Lakshmi Nivasa Serial: ಮುಖ ಮೂತಿ ನೋಡ್ದೇ ಎರಡು ಕೊಡಿ, ಸಂತೋಷ್ ವರ್ತನೆ ಕಂಡು ಸಿಟ್ಟಾದ ಪ್ರೇಕ್ಷಕರು

Written by Soma Shekar

Published on:

---Join Our Channel---

Lakshmi Nivasa Serial: ಕಿರುತೆರೆಯ ಜನಪ್ರಿಯ ಸೀರಿಯಲ್ ಲಕ್ಷ್ಮೀ ನಿವಾಸ’ ದಲ್ಲಿ (Lakshmi Nivasa Serial) ಸಾಕಷ್ಟು ಟ್ವಿಸ್ಟ್ ಗಳು ಪ್ರೇಕ್ಷಕರ ಗಮನ ಸೆಳೆದಿದೆ. ಮನೆಯ ಹಿರಿಯ ಶ್ರೀನಿವಾಸ್ ಕೆಲಸ ಕಳ್ಕೊಂಡು ಆಟೋ ಓಡಿಸ್ತಾ ಇದ್ದಾರೆ. ಭಾವನಾ ತನಗೆ ತಾಳಿ ಕಟ್ಟಿದ್ದು ಯಾರು ಅನ್ನೋ ಗೊಂದಲದ್ದಲ್ಲಿದ್ದಾಳೆ. ಜಯಂತ್ ಮತ್ತೆ ತನ್ನ ಸೈಕೋ ಆಟಗಳನ್ನು ಆಡ್ತಿದ್ದಾನೆ. ಮತ್ತೊಂದು ಕಡೆ ಸಿದ್ಧೇಗೌಡ್ರು ಮತ್ತು ಪೂರ್ವಿ ಮದುವೆಗೆ ತಯಾರಿ ನಡೆದಿದೆ.

ಶ್ರೀನಿವಾಸ್ (Srinivas) ಸ್ವಾವಲಂಬಿ ಆಗಿ ಬದುಕೋದಕ್ಕೆ ಆಟೋ ಓಡಿಸ್ತಾ ಇದ್ದಾರೆ. ಆದರೆ ಇದು ಅವರ ಹಿರಿಯ ಮಗನಿಗೆ ಇಷ್ಟವೇ ಇಲ್ಲ. ಅವಕಾಶ ಸಿಕ್ಕಾಗೆಲ್ಲಾ ಅಪ್ಪನಿಗೆ ಅವಮಾನ ಹಾಗೋ ಆಗೆ ತನ್ನ ವರ್ತನೆ ತೋರಿಸ್ತಾ ಇದ್ದಾನೆ ಮತ್ತು ಮಾತುಗಳನ್ನ ಸಹಾ ಹೇಳ್ತಿದ್ದಾನೆ. ಅವನ ಹೆಂಡತಿ ವೀಣಾ (Veena) ಈಗಾಗಲೇ ಗಂಡನಿಗೆ ಬುದ್ಧಿ ಹೇಳಿದರೂ ಕೂಡಾ ಅವನ ವರ್ತನೆಯಲ್ಲಿ ಏನೂ ಬದಲಾವಣೆ ಆಗಿಲ್ಲ.

ಮಗ ಹೀಗೆ ಅಪ್ಪನನ್ನ ಕೇವಲವಾಗಿ ನೋಡೋದು ವೀಕ್ಷಕರಿಗೆ ಬೇಸರವನ್ನು ತರಿಸಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಈ ವಿಚಾರವಾಗಿ ತಮ್ಮ ಬೇಸರವನ್ನು ಕಾಮೆಂಟ್ ಗಳ ಮೂಲಕ ಹೊರ ಹಾಕಿದ್ದಾರೆ. ಇಂತ ರಾಕ್ಷಸ ಮಗ ಇದ್ದರೆ ನೆಮ್ಮದಿ ಹಾಳಾಗದೇ ಹೇಗಿರುತ್ತೆ. ಪಾಪ ಶ್ರೀನಿವಾಸ ರಾಯರಿಗೆ ಎಷ್ಟು ನೋವಾಗಿದೆಯೋ ಏನೋ ಎಂದು ಕಾಮೆಂಟ್ ಮಾಡಿ ಒಬ್ಬರು ಬೇಸರ ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ಹಲವು ಕಾಮೆಂಟ್ ಗಳಿವೆ. ದುಡಿಯೋ ಕೈ ನಿಂತು ಹೋದರೆ ಇಂತಹ ಮಾತುಗಳು ಬರೋದು ಸಹಜ. ಮನೆಯಲ್ಲಿ ವೀಣಾ ಅಂತ ಸೊಸೆ ಇದ್ರೆ ಮನೆ ನಂದಗೋಕುಲ ಆಗುತ್ತೆ, ಮುಖ ಮೂತಿ ನೊಡದೆ ಎರಡು ಕೊಡಿ, ದಾರಿಗೆ ಬರ್ತಾನೆ, ನಿವೃತ್ತಿ ಹೊಂದಿದ ತಂದೆಯನ್ನು ನೋಡಿಕೊಳ್ಳೋದು ಮಕ್ಕಳ ಧರ್ಮ, ಅದು ಮಾಡಲ್ಲ, ಸುಮ್ಮನೆ ಕೂಡ ಇರಲ್ಲ ಅಂದರೆ ಬಿಡಬೇಕು ಎರಡು ಅಷ್ಟೇ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದಾರೆ.

National Film Award ರಿಷಬ್ ಶೆಟ್ಟಿ ಜೊತೆ ಆ ನಟ ರೇಸ್ ನಲ್ಲೇ ಇರಲಿಲ್ವಾ? ಸತ್ಯ ರಿವೀಲ್ ಮಾಡಿದ ಜ್ಯೂರಿ ಮೆಂಬರ್

Leave a Comment