Lakshmi Nivasa: ಮನೆಯಲ್ಲಿ ರಾದ್ದಾಂತವೇ ನಡೆದು ಹೋದ್ರು ಲಕ್ಷ್ಮಿಯ ಸುಳಿವು ಸಹಾ ಇಲ್ಲ; ಪ್ರೇಕ್ಷಕರ ಅಸಮಾಧಾನ

Written by Soma Shekar

Published on:

---Join Our Channel---

Lakshmi Nivasa: ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ಒಂದು ಸತ್ಯ ಮನೆ ಮಂದಿ ಮುಂದೆ ಬಯಲಾಗಿದೆ. ಭಾವನಾ (Bhavana) ಮನಸ್ಸಿನಲ್ಲೇ ಬಾಧಿಸುತ್ತಿದ್ದ ತಾಳಿ ವಿಚಾರ ಎಲ್ಲರಿಗೂ ಗೊತ್ತಾಗಿದೆ. ತಾಳಿ ಕಟ್ಟಿದವನು ಯಾರು ಅನ್ನೋದು ತಿಳಿಯಬೇಕು ಅನ್ನೋದು ಈಗ ಎಲ್ಲರ ಮುಂದೆ ಇರುವ ವಿಚಾರವಾಗಿದೆ. ಆದರೆ ಈ ವಿಷಯ ಎಲ್ಲರಿಗಿಂತ ಮೊದಲು ಗೊತ್ತಾಗಿದ್ದೇ ಭಾವನಾ ತಾಯಿ ಲಕ್ಷ್ಮಿ ಅವರಿಗೆ.

ತಾಳಿ ವಿಚಾರದಲ್ಲಿ ಸತ್ಯ ತಿಳಿದ ಮೇಲೆ ಲಕ್ಷ್ಮಿ ಮಗಳ ಬೆಂಬಲಕ್ಕೆ ನಿಂತರು. ಅನಂತರ ವೀಣಾ, ವೆಂಕಿ (Venki) ಎಲ್ಲರೂ ಭಾವನಾಗೆ ಬಲವಾದರು. ಆದರೆ ವಿಚಾರ ಸಂತೋಷ್ ಗೆ ತಿಳಿದ ಮೇಲೆ ಅದು ಮನೆಯಲ್ಲಿ ದೊಡ್ಡ ರಂಪಾಟಕ್ಕೆ ಕಾರಣವಾಗಿ, ಅಸಮಾಧಾನವನ್ನು ಉಂಟು ಮಾಡಿತು. ನೊಂದ ಭಾವನಾ ಮನೆಯಿಂದ ಹೊರಗೆ ಹೋಗಿದ್ದಳು.

ಭಾವನಾ ಮತ್ತೆ ಬರಲಿಲ್ಲ ಎಂದು ಮನೆಯವರೆಲ್ಲಾ ಚಿಂತೆಗೊಳಗಾದರು. ಮನೆಯವರೆಲ್ಲಾ ಭಾವನಾನ ಹುಡುಕುವ ಪ್ರಯತ್ನವನ್ನು ಮಾಡಿದರು. ಇವೆಲ್ಲವುಗಳ ನಡುವೆ ಸಂತೋಷ್ ವೀಣಾ ಮೇಲೆ ಕೈ ಮಾಡಿ ಅಪ್ಪನ ಕೋಪಕ್ಕೆ ಗುರಿಯಾಗಿ ಕೊನೆಗೆ ವೀಣಾ ಹತ್ತಿರ ಕ್ಷಮೆಯನ್ನು ಕೇಳಿದನು. ಒಟ್ಟಿನಲ್ಲಿ ಲಕ್ಷ್ಮೀ ನಿವಾಸದಲ್ಲಿ ಆತಂಕದ ವಾತಾವರಣ ತುಂಬಿ ಹೋಗಿದೆ.

ಆದರೆ ಮನೆಯಲ್ಲಿ ಇಷ್ಟೆಲ್ಲಾ ಆದರೂ ಸಹಾ ಲಕ್ಷ್ಮೀ ಪತ್ತೆ ಇಲ್ಲ. ಇದನ್ನ ನೋಡಿದ ಪ್ರೇಕ್ಷಕರು ಬೇಸರ ಹೊರ ಹಾಕಿದ್ದಾರೆ. ಭಾವನಾ ಬಗ್ಗೆ ಮಗ ಒಂದು ತರ, ಚಿಕ್ಕ ಸೊಸೆ ಮತ್ತೊಂದು ರೀತಿ ಮಾತನಾಡಿ ನೋವು ನೀಡಿದಾಗ ಭಾವನಾ ಜೊತೆಯಾಗಿ ನಿಲ್ಲಬೇಕಾದ ತಾಯಿಯೇ ಮನೆಯಲ್ಲಿ ಯಾಕಿಲ್ಲ? ಇಂತಹ ಪರಿಸ್ಥಿತಿಯಲ್ಲಿ ಲಕ್ಷ್ಮಿ ಇರಲೇಬೇಕಾಗಿತ್ತು? ಆದರೆ ಯಾಕಿಲ್ಲ ಎನ್ನುವುದು ಪ್ರೇಕ್ಷಕರ ಪ್ರಶ್ನೆಯಾಗಿದೆ.

Jani Master: ವ್ಯಾನ್ ಒಳಗೆ ಬಂದು ಪ್ಯಾಂಟ್ ಜಿಪ್ ಬಿಚ್ಚಿ, ಜಾನಿ ಮಾಸ್ಟರ್ ಬಗ್ಗೆ ಸ್ಪೋಟಕ ವಿಷಯ ಬಿಚ್ಚಿಟ್ಟ ಸಂತ್ರಸ್ತೆ

Leave a Comment