Lakshmi Nivasa: ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಸದ್ಯಕ್ಕೆ ಕಿರುತೆರೆಯ ನಂಬರ್ ಒನ್ ಸೀರಿಯಲ್. ಇದರಲ್ಲಿನ ಪ್ರತಿಯೊಂದು ಪಾತ್ರವೂ ಜನಪ್ರಿಯತೆ ಪಡೆದಿದೆಯಾದರೂ, ಇತ್ತೀಚಿನ ದಿನಗಳಲ್ಲಿ ಲಕ್ಷ್ಮೀ ಮತ್ತು ಶ್ರೀನಿವಾಸ್ ಅವರ ಹಿರಿಯ ಸೊಸೆ ವೀಣಾ ಪಾತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳು ಹರಿದು ಬರುತ್ತಿದೆ.
ಕೂಡು ಕುಟುಂಬದಲ್ಲಿ ಸೊಸೆ ಹೇಗಿರಬೇಕು ಅನ್ನೋದನ್ನ ವೀಣಾ (Veena) ಪಾತ್ರ ತೋರಿಸ್ತಿದೆ ಅನ್ನೋದೇ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮನೆಯಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸೋ ವೀಣಾ ಪಾತ್ರಕ್ಕೆ ಅತ್ತೆ ಮಾವ ಅಂದ್ರೆ ಅಪ್ಪ ಅಮ್ಮ ಅನ್ನುವಂತಹ ಗೌರವ ಮತ್ತು ಪ್ರೀತಿಯನ್ನು ನೋಡಬಹುದಾಗಿದೆ.
ತನ್ನ ಗಂಡ ತಪ್ಪು ಮಾಡಿದಾಗಲೂ ಸಹಾ ವೀಣಾ ಅದನ್ನ ಹೇಳ್ತಾಳೆ ಮತ್ತು ಮನೆಯಲ್ಲಿ ಹೇಗೆ ತಂದೆ ತಾಯಿಯನ್ನ ನೋಡಬೇಕು ಅಂತ ಗಂಡನಿಗೆ ಬುದ್ಧಿ ಮಾತನ್ನ ಸಹಾ ಹೇಳ್ತಾಳೆ. ಮನೆಯಲ್ಲಿ ಎಷ್ಟೇ ಗಲಾಟೆ ಆದ್ರೂ ವೀಣಾ ಯಾರಿಗೂ ಕೆಟ್ಟದನ್ನ ಬಯಸೋದಿಲ್ಲ. ಹೊಂದಿಕೊಂಡು ಹೋಗೋ ಗುಣ ಇರೋ ವೀಣಾ ಹೊಸ ಸೊಸೆ ಚೆಲುವಿಗೆ (Chelvi) ಹೇಳಿದ ಮಾತುಗಳು ಎಲ್ಲರ ಮನಸ್ಸನ್ನ ಗೆದ್ದಿದೆ.
ಸಂಸಾರ ಅನ್ನೋ ಸಾಗರ ದಾಟೋಕೆ ಕಷ್ಟಗಳನ್ನ ದಾಟಬೇಕು, ಸಂಬಂಧಗಳನ್ನ ಉಳಿಸಿಕೊಳ್ಳೋಕೆ ಹೊಂದಾಣಿಕೆ ಮಾಡ್ಕೋಬೇಕು ಅದಕ್ಕೆ ವೈಯಕ್ತಿಕ ಖುಷಿಯನ್ನು ಬಲಿಕೊಡಬೇಕು, ಅನುಸರಿಸಿಕೊಂಡು ಹೋಗಬೇಕು ಅಂತೆಲ್ಲಾ ವೀಣಾ ಹೇಳೋದನ್ನ ನೋಡಿದ ನೆಟ್ಟಿಗರು ಕೂಡು ಕುಟುಂಬದಲ್ಲಿ ವೀಣಾ ಅಂತ ಸೊಸೆಯರಿದ್ರೆ ಆ ಮನೆ ನಂದ ಗೋಕುಲ ಆಗುತ್ತೆ ಅಂತ ಹೊಗಳ್ತಿದ್ದಾರೆ.
Mrunal Thakur: ಬಾಲಿವುಡ್ ಸ್ಟಾರ್ ನಟಿಯರಿಗೆ ನಡುಕ ಹುಟ್ಟಿಸಿದ ಸೀತಾರಾಮಂ ನಟಿ, ಬಂಪರ್ ಆಫರ್ ಪಡೆದ ಮೃಣಾಲ್