Kodishri : ಕೇರಳದ ವಯನಾಡಿನಲ್ಲಿ ಮಳೆಯಿಂದ ಸಂಭವಿಸಿರುವ ಅವಾಂತರಗಳು ಹಾಗೂ ದುರಂತದ ಕುರಿತಾಗಿ ಸಾಕಷ್ಟು ಸುದ್ದಿಗಳಾಗುವಾಗಲೇ, ಈ ವಿಚಾರವಾಗಿ ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Shivayogi Rajendra Swamiji) ಮಾತನಾಡುತ್ತಾ, ನಾನು ಇದನ್ನ 20 ದಿನಗಳ ಹಿಂದೆಯೇ ಹೇಳಿದ್ದೆ ಎಂದಿದ್ದಾರೆ.
ಬೆಳಗಾವಿಯ (Belagavi) ರಾಮತೀರ್ಥ ನಗರದಲ್ಲಿ ಶ್ರೀಗಳು (Kodishri) ಮಾತನಾಡಿದ್ದು, ಕೇರಳದ ಭೂಕುಸಿತದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಕಳೆದ ಇಪ್ಪತ್ತು ದಿನಗಳ ಹಿಂದೆಯೇ ಈ ರೀತಿ ಆಗುತ್ತೆಂದು ಹೇಳಿದ್ದೆ. ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ, ರೋಗ ರುಜಿನಗಳು ಹೆಚ್ಚಾಗುತ್ತವೆ ಅಂತ ಹೇಳಿದ್ದೆ ಎಂದಿದ್ದಾರೆ.
ಇದು ಭಾರತಕ್ಕೆ ಅಷ್ಟೇ ಎಂದು ಹೇಳಿರಲಿಲ್ಲ, ಜಾಗತಿಕ ಮಟ್ಟದಲ್ಲಿಯೂ ಕೆಲವು ರಾಜ್ಯಗಳು ಮುಳುಗುತ್ತವೆ ಅಂತ ಹೇಳಿದ್ದೆ ಎನ್ನುವ ಮಾತನ್ನು ಶ್ರೀಗಳು ಆಡಿದ್ದಾರೆ. ತಮ್ಮ ಪ್ರಕಾರ ಅಮಾವಾಸ್ಯೆ ವರೆಗೂ ಮಳೆ ಬರುತ್ತೆ, ಅನಂತರ ಬೇರೆ ಭಾಗಕ್ಕೆ ಹೋಗುತ್ತೆ, ಕ್ರೋಧಿನಾಮ ಸಂವತ್ಸರದಲ್ಲಿ ಒಳ್ಳೆಯದು, ಕೆಟ್ಟದ್ದೂ ಎರಡೂ ಇದೆ ಎನ್ನುವ ಮಾತುಗಳನ್ನ ಅವರು ಹೇಳಿದ್ದಾರೆ.
ಪ್ರಕೃತಿ ವಿಕೋಪವಾಗಿ ಭೂಮಿ ಕಂಪಿಸುತ್ತೆ, ಜನ ಸಾಯ್ತಾರೆ, ಕೆಲವು ರಾಜ್ಯಗಳು ಮುಳುಗಡೆ ಆಗುತ್ತವೆ. ರಾಜ್ಯದಲ್ಲಿ ಜಲಕಂಟಕ ಹಾಗೂ ಪ್ರಕೃತಿ ವಿಕೋಪ ಮುಂದುವರೆಯುತ್ತದೆ. ಲಾಭಕ್ಕಿಂತ ಹಾನಿ ಹೆಚ್ಚು, ಇದೆಲ್ಲಾ ಬರುವ ಅಮಾವಾಸ್ಯೆ ವರೆಗೆ ಸಮಯ ಸರಿಯಿಲ್ಲ. ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೇ ಜಲಕಂಟಕವಿದೆ ಎಂದಿದ್ದಾರೆ.
Kriti Sanon: ಗ್ರೀಸ್ ದೇಶದಲ್ಲಿ ಕೃತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್; ಇದೆಲ್ಲಾ ಯಾಕೆ ಬೇಕು ಎಂದ ನೆಟ್ಟಿಗರು