, ಟೀಕೆ ಮತ್ತು ವ್ಯಂಗ್ಯಗಳಿಗೆ ಉತ್ತರವನ್ನು ನೀಡುವ ಅಗತ್ಯ ಇಲ್ಲ. ನಾನು ಏನನ್ನೂ ಸಮರ್ಥಿಸಿಕೊಳ್ಳುವ ಅವಶ್ಯಕತೆ ಖಂಡಿತ ಇಲ್ಲ.‌ ನನ್ನ ವೈಯಕ್ತಿಕ ಅಥವಾ ವೃತ್ತಿಪರ ಜೀವನದ ಕುರಿತಾಗಿ ಯಾರಿಗೂ ಸ್ಪಷ್ಟನೆ ನೀಡಬೇಕಾದ ಅವಶ್ಯಕತೆ ನನಗೆ ಇಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

Leave a Comment