Lakshmi Nivasa: ಕಿರುತೆರೆಯಲ್ಲಿ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಈಗಾಗಲೇ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸೀರಿಯಲ್ ಗಳ ಸಾಲಿನಲ್ಲಿದೆ. ಆರಂಭದಿಂದಲೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲತ್ತಾ, ವಿಶೇಷವಾದ ರೀತಿಯಲ್ಲಿ ಪ್ರೇಕ್ಷಕರನ್ನ ರಂಜಿಸುತ್ತಾ ಮುಂದೆ ಸಾಗುತ್ತಿದ್ದು, ಸೀರಿಯಲ್ ನ ಪ್ರತಿಯೊಂದು ಪಾತ್ರವೂ ಸಹಾ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಕೆಲವು ಪಾತ್ರಗಳ ವಿಚಾರವಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತಿದೆ.
ಈ ಸೀರಿಯಲ್ ನಲ್ಲಿ ಭಾವನಾ (Bhavana) ಮತ್ತು ಸಿದ್ಧೇಗೌಡ್ರ (Sidde Gowdru) ಪಾತ್ರ ಪ್ರೇಕ್ಷಕರ ಅಚ್ಚುಮೆಚ್ಚಿನ ಪಾತ್ರಗಳಲ್ಲಿ ಒಂದಾಗಿವೆ. ಭಾವನಾ ಸಿದ್ಧೇಗೌಡ್ರು ಎದುರು ಬಂದಾಗಲೆಲ್ಲಾ ಅಸಮಾಧಾನಗೊಂಡು, ಬೇಸರದಿಂದ, ಸಿಟ್ಟಿನಿಂದ ಮಾತನಾಡೋದು ಉಂಟು. ಸಿದ್ಧೇಗೌಡ್ರರಾದ್ರೆ ಭಾವನಾ ಮೇಲಿನ ಪ್ರೀತಿಯಿಂದ ಹೇಗಾದ್ರು ಸರಿ ಅವರ ಮನಸ್ಸನ್ನ ಗೆಲ್ಲಬೇಕು ಅಂತ ಏನಾದರೊಂದ ನೆಪದಿಂದ ಭಾವನಾ ಮುಂದೆ ಬರ್ತಾರೆ.
ಮತ್ತೊಂದು ಕಡೆ ಖುಷಿಯನ್ನು ಹಿಂದೊಮ್ಮೆ ಸುರಕ್ಷಿತವಾಗಿ ಭಾವನಾ ಹತ್ರಕ್ಕೆ ಸೇರಿಸೋ ವಿಚಾರದಲ್ಲಿ ಸಿದ್ಧೇಗೌಡ್ರು ತಮಗೆ ಭಾವನಾ ಬಗ್ಗೆ ಗೊತ್ತಿಲ್ಲದೇನೇ ಸಹಾಯ ಮಾಡಿರ್ತಾರೆ. ಆಗ್ಲಿಂದ ಭಾವನಾ ಗೌಡ್ರೇ ಗೌಡ್ರೇ ಅಂತ ಸಿದ್ಧೇಗೌಡ್ರ ಜೊತೆ ಫೋನ್ ನಲ್ಲಿ ಮಾತನಾಡಿಕೊಂಡು ಬಹಳ ಆತ್ಮೀಯವಾಗಿದ್ದಾರೆ. ಭಾವನಾಗೆ ಸಿದ್ಧುನೇ ಆ ಗೌಡ್ರು ಅನ್ನೋದು ಗೊತ್ತಿಲ್ಲ. ಆದರೆ ಸಿದ್ಧುಗೆ ಮಾತ್ರ ಎಲ್ಲಾ ವಿಷಯ ಗೊತ್ತಿದೆ.
ಇದೆಲ್ಲಾ ಸರಿಯಾಗೇ ಇದೆ, ಆದ್ರೆ ಇಲ್ಲಿ ಪ್ರೇಕ್ಷಕರು ಮತ್ತು ನೆಟ್ಟಿಗರು ಭಾವನಾ ನಿಜವಾಗಿ ಅಮಾಯಕಳೋ ಅಥವಾ ದಡ್ಡಿನೋ ಅಂತಿದ್ದಾರೆ. ಯಾಕಂದ್ರೆ ಭಾವನಾಗೆ ಫೋನ್ ನಲ್ಲಿ ಮಾತಾಡೋ ಗೌಡ್ರು, ತಾನು ದ್ವೇಷ ಮಾಡೋ ಸಿದ್ಧೇಗೌಡ್ರು ಮಾತಾಡೋ ದನಿ ಒಂದೇ, ಮಾತಾಡೋ ವಿಧಾನ ಒಂದೇ ಅನ್ನೋ ಒಂದು ಸಣ್ಣ ವಿಷಯ ಕೂಡಾ ಗೊತ್ತಾಗ್ತಿಲ್ವ ಅನ್ನೋದೇ ಆಗಿದೆ.
ಸಿದ್ಧೇಗೌಡ್ರು ಹೊರಗಡೆ ಅಂದ್ರೆ ಭಾವನಾ ಎದುರಲ್ಲಿ ಇದ್ದಾಗ ಮಾತನಾಡೋದು ಮತ್ತು ಫೋನ್ ನಲ್ಲಿ ಮಾತನಾಡೋದು ಒಂದೇ ಶೈಲಿಯಲ್ಲಿ, ಯಾವುದೇ ದನಿ ವ್ಯತ್ಯಾಸ ಅಥವಾ ಮಾತಾಡೋ ಸ್ಟೈಲ್ ನಲ್ಲಿ ವ್ಯತ್ಯಾಸ ಮಾಡೋದಿಲ್ಲ. ಅಷ್ಟಾದ್ರು ಭಾವನಾಗೆ ಮಾತ್ರ ಅದು ಗೊತ್ತಾಗ್ತಿಲ್ಲ ಅಂದ್ರೆ ಎಂತಾ ವಿಚಿತ್ರ ಅಂತಿದ್ದಾರೆ ಪ್ರೇಕ್ಷಕರು. ಪ್ರೊಮೊ ನೋಡಿ ಕಾಮೆಂಟ್ ಮಾಡಿದವರು, ಅಯ್ಯೋ ಪೆದ್ದು ಮುಂಡೇದೆ, ಇಬ್ಬರದೂ ಒಂದೇ ವಾಯ್ಸ್ ಅನ್ನೋದು ಗೊತಾಗ್ತಾ ಇಲ್ವಾ? ಎಂದಿದ್ದಾರೆ.
ಮತ್ತೊಬ್ಬರು ಕಾಮೆಂಟ್ ನಲ್ಲಿ ಅಷ್ಟೂ ಧ್ವನಿ ಗೊತ್ತಾಗುವುದಿಲ್ಲವಾ ಭಾವನಾಳಿಗೆ? ಕೋಪ ಮಾತ್ರ ಬೇಗ ಬರುತ್ತದೆ! ಎಂದರೆ, ಇನ್ನೊಬ್ಬರು ಕಾಮೆಂಟ್ ನಲ್ಲಿ, ಫೋನ್ ನಲ್ಲು ಮತ್ತೇ ಎದ್ರುಗಡೆ ಇದ್ದಾಗಲೂ ಮಾತಾಡೋ ಶೈಲಿ ಒಂದೇ ತರ ಇದೇ ಅಲ್ಲೆ ಗೊತ್ತಾಗಲ್ವಾ.. ಇಬ್ರು ಒಬ್ರೇ ಅಂತ.. ಪ್ರೇಕ್ಷಕರು ಮೂರ್ಖರಲ್ಲ ಎಂದಿದ್ದಾರೆ. ಒಟ್ನಲ್ಲಿ ಜನ ಈಗ ಸಣ್ಣ ಸಣ್ಣ ತಪ್ಪುಗಳನ್ನು ಸಹಾ ಟೀಕೆ ಮಾಡೋಕೆ ಶುರು ಮಾಡಿದ್ದಾರೆ.