Lakshmi Nivasa : ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಜನಪ್ರಿಯತೆ ಪಡೆದಿರೋ ಸೀರಿಯಲ್ ಆಗಿದೆ. ಆದರೆ ಈ ಸೀರಿಯಲ್ ನಲ್ಲಿ ಹೆಚ್ಚು ಚರ್ಚೆ ಆಗ್ತಿರೋ ಪಾತ್ರಗಳು ಜಯಂತ್ (Jayanth) ಮತ್ತು ಜಾಹ್ನವಿ (Jahnavi) ಪಾತ್ರಗಳಾಗಿದೆ. ಹೆಂಡತಿ ತನಗೆ ಮಾತ್ರ ಸ್ವಂತ ಅನ್ನೋ ಹುಚ್ಚಿನಿಂದ ಅವಳನ್ನು ಎಲ್ಲರಿಂದ ದೂರ ಮಾಡೋಕೆ ಜಯಂತ್ ಜಾಹ್ನವಿಯನ್ನ ಪ್ರೀತಿ, ಪ್ರೀತಿ ಅಂತ ಮುಳುಗಿಸಿ, ಬಂಗಾರದ ಪಂಜರದಲ್ಲಿ ಬಂಧಿಸಿ ಇಟ್ಟಿದ್ದಾನೆ.
ಗಂಡ ಆಗಾಗ ವಿಚಿತ್ರವಾಗಿ ವರ್ತಿಸೋದು ಅನಂತರ ಪ್ರೀತಿಯ ಮಾತುಗಳನ್ನ ಹೇಳಿ ಪುಸಲಾಯಿಸೋದನ್ನ ನೋಡಿದ ಜಾಹ್ನವಿಗೆ ಅದೆಲ್ಲಾ ಪ್ರೀತಿ ಅಂತಾನೇ ಅನಿಸಿತ್ತು. ಆದರೆ ಈಗ ಅವಳ ತಾಳ್ಮೆ ಕೂಡಾ ಕಳೆದುಕೊಳ್ಳುವಂತೆ ಆಗಿದೆ. ಮನೆಯಲ್ಲಿ ತನಗೆ ಹೇಗೆಲ್ಲಾ ಅನಿಸ್ತಿದೆ ಅನ್ನೋದನ್ನ ಜಯಂತ್ ಗೆ ನೇರವಾಗಿ ಹೇಳಿದ್ದಾಳೆ.
ಆಫೀಸ್ ಇಂದ ಬಂದ ಜಯಂತ್ ಹೆಂಡತಿ ಬೇಸರದಲ್ಲಿ ಇರೋದನ್ನ ನೋಡಿ ಏನಾಯ್ತು ಅಂತ ಕೇಳಿದ್ದಾನೆ. ಆಗ ಜಾಹ್ನವಿ ಅಸಮಾಧಾನದಿಂದ ತನಗೆ ಇದು ಮನೆಯಲ್ಲ ಜೈಲು ಅನಿಸ್ತಿದೆ. ಮಾತಾಡೋಕೆ ಯಾರಿಲ್ಲ, ಮಾಡೋಕೇನೂ ಕೆಲಸ ಇಲ್ಲ. ಟಿವಿ ನೋಡೋಕೆ ಕೇಬಲ್ ಇಲ್ಲ, ಮನೆ ಅವ್ರ ಜೊತೆ ಮಾತಾಡೋಕೆ ಫೋನ್ ವರ್ಕ್ ಆಗಲ್ಲ ಅಂತ ಸಿಡಿಮಿಡಿಗೊಂಡಿದ್ದಾಳೆ.
ತುಂಬು ಕುಟುಂಬದಿಂದ ಬಂದಿರೋ ತನಗೆ ಇಲ್ಲಿ ಒಬ್ಬಳೇ ಇರೋದು ಕಷ್ಟ ಆಗಿದೆ. ನಮ್ಮ ಮನೇಲಿ ನಾನು ಮಾತಾಡದೇ ಇದ್ರೆ ಎಲ್ಲರೂ ಏನಾಯ್ತು ಅಂತ ಕೇಳ್ತಿದ್ರು. ಆದ್ರೆ ಇಲ್ಲಿ ಮಾತಾಡೋಕೆ ಯಾರಿಲ್ಲ. ನನಗೆ ನಾನೇ ಮಾತಾಡಿಕೊಳ್ಳಬೇಕು. ಅದಕ್ಕೆ ಇದು ನಮ್ಮನೆ ಅಂತಾನೇ ಅನಿಸ್ತಿಲ್ಲ ಎಂದು ಮನಸ್ಸಲ್ಲಿದ್ದ ಮಾತುಗಳನ್ನ ಹೇಳಿದ್ದಾಳೆ.
ಜಾಹ್ನವಿ ಮಾತುಗಳನ್ನ ಕೇಳಿ ಜಯಂತ್ ಕೂಡಾ ಅಸಮಾಧಾನಗೊಂಡಿದ್ದಾನೆ. ಆದ್ರೆ ಅದನ್ನ ಹೆಂಡ್ತಿ ಮುಂದೆ ತೋರಿಸಿಕೊಳ್ಳದೇ ಪ್ರೀತಿಯಿಂದ ಸಮಾಧಾನ ಮಾಡೋ ನಾಟಕ ಆಡಿದ್ದಾನೆ. ಇನ್ನು ಈಗ ಜಾಹ್ನವಿಯ ಮಾತುಗಳ ನಂತರ ಅವಳನ್ನ ಮತ್ತೆ ತನ್ನ ಕಂಟ್ರೋಲ್ ಗೆ ತಗೊಳ್ಳೋಕೆ ಜಯಂತ್ ಮತ್ತೆ ಯಾವ ಪ್ಲಾನ್ ಮಾಡ್ತಾನೆ ಅಂತ ಕಾದು ನೋಡಬೇಕಾಗಿದೆ.