Lakshmi Nivasa Serial: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸೀರಿಯಲ್ ಗಳ ಪ್ರೊಮೋ ಬಂದ ಕೂಡಲೇ ನೆಟ್ಟಿಗರು ಅದನ್ನು ನೋಡಿ ತಮ್ಮ ಅನಿಸಿಕೆ, ಅಭಿಪ್ರಾಯ ಮಾತ್ರವಲ್ಲ ತಮ್ಮ ಅಸಮಾಧಾನಗಳನ್ನು ಹಂಚಿಕೊಂಡು, ಕೆಲವೊಂದು ವಿಷಯಗಳ ಕುರಿತಾಗಿ ಹೈಲೈಟ್ ಮಾಡ್ತಾ ಟೀಕೆ ಮಾಡುವುದು ಕೂಡಾ ನಡೆಯುತ್ತಿದೆ. ಇದೀಗ ಅಂತದೇ ಒಂದು ಕೆಲಸವನ್ನ ಲಕ್ಷ್ಮೀ ನಿವಾಸ ಸೀರಿಯಲ್ (Lakshmi Nivasa Serial) ಪ್ರೊಮೊ ನೋಡಿದ ನೆಟ್ಟಿಗರು ಮಾಡುತ್ತಿದ್ದಾರೆ.
ಸೀರಿಯಲ್ ನಲ್ಲಿ ಹೂ ಮಾರುವ ಹುಡುಗಿ ಚೆಲುವಿ (Cheluvi). ವೆಂಕಿಗೆ ಒಳ್ಳೆ ಸ್ನೇಹಿತೆ ಕೂಡಾ ಹೌದು. ಆದರೆ ಮಾಡಿದ್ದ ಸಾಲ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ರೌಡಿಗಳು ಅವಳನ್ನು ಎತ್ತಿಕೊಂಡು ಹೋಗಿದ್ರು, ಅನಂತರ ನಡೆದ ಘಟನೆಗಳಲ್ಲಿ ಜನ ಅವಳ ಬಗ್ಗೆ ಕೆಟ್ಟದಾಗಿ ಮಾತನಾಡೋದಕ್ಕೆ ಶುರು ಮಾಡಿದರು. ಇದರಿಂದ ನೊಂದ ಚೆಲುವಿ ಪ್ರಾಣವನ್ನ ಕಳೆದುಕೊಳ್ಳುವುದಕ್ಕೆ ನಿರ್ಧಾರ ಮಾಡಿ ಬಾವಿಗೆ ಬೀಳಲು ಹೋಗಿದ್ದಾಳೆ.
ಈ ವೇಳೆ ವೆಂಕಿ (Venki) ಅವಳನ್ನ ಕಾಪಾಡಿದ್ದು ಮಾತ್ರವಲ್ಲದೇ ಕರ್ಕೊಂಡು ಬಂದು ಅವಳ ಕೊರಳಿಗೆ ತಾಳಿಯನ್ನ ಕಟ್ಟಿ ಅವಳಿಗೆ ಹೊಸ ಜೀವನವನ್ನು ನೀಡಿದ್ದಾನೆ. ವಾಹಿನಿ ಹಂಚಿಕೊಂಡ ಪ್ರೊಮೊವನ್ನು ನೋಡಿದ ನೆಟ್ಟಿಗರು ವೆಂಕಿ ಮಾಡಿದ ಕೆಲಸವನ್ನ ಮೆಚ್ಚಿದ್ದಾರೆ. ಇದೇ ವೇಳೆ ಒಂದಷ್ಟು ಜನ ಕಾಮೆಂಟ್ ಗಳಲ್ಲಿ ಅತುರದಲ್ಲಿ ವೆಂಕಿಗೆ ಅವರ ಅಪ್ಪ ಅಮ್ಮನ ನೆನಪು ಆಗ್ಲಿಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ.
ಚೆಲುವಿಯನ್ನು ಉಳಿಸೋಕೆ ವೆಂಕಿ ಮಾಡಿದ ನಿರ್ಧಾರವೇನೋ ಸರಿ ಇದೆ. ಆದ್ರೆ ತನ್ನನ್ನು ಸಾಕಿ ಬೆಳೆಸಿದ ತಂದೆ ತಾಯಿಗೆ ಕಡೇ ಪಕ್ಷ ಒಂದು ಮಾತನ್ನು ಹೇಳಿ, ಅವರ ಒಪ್ಪಿಗೆಯನ್ನೂ ಪಡೆದು ಮದುವೆ ಆಗಬಹುದಿತ್ತಲ್ವ ಅನ್ನೋದು ಕೆಲವರ ಅಭಿಪ್ರಾಯವಾಗಿದ್ದು, ವೆಂಕಿಗೆ ಆತುರದಲ್ಲಿ ಅಪ್ಪ ಅಮ್ಮನೇ ನೆನಪಾಗಲಿಲ್ವಾ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
Rajanikanth: ಕಮಲ ಹಾಸನ್ ಇಲ್ದೇ ಇದ್ದಿದ್ರೆ ಆ ಸೀನ್ ಮಾಡೋಕೇ ಆಗ್ತಿರಲಿಲ್ಲ; ರಜನೀಕಾಂತ್ ಶಾಕಿಂಗ್ ಮಾತು