Malaika Arora: ಹೊಸ ಬಾಯ್ ಫ್ರೆಂಡ್ ಜೊತೆ ಮಲೈಕಾ ಡೇಟಿಂಗ್? ಅರ್ಜುನ ಕಪೂರ್ ನಂತ್ರ ಆಗ್ಲೇ ಮತ್ತೊಬ್ಬರ ಎಂಟ್ರಿ

Written by Soma Shekar

Published on:

---Join Our Channel---

Malaika Arora: ಬಾಲಿವುಡ್ ಮಂದಿಗೆ ಯಾವಾಗ ಯಾರ ಮೇಲೆ ಲವ್ ಆಗುತ್ತೆ, ಬ್ರೇಕಪ್ ಆಗುತ್ತೆ ಅನ್ನೋದನ್ನ ಊಹೆ ಮಾಡೋಕೆ ಆಗೋದಿಲ್ಲ. ಇತ್ತೀಚಿನ ದಿನಗಳಲ್ಲಿ ತಮ್ಮ ಬ್ರೇಕಪ್ ವಿಚಾರವಾಗಿಯೇ ಸಾಕಷ್ಟು ಸುದ್ದಿಯಾದವರು ನಟಿ ಮಲೈಕಾ ಅರೋರಾ (Malaika Arora). ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಮುಗಿದು ಹೋದ ಕಥೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅರ್ಜುನ್ ಕಪೂರ್ ಗಾಗಿ ಗಂಡ ಅರ್ಬಾಜ್ ಖಾನ್ ಗೆ ನಟಿ ಡಿವೋರ್ಸ್ ನೀಡಿದ್ದರು.

ಡಿವೋರ್ಸ್ ನಂತರ ಒಂದಷ್ಟು ವರ್ಷಗಳಿಂದಲೂ ಅರ್ಜುನ್ ಕಪೂರ್ (Arjun Kapoor) ಜೊತೆಗೆ ಮಲೈಕಾ ರಿಲೇಶನ್ ಶಿಪ್ ನಲ್ಲಿ ಇದ್ದರು. ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು, ಆಗಾಗ ವಿದೇಶ ಪ್ರವಾಸಕ್ಕೆ ಜೋಡಿಯಾಗಿ ಹಾರುತ್ತಿದ್ದರು. ಆದರೆ ‌ಮದುವೆ ಯಾವಾಗ ಅನ್ನೋದಕ್ಕೆ ಮಾತ್ರ ಉತ್ತರವನ್ನು ಕೊಡ್ತಾ ಇರ್ಲಿಲ್ಲ. ಆದ್ರೆ ಮದ್ವೆ ಅನ್ನೋದು ಈಗ ದೂರದ ಮಾತಾದ್ರೆ ಈಗಾಗಲೇ ಇವರ ಮಧ್ಯೆ ಬ್ರೇಕಪ್ ಆಗಿದೆ.

ತಮ್ಮ ಬ್ರೇಕಪ್ ವಿಚಾರವನ್ನು ಇವರು ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಎಲ್ಲರಿಗೂ ಅದು ಅರ್ಥವಾಗಿದೆ. ಈಗ ಬ್ರೇಕಪ್ ಸುದ್ದಿಗಳ ಬೆನ್ನಲ್ಲೇ ಮಲೈಕಾ ಮತ್ತೊಬ್ಬ ವ್ಯಕ್ತಿಯೊಡನೆ ಕಾಣಿಸಿಕೊಂಡಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಆ ವ್ಯಕ್ತಿಯ ಫೋಟೋವನ್ನ ಬ್ಲರ್ ಆಗಿ ಕಾಣುವಂತೆ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಮೇಲೆ ನೆಟ್ಟಿಗರು ಯಾರು ಆ ವ್ಯಕ್ತಿ ಅಂತ ಕುತೂಹಲದಿಂದ ಕೇಳುತ್ತಿದ್ದಾರೆ.

ಅನಂತ್ ಅಂಬಾನಿ ಮದುವೆಗೆ ಅರ್ಜುನ್ ಕಪೂರ್ ಮಾತ್ರ ಹಾಜರಾಗಿದ್ದರು. ಮಲೈಕಾ ಸ್ಪೈನ್ ನಲ್ಲಿ ಪ್ರವಾಸದಲ್ಲಿರೋ ಕಾರಣದಿಂದ ಅವರು ಮದುವೆಗೆ ಹಾಜರಾಗಿರಲಿಲ್ಲ. ಅಲ್ಲಿ ಎಂಜಾಯ್ ಮಾಡ್ತಿರೋ ಫೋಟೋಗಳನ್ನ ಶೇರ್ ಮಾಡ್ಕೊಂಡು ಬ್ಲರ್ ಮಾಡಿರೋ ಒಬ್ಬ ವ್ಯಕ್ತಿಯ ಫೋಟೋವನ್ನ ಸಹಾ ಶೇರ್ ಮಾಡಿದ್ದಾರೆ. ಇದನ್ನ ನೋಡಿದವರಿಗೆಲ್ಲಾ ಕಾಡಿದ ಪ್ರಶ್ನೆ ಮಲೈಕಾ ಆಗಲೇ ಮತ್ತೊಬ್ಬರ ಜೊತೆ ಡೇಟಿಂಗ್ ನಲ್ಲಿ ಇದ್ದಾರಾ? ಅನ್ನೋದಾಗಿದೆ.

ಕೆಲವು ದಿನಗಳ ಹಿಂದೆ ಮಲೈಕಾ ತಮ್ಮ ಇನ್ಸ್ಟಾಗ್ರಾಮ್​ ಸ್ಟೋರಿಯಲ್ಲಿ ರಿಲೇಷನ್ಶಿಪ್ ಕುರಿತಾಗಿ ಒಂದು ನೋಟ್ ಶೇರ್ ಮಾಡಿದ್ದರು. ಅದರಲ್ಲಿ, ‘ನಿಮ್ಮ ಹೃದಯ, ಮನಸ್ಸು ಹಾಗೂ ದೇಹದ ಜೊತೆ ನೀವು ಹೊಂದಿರುವ ಸಂಬಂಧವೇ ನಿಮ್ಮ ಜೀವನದಲ್ಲಿನ ಅತಿ ದೀರ್ಘವಾದ ರಿಲೇಷನ್​ಶಿಪ್​’ ಎಂದು ಬರೆದುಕೊಂಡಿದ್ದರು.

ಇದನ್ನ ನೋಡಿದ ಮೇಲೆ ನಟಿ ಅರ್ಜುನ್​ ಕಪೂರ್​ ಜೊತೆಗಿನ ತಮ್ಮ ಸ್ನೇಹ, ಸಂಬಂಧಕ್ಕೆ ಪೂರ್ಣ ವಿರಾಮವನ್ನು ಹಾಕಿದ್ದಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದಿದ್ದರು ನೆಟ್ಟಿಗರು. ಏನೇ ಆದರೂ ಕೂಡಾ ಬಾಲಿವುಡ್ ನಲ್ಲಿ ಮಾತ್ರ ಇಂತಹ ಸ್ನೇಹ, ಪ್ರೇಮ ಮತ್ತು ಸಂಬಂಧಗಳ ಆಯುಷ್ಯ ತೀರಾ ಕಡಿಮೆ ಅನ್ನೋದಂತೂ ಹಲವು ಸಲ ಸಾಬೀತಾಗಿದೆ.

Leave a Comment