Lakshmi Nivasa ಸೀರಿಯಲ್ ಗೆ ಬರುವ ಹೊಸ ಲಕ್ಷ್ಮಿ ಯಾರು? ನಟಿ ಶ್ವೇತ ಅವರ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಯಾವಾಗ

Written by Soma Shekar

Published on:

---Join Our Channel---

Lakshmi Nivasa ಕನ್ನಡ ಕಿರುತೆರೆಯ ನಂಬರ್ ಒನ್ ಸೀರಿಯಲ್ ಆಗಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಕಿರುತೆರೆಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಹೊಸ ಹೊಸ ಟ್ವಿಸ್ಟ್ ಗಳು ಕಥೆಯಲ್ಲಿ ರೋಚಕತೆಯನ್ನು ಮೂಡಿಸಿದೆ. ಆದರೆ ಇವೆಲ್ಲವುಗಳ ನಡುವೆ ಪ್ರೇಕ್ಷಕರಿಗೆ ಹೊಸ ಅನುಮಾನವೊಂದು ಕಾಡುತ್ತಿದೆ.

ಇತ್ತೀಚಿಗೆ ಕಥೆಯಲ್ಲಿ ಸೀರಿಯಸ್ ಎಪಿಸೋಡ್ ಗಳು ನಡೆದಿತ್ತು, ಒಂದಷ್ಟು ಸತ್ಯ ಹೊರಬಿದ್ದು, ಲಕ್ಷ್ಮೀ ನಿವಾಸದಲ್ಲಿ ಅಶಾಂತಿ ಉಂಟಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನೆಯೊಡತಿ ಲಕ್ಷ್ಮೀಯೇ ಕಾಣ್ತಿಲ್ಲ. ಇದನ್ನ ಗಮನಿಸಿದ ಪ್ರೇಕ್ಷಕರು ಭಾವನಾಗೆ ತಾಯಿಯ ಆಸರೆ ಬೇಕಾದ ಸಮಯದಲ್ಲೆ ಲಕ್ಷ್ಮಿ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ ವಾರ ಲಕ್ಣ್ಮೀ ಮನೆಯಲ್ಲಿ ಕಾಣಲಿಲ್ಲ, ಈ ವಾರದ ಎಪಿಸೋಡ್ ಗಳಲ್ಲೂ ಇನ್ನೂ ಲಕ್ಷ್ಮಿಯ ಸುಳಿವಿಲ್ಲ. ಇದನ್ನ ನೋಡಿದ ಕೆಲವರು ನಟಿ ಶ್ವೇತಾ (Actress Shweta) ಅವರು ಸೀರಿಯಲ್ ನಲ್ಲಿನ ತಮ್ಮ ಪಾತ್ರದಿಂದ ಹೊರಗೇನಾದರೂ ಹೋಗಿದ್ದಾರಾ? ಅವರು ಸೀರಿಯಲ್ ಬಿಟ್ಟು ಬಿಟ್ರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಮತ್ತೆ ಕೆಲವರು ಲಕ್ಷ್ಮೀ ಪಾತ್ರದಲ್ಲಿ ಬಹಳ ದಿನಗಳಿಂದ ಶ್ವೇತಾ ಅವರು ಕಾಣುತ್ತಿಲ್ಲ.. ಸೀರಿಯಲ್ ನಲ್ಲಿ ಲಕ್ಷ್ಮೀ ಪಾತ್ರದ ನಟಿಯ ಬದಲಾವಣೆ ಏನಾದ್ರು ಆಗುತ್ತಾ? ಶ್ವೇತಾ ಅವರ ಜಾಗಕ್ಕೆ ಬೇರೆ ನಟಿ ಏನಾದ್ರು ಬರ್ತಾರಾ? ಎನ್ನುವ ಅನುಮಾನ ಕೂಡಾ ವ್ಯಕ್ತಿಪಡಿಸುತ್ತಿದ್ದು, ಇದಕ್ಕೆಲ್ಲಾ ಉತ್ತರ ಯಾವಾಗ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Megastar Chiranjeevi ಗೆ ವಿಶೇಷ ಗೌರವ, ಗಿನ್ನೆಸ್ ರೆಕಾರ್ಡ್ ನಲ್ಲಿ ದಾಖಲಾಯ್ತು ನಟನ ಹೆಸರು; ಥ್ರಿಲ್ ಆದ ಫ್ಯಾನ್ಸ್

Leave a Comment