Lakshmi Nivasa: ಸ್ವಾರ್ಥಕ್ಕಾಗಿ ಕೂಡು ಕುಟುಂಬ ಒಡೆದ ಹಿರಿ ಮಗ; ಇಂತ ಮಗ ಇರೋದೇ ಬೇಡ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Lakshmi Nivasa : ಬಹುತಾರಾಗಣದ ಕಿರುತೆರೆಯ ಅತ್ಯಂತ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಈಗಾಗಲೇ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಗಳಲ್ಲಿ ಒಂದಾಗಿದೆ. ಇದೀಗ ಸೀರಿಯಲ್ ನ ಕಥೆಯಲ್ಲಿನ ಹೊಸ ತಿರುವನ್ನು ನೋಡಿದ ನಂತರ ನೆಟ್ಟಿಗರು ತಂದೆ ತಾಯಿಗೆ ಸಂತೋಷನಂತಹ ಮಗ ಖಂಡಿತ ಇರಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಶ್ರೀನಿವಾಸ್ (Srinivas) ಅವರು ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆ ಅವರ ಬಳಿ ಇರುವ ಹಣದ ವಿಚಾರ ತಿಳಿದ ಹಿರಿ ಮಗ ಸಂತೋಷ (Santosh) ಅಪ್ಪನ ಹಣವನ್ನ ಲಪಟಾಯಿಸಲು ತಾನು ಪ್ಲಾನ್ ಮಾಡಿ ಐದು ಲಕ್ಷ ತಗೊಂಡ. ಅಷ್ಟಕ್ಕೆ ಸುಮ್ಮನಾಗದ ಅವನು ತಮ್ಮನಿಗೆ ಐಡಿಯಾ ಕೊಟ್ಟು ಅವನಿಗೂ ದುಡ್ಡನ್ನು ಕೊಡಿಸಿದ್ದಾನೆ. ಸಂತೋಷನ ದುರಾಸೆ ಅಷ್ಟಕ್ಕೇ ನಿಂತಿಲ್ಲ..

ತನ್ನ ಸಹೋದರಿ ಮಂಗಳಾಗೂ ಐಡಿಯಾ ಕೊಟ್ಟು ಕಿತಾಪತಿ ಮಾಡಿಸಿ ಅಪ್ಪನಿಂದ ಐದು ಲಕ್ಷ ಪಡೆಯೋಕೆ ಹೇಳಿದ್ದಾ‌‌ನೆ. ಈ ವೇಳೆ ಲಕ್ಷ್ಮೀ ಮತ್ತು ಶ್ರೀನಿವಾಸ್ ಇರೋ ಹಣವನ್ನ ಎಲ್ಲಾ ಮಕ್ಕಳಿಗೂ ಹಂಚಲು ಮುಂದಾಗಿದ್ದು ಈ ವೇಳೆ ಸಂತೋಷ ವೆಂಕಿಗೆ (Venki) ಹಣ ನೀಡಬಾರದು ಅಂತ ಗಲಾಟೆ ಮಾಡಿದ್ದಾನೆ. ಅಷ್ಟು ಸಾಲದು ಅಂತ ವೆಂಕಿಗೆ ಮನೆಯಲ್ಲಿ ಜಾಗ ಇಲ್ಲ ಎಂದೇ ಹೇಳಿದ್ದಾನೆ.

ಸಂತೋಷನ ಹದ್ದು ಮೀರಿದ ವರ್ತನೆಯನ್ನು ಯಾರಿಂದಲೂ ನಿಯಂತ್ರಣ ಮಾಡಲಾಗಿಲ್ಲ. ಅಪ್ಪ ಅಮ್ಮನ ಕಣ್ಣೀರಿಗೂ ಕರಗದ ಅವನ ಮಾತಿಗೆ ಬೇಸತ್ತು ವೆಂಕಿ ಮತ್ತು ಚೆಲುವಿ ಮನೆ ಬಿಟ್ಟು ಹೊರಟಿದ್ದಾರೆ. ಪ್ರೊಮೊ ನೋಡಿ ನೆಟ್ಟಿಗರು ಸಂತು ಅಂತ ಮಗ ಯಾರಿಗೂ ಬೇಡ, ಎಂತ ನೀಚತನ ಅವನದ್ದು, ಹಣಕ್ಕೋಸ್ಕರ ಏನೆಲ್ಲಾ ಮಾಡೋಕೂ ಸಿದ್ಧ ಅಂತ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ.

Actress Samantha : ನಾಗಚೈತನ್ಯ 2ನೇ ಮದುವೆ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಮಂತಾ; ನಟಿಯ ಪೋಸ್ಟ್ ವೈರಲ್

Leave a Comment