Lakshmi Nivasa: ಇವ್ರನ್ನ ಹನಿಮೂನ್ ಗೆ ಕಳಿಸಿ, ನೋಡೋಕಾಗ್ತಿಲ್ಲ, ಬೋರಾಗಿದೆ, ಲಕ್ಷ್ಮೀ ನಿವಾಸ ಬಗ್ಗೆ ನೆಟ್ಟಿಗರ ಅಸಮಾಧಾನ

Written by Soma Shekar

Published on:

---Join Our Channel---

Lakshmi Nivasa: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಲಕ್ಷ್ಮೀ ನಿವಾಸ (Lakshmi Nivasa) ಟಾಪ್ ಎರಡನೇ ಸ್ಥಾನವನ್ನು ಪಡೆದುಕೊಂಡು ಮುನ್ನುಗ್ಗುತ್ತಿರುವ ಸೀರಿಯಲ್ ಆಗಿದೆ. ಹಲವು ಕಲಾವಿದರು ಈ ಸೀರಿಯಲ್ ನಲ್ಲಿ ನಟಿಸುತ್ತಿದ್ದು ಆರಂಭವಾದ ಕೆಲವೇ ದಿನಗಳಲ್ಲಿ ಜನರ ಮನಸ್ಸನ್ನು ಗೆದ್ದು ಟಾಪ್ ರೇಸ್ ಗೆ ಎಂಟ್ರಿಯನ್ನು ನೀಡಿರುವ ಈ ಸೀರಿಯಲ್ ನಲ್ಲಿನ ಎಲ್ಲಾ ಪಾತ್ರಗಳು ಪ್ರೇಕ್ಷಕರ ವಿಶೇಷ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದರೆ ಹೆಚ್ಚು ಚರ್ಚೆಯಾಗುತ್ತಿರುವ ಪಾತ್ರ ಮಾತ್ರ ಜಯಂತ್ ಆಗಿದೆ.

ಜಯಂತ್ (Jayanth) ಪಾತ್ರ ಆರಂಭದಲ್ಲಿ ಅಪಾರ ಜನ ಮೆಚ್ಚುಗೆ ಪಡೆದಿತ್ತು. ಆದರೆ ಯಾವಾಗ ಆ ಪಾತ್ರ ಸೈಕೋ ಅಂತ ಗೊತ್ತಾಯ್ತೋ ಅಲ್ಲಿಂದ ನೆಗೆಟಿವ್ ಕಾಮೆಂಟ್ ಗಳು ಸಹಾ ಹರಿದು ಬರೋದಕ್ಕೆ ಶುರುವಾಯ್ತು. ಸೋಶಿಯಲ್ ಮೀಡಿಯಾಗಳಲ್ಲಿ ಈ ಪಾತ್ರದ ಬಗ್ಗೆ ಚರ್ಚೆಗಳು ಶುರುವಾಯ್ತು. ಕೆಲವರು ಜಯಂತ್ ಪಾತ್ರಧಾರಿ ನಟ ದೀಪಕ್ ಸುಬ್ರಹ್ಮಣ್ಯ ಅವರ ನಟನೆಯನ್ನು ಹಾಡಿ ಹೊಗಳುತ್ತಿದ್ದಾರೆ.

ಇನ್ನೊಂದು ಕಡೆ ಈ ಪಾತ್ರ ತಪ್ಪು ಸಂದೇಶ ನೀಡುತ್ತಿದೆ ಎನ್ನುವುದು ಮತ್ತೊಂದು ವರ್ಗದ ಮಾತಾಗಿದೆ. ಹೀಗೆ ಪಾತ್ರವೊಂದರ ಕುರಿತಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗಳಾದ ಬೆನ್ನಲ್ಲೇ ಕಳೆದೆರಡು ವಾರಗಳಿಂದ ಜಯಂತ್ ಪಾತ್ರ ಹೆಚ್ಚಾಗಿ ಸೀರಿಯಲ್ ನಲ್ಲಿ ಕಾಣಿಸಿದ್ದು, ಇದನ್ನ ನೋಡಿ ನೆಟ್ಟಿಗರು ಈಗ ಇದರ ಬಗ್ಗೆ ಬೇಸರ, ಅಸಮಾಧಾನವನ್ನು ಹೊರ ಹಾಕಲು ಆರಂಭಿಸಿದ್ದಾರೆ.

ಎರಡು ವಾರದಿಂದ ಇವರದ್ದೇ ಕಥೆ ಆಯ್ತು, ಸೀರಿಯಲ್ ನ ಕಥೆ ಮುಂದೆ ಹೋಗ್ತಿಲ್ಲ, ನೋಡೋಕೆ ಬೇಸರ ಆಗ್ತಿದೆ ಅಂತ ಕಾಮೆಂಟ್ ಗಳನ್ನು ಮಾಡಿದ್ದಾರೆ ಕೆಲವರು. ಇನ್ನೂ ಕೆಲವರು ಜಯಂತ್ ಮತ್ತು ಜಾಹ್ನವಿನ ಒಂದು ನಾಲ್ಕು ವಾರ ಹನಿಮೂನ್ ಗಾದ್ರು ಕಳಿಸಿ ನೋಡಿ ನೋಡಿ ಸಾಕಾಗ್ತಿದೆ ಎಂದಿದ್ದಾರೆ. ಜಾಹ್ನವಿ ಗಂಡ ನೋಡೋಕೆ ಚೆನ್ನಾಗಿದ್ರೆ ಸಾಲಲ್ಲ, ಮನಸ್ಸು ಸರಿಯಿರಬೇಕು, ಹುಷಾರಾಗು, ಅದ್ಯಾಕೆ ಹಳೇ ಕಾಲದ ಅಜ್ಜಿತರ ಆಡ್ತೀಯ ಅಂತಾ ಕೂಡಾ ಕಾಮೆಂಟ್ ಬಂದಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಜಯಂತ್ ಪಾತ್ರದ ಬಗ್ಗೆ ಶುರುವಾದ ಚರ್ಚೆಯಿಂದ ಈಗ ಆ ಪಾತ್ರವನ್ನ ಇನ್ನಷ್ಟು ಹೈಲೈಟ್ ಮಾಡೋತರ ಹೆಚ್ಚು ಜಯಂತ್ ಮತ್ತು ಜಾಹ್ನವಿ ಸನ್ನಿವೇಶಗಳನ್ನೇ ತೋರಿಸ್ತಾ ಇದ್ದಾರಾ ಅನ್ನೋ ಅನುಮಾನ ಸಹಾ ಅನೇಕರಿಗೆ ಬರ್ತಾ ಇದೆ. ಮುಂದಿನ ದಿನಗಳಲ್ಲಿ ಹೊಸ ಟ್ವಿಸ್ಟ್ ಗಳೇನಾದ್ರು ಬರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment