ಆಸ್ಕರ್ ಲೆವೆಲ್ ಆ್ಯಕ್ಟಿಂಗ್, ಚಿಂದಿ ಗುರು ನೀನು; ಕಿರುತೆರೆಯ ನಟನಿಗೆ ಪ್ರೇಕ್ಷಕರು ಫಿದಾ ಆಗಿರೋದ್ಯಾಕೆ? ಇಷ್ಟಕ್ಕೂ ಯಾರೀ ನಟ ?

Written by Soma Shekar

Published on:

---Join Our Channel---

Lakshmi Nivasa: ಸಿನಿಮಾ ಆಗಿರಲಿ ಅಥವಾ ಸೀರಿಯಲ್ ಆಗಿರಲಿ ಯಾವುದೇ ಆದರೂ ಅಲ್ಲಿ ಒಬ್ಬ ಕಲಾವಿದ ಪ್ರೇಕ್ಷಕರ ಮನಸ್ಸನ್ನ ಗೆಲ್ಲುವುದು ತನ್ನ ಅಭಿನಯದಿಂದಲೇ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಕಲಾವಿದರಿಗೆ ತಮ್ಮ ನಟನೆಯ ಕೌಶಲ್ಯವನ್ನು ಪ್ರದರ್ಶನ ಮಾಡಲು ಒಂದು ಸರಿಯಾದ ಪಾತ್ರದ ಅವಶ್ಯಕತೆ ಇರುತ್ತೆ. ಅಂತಹ ಪಾತ್ರಗಳು ಅವರಿಗೆ ಸಿಗೋದಕ್ಕೆ ಸಮಯ ಹಿಡಿಯುತ್ತೆ. ಆದರೆ ಅಂತಹ ಪಾತ್ರ ಸಿಕ್ಕಾಗ ಮಾತ್ರ ಒಂದಷ್ಟು ಜನ ಕಲಾವಿದರು ತಮ್ಮ ನಟನೆಯಿಂದ ಪ್ರೇಕ್ಷಕರ ಮೇಲೆ ಮೋಡಿ ಮಾಡಿ ಬಿಡುತ್ತಾರೆ.

ಈಗಾಗಲೇ ಸಿನಿಮಾ, ಸೀರಿಯಲ್ ಮಾಡಿರುವ ಕಲಾವಿದರಿಗೂ ಸಹಾ ವರ್ಷಗಳ ನಂತರ ಅವರು ಮಾಡಿರುವ ಪಾತ್ರಗಳಿಂದಲೇ ಜನಪ್ರಿಯತೆ ತಂದುಕೊಟ್ಟಿರುವ ಹಲವು ಉದಾಹರಣೆಗಳು ಇವೆ. ರಾಜೇಶ್ ನಟರಂಗ (Rajesh Nataranga) ಅವರು ಕಿರುತೆರೆಯಲ್ಲಿ ಸದ್ಯಕ್ಕೆ ಅಮೃತಧಾರೆಯ ಗೌತಮ್ ದೀವಾನ್ ಪಾತ್ರದ ಮೂಲಕ ಜನರನ್ನು ರಂಜಿಸುತ್ತಾ, ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇ ವೇಳೆ ಮತ್ತೊಬ್ಬ ನಟ ತಮ್ಮ ನೆಗೆಟಿವ್ ಪಾತ್ರದ ಮೂಲಕ ಪ್ರೇಕ್ಷಕರಿಂದ ನಟ ರಾಕ್ಷಸ ಅಂತ ಒಬ್ಬ ನಟ ಕರೆಸಿಕೊಳ್ತಿದ್ದಾರೆ.

ಹೌದು, ನಾವು ಹೇಳ್ತಿರೋದು ನಟ ದೀಪಕ್ ಸುಬ್ರಮಣ್ಯ (Deepak Subramnaya) ಅವರ ಬಗ್ಗೆ. ಇವರು ಈ ಹಿಂದೆ ಸಹಾ ಸಿನಿಮಾ ಮತ್ತು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಆದ್ರೆ ಈಗ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಅವರು ನಿರ್ವಹಣೆ ಮಾಡ್ತಾ ಇರೋ ಜಯಂತ್ ಪಾತ್ರ ನೋಡಿ ಪ್ರೇಕ್ಷಕರು ಬೆಚ್ಚಿದ್ದಾರೆ. ಒಂದು ಕಡೆ ಈ ಪಾತ್ರಕ್ಕೆ ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ಹರಿದು ಬರ್ತಿದ್ರು ಇನ್ನೊಂದು ಕಡೆ ಏನ್ ಆ್ಯಕ್ಟಿಂಗ್ ಗುರು ನಿಂದು ಅಂತ ಹಾಡಿ ಹೊಗಳ್ತಾ ಇದ್ದಾರೆ.

ಇತ್ತೀಚಿನ ಒಂದು ಎಪಿಸೋಡ್ ನಲ್ಲಿ ಮುಗ್ಧ, ಪ್ರತಿಭಾವಂತ ಹುಡುಗಿ ಜಾನ್ವಿ ಈ ಜಯಂತನ ಹೆಂಡತಿಯಾಗಿದ್ದು, ಜಯಂತ್ ನಿಗೆ ಹೆಂಡತಿ ಅಂದ್ರೆ ವಿಪರೀತವಾದ ವ್ಯಾಮೋಹ. ಆಫೀಸ್ ಸ್ಟಾಫ್ ಜಯಂತ್ ಮತ್ತು ಜಾಹ್ನವಿ ಮದುವೆ ಹಿನ್ನೆಲೆಯಲ್ಲಿ ಪಾರ್ಟಿ ಏರ್ಪಾಟು ಮಾಡಿರ್ತಾರೆ. ಪಾರ್ಟಿಯಲ್ಲಿ ಜಯಂತ್ ಬೇಡ ಅಂದ್ರೂ ಜಾನ್ವಿ ಬೇರೆ ಅವ್ರಿಗೆ ಬೇಜಾರು ಆಗಬಾರದು ಅನ್ನೋ ಕಾರಣಕ್ಕೆ ಹಾಡನ್ನ ಹಾಡ್ತಾಳೆ. ಇದು ಜಯಂತ್ ನ ಸಿಕ್ಕಾಪಟ್ಟೆ ಕೆರಳಿಸುತ್ತೆ.

ಯಾವ ಮಟ್ಟಕ್ಕೆ ಜಯಂತ್ ಕೆರಳ್ತಾನೆ ಅಂದ್ರೆ ಮನೆಗೆ ಬಂದ ಮೇಲೆ ನಿದ್ದೆ ಮಾಡ್ತಿರೋ ಜಾಹ್ನವಿನ ಎಬ್ಬಿಸಿ, ಹಾಡು ಹೇಳೋಕೆ ಕೇಳ್ತಾನೆ. ಸುಸ್ತಾಗಿದೆ ಅಂತ ಜಾನ್ವಿ ಹೇಳಿದ್ರು ಎಮೋಷನಲ್ ಆಗಿ ಅವಳನ್ನ ಪುಸಲಾಯಿಸಿ ರಾತ್ರಿ ಎಲ್ಲಾ ಹಾಡು ಹೇಳಿಸಿ ಶಿಕ್ಷೆಯನ್ನ ಕೊಡ್ತಾನೆ. ಜಯಂತ್ ಒಂದ್ಸಲ ಸಿಟ್ಟಲ್ಲಿ ನಡುಗುತ್ತ, ಮತ್ತೊಂದ್ಸಲ ಬಿಕ್ಕಿ ಬಿಕ್ಕಿ ಅಳ್ತಾ, ಇನ್ನೊಂದ್ಸಲ ಅವಳನ್ನು ಹುಚ್ಚನಂತೆ ಪ್ರೀತಿಸೋದನ್ನ ಹೇಳ್ತಾ ಮಾಡೋ ನಟನೆ ನೋಡಿ ವೀಕ್ಷಕರು ಬೆಚ್ಚಿದ್ದಾರೆ.

ಇವರು ಇಂತಹ ಅದ್ಭುತ ನಟ ಅಂತ ಗೊತ್ತಿರಲಿಲ್ಲ ಎಂದಿದ್ದಾರೆ ಜನ. ಅಲ್ಲದೇ ಆಸ್ಕರ್ ಲೆವೆಲ್ ಪರ್ಪಾರ್ಮೆನ್ಸ್ ಅಂತ ಹಾಡಿ ಹೊಗಳುತ್ತಿದ್ದಾರೆ.. ನಟ ದೀಪಕ್ ಸುಬ್ರಹ್ಮಣ್ಯ ಅವರು ಮೂಲತಃ ರಂಗಭೂಮಿಯಿಂದ ಬಂದಿರುವ ಕಲಾವಿದನಾಗಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಸಹಾ ನಟಿಸಿದ್ದಾರೆ. ಆದರೆ ಅವರ ಜಯಂತ್ ಪಾತ್ರ ಈಗ ಪ್ರೇಕ್ಷಕರ ಮೆಚ್ಚುಗೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದೆ.

Leave a Comment