Lakshmi Nivasa ಪ್ರಾಣ ಹೋದ್ರು ಸರಿ ಭಾವನಾನ ಬಿಡಲ್ಲ ಅಂದ ಸಿದ್ಧೇ ಗೌಡ್ರು; ಸಿದ್ಧುನ ಒಪ್ಪಿಕೊಳ್ತಾಳಾ ಭಾವನಾ

Written by Soma Shekar

Published on:

---Join Our Channel---

Lakshmi Nivasa: ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನ ಕಥೆಯಲ್ಲಿನ ಮತ್ತೊಂದು ಹೊಸ ತಿರುವು ಈಗ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ಸತ್ಯ ಈಗ ಎಲ್ಲರ ಮುಂದೆ ಬಯಲಾಗಿದೆ. ಭಾವನಾಗೆ ತಾಳಿ ಕಟ್ಟಿರೋ ವಿಚಾರವನ್ನ ಸಿದ್ಧೇಗೌಡ್ರು (Sidde Gowdru) ಸಾರ್ವಜನಿಕವಾಗಿ ಘೋಷಣೆ ಮಾಡಿ ಭಾವನಾ ತನ್ನ ಪತ್ನಿ ಅಂತ ಹೇಳಿಕೊಂಡಿದ್ದಾರೆ.

ಸಿದ್ಧೇಗೌಡ್ರು ತಾನೇ ಭಾವನಾಗೆ (Bhavana) ತಾಳಿ ಕಟ್ಟಿದ್ದು ಅಂತ ಹೇಳಿದ ಮೇಲೆ ಒಂದು ಕಡೆ ಅವ್ರ ಮನೇಲಿ, ಮತ್ತೊಂದು ಕಡೆ ಲಕ್ಷ್ಮೀ ನಿವಾಸದಲ್ಲೂ ಸಹಾ ಅಸಮಾಧಾನ, ಆತಂಕದ ಪರಿಸ್ಥಿತಿ ಉಂಟಾಗಿದೆ. ಸಿದ್ದುಗೆ ಅವ್ರ ಮನೆಯಲ್ಲಿ ಭಾವನಾನ ಮರೆತು ಬಿಡು ಅಂತ ಹೇಳಿದ್ದಾರೆ. ಆದ್ರೆ ಅದಕ್ಕೆ ಸಿದ್ಧೇಗೌಡ್ರು ಒಪ್ಪಿಕೊಂಡಿಲ್ಲ.

ಈಗ ಸಿದ್ಧೇಗೌಡ್ರು ಮನೆಯವರನ್ನ ಎದುರಿಸಿ ಭಾವನಾಗಾಗಿ ಅವರ ಮನೆ ಬಳಿ ಬಂದಿದ್ದಾರೆ. ಆದರೆ ಭಾವನಾ ಕೋಣೆ ಬಾಗಿಲು ಹಾಕಿದ್ದಾಳೆ. ಇದೇ ವೇಳೆ ಸಿದ್ಧೇಗೌಡ್ರು ಮಾತ್ರ ತಾನು ಭಾವನಾನ ಬಿಟ್ಟು ಬದುಕೋದಿಲ್ಲ, ಭಾವನಾ ಒಪ್ಪಿಕೊಳ್ಳೋ ವರೆಗೂ ಅಲ್ಲಿಂದ ಹೋಗಲ್ಲ ಅಂತ ಲಕ್ಷ್ಮೀ ನಿವಾಸದ ಮುಂದೆ ಹಠ ಹಿಡಿದು ಕೂತಿದ್ದಾರೆ.

ಈಗ ಭಾವನಾ ಸಿದ್ಧೇಗೌಡ್ರನ್ನ ಒಪ್ಪಿಕೊಳ್ತಾಳಾ? ಒಂದು ವೇಳೆ ಅಪ್ಪ ಅಮ್ಮನ ನೋವಿಗೆ ಕಾರಣ ಆಗಬಾರದು ಅಂತ ಒಪ್ಕೊಂಡು ಹೋದ್ರು ಸಿದ್ಧು ಮತ್ತು ಭಾವನಾಗೆ ಗೌಡ್ರ ಮನೆಯಲ್ಲಿ ಜಾಗ ಸಿಗುತ್ತಾ? ಭಾವನಾ ಸಿದ್ಧು ಹೊಸ ಜೀವನ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಸಮಂತಾ ಪರ ದನಿ ಎತ್ತಿದ Naga Chaitanya, ಕೆಟ್ಟ ಕಾಮೆಂಟ್ ಮಾಡಿದವ್ರಿಗೆ ಗ್ರಹಚಾರ ಬಿಡಿಸಿದ ನಟ

Leave a Comment