Sitara Ghattamaneni : ಸಿನಿಮಾ ರಂಗದಲ್ಲಿ ಸ್ಟಾರ್ ನಟ, ನಟಿಯರ ಮಕ್ಕಳೂ ಸಹಾ ಬಹಳ ಬೇಗ ಜನಪ್ರಿಯತೆ ಪಡೆಯುತ್ತಾರೆ. ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಅವರ ಪುತ್ರಿ ಸಿತಾರಾ ಘಟ್ಟಮನೇನಿ (Sitara Ghattamaneni) ಈಗಾಗಲೇ ಸಾಕಷ್ಟು ಸದ್ದು, ಸುದ್ದಿಯಾಗಿರುವ ಸ್ಟಾರ್ ಕಿಡ್ ಅನ್ನೋದ್ರಲ್ಲಿ ಅನುಮಾನ ಇಲ್ಲ. ಮುಂದಿನ ದಿನಗಳಲ್ಲಿ ಸಿನಿಮಾಗಳಿಗೂ ಎಂಟ್ರಿ ನೀಡುವ ನಿರೀಕ್ಷೆಗಳು ಸಹಾ ಇದೆ. ಇವೆಲ್ಲವುಗಳ ನಡುವೆಯೇ ಸಿತಾರ ತಮ್ಮ ಮೆಚ್ಚಿನ ನಟಿ ಯಾರೆಂದು ಹೇಳಿದ್ದಾರೆ.
ಹೌದು, ಸಿತಾರ ತಮ್ಮ ಅಚ್ಚುಮೆಚ್ಚಿನ ನಟಿಯರು ಇಬ್ಬರು ನಟಿಯರ ಹೆಸರನ್ನು ಹೇಳಿದ್ದು ಈ ಇಬ್ಬರೂ ಸಹಾ ಕನ್ನಡದ ಸಿನಿಮಾಗಳಿಂದಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು ಎನ್ನುವುದು ಸುಳ್ಳಲ್ಲ. ಸಿತಾರಾ ಹೆಸರಿಸಿರುವ ಈ ಇಬ್ಬರೂ ನಟಿಯರು ಕನ್ನಡತಿಯರೇ ಆದರೆ ಟಾಲಿವುಡ್ ನಲ್ಲಿ ಈಗಾಗಲೇ ಸ್ಟಾರ್ ಡಂ ಪಡೆದಿರುವ ನಟಿಯರಾಗಿದ್ದಾರೆ.
ಸಿತಾರಾ ಅವರನ್ನು ನಿಮ್ಮ ನೆಚ್ಚಿನ ನಟಿ ಯಾರೆಂದು ಕೇಳಿದಾಗ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಶ್ರೀಲೀಲಾ (Sreeleela) ಹೆಸರುಗಳನ್ನು ಹೇಳಿದ್ದಾರೆ. ರಶ್ಮಿಕಾ ಈ ಹಿಂದೆ ಮಹೇಶ್ ಬಾಬು ಜೊತೆಗೆ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಲ್ಲದೇ ಸಿತಾರ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ರಶ್ಮಿಕಾ ಸಂದರ್ಶನ ಸಹಾ ಮಾಡಿದ್ದರು.
ಸರಿಲೇರು ನೀಕೆವ್ವರು ಸಿನಿಮಾದಿಂದಲೇ ಸಿತಾರ ಮತ್ತು ರಶ್ಮಿಕಾ ನಡುವೆ ಒಂದು ಸ್ನೇಹ ಮೂಡಿದೆ ಎನ್ನಬಹುದಾಗಿದೆ. ಆದ್ದರಿಂದಲೇ ಸಿತಾರ ತಮ್ಮ ನೆಚ್ಚಿನ ನಟಿಯರಲ್ಲಿ ರಶ್ಮಿಕಾರನ್ನ ಸೇರಿಸಿಕೊಂಡಿದ್ದಾರೆ. ಇನ್ನು ಶ್ರೀಲೀಲಾ ಸಹಾ ಮಹೇಶ್ ಬಾಬು ಅವರು ಜೊತೆಗೆ ಗುಂಟೂರು ಖಾರಂ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು.
Aamir Khan: ಸಂಗಾತಿ ಬೇಕು, 59ನೇ ವಯಸ್ಸಲ್ಲಿ 3ನೇ ಮದುವೆ? ರಿಯಾ ಪ್ರಶ್ನೆಗೆ ಅಮೀರ್ ಖಾನ್ ಶಾಕಿಂಗ್ ಉತ್ತರ