Keerthi Suresh: ಬಾಲಿವುಡ್ ಗೆ ಹಾರಿ ಹಾಟ್ & ಬೋಲ್ಡ್ ಆದ ಕೀರ್ತಿ ಸುರೇಶ್ ಗೆ ಸಿಕ್ತು ಮತ್ತೊಬ್ಬ ಸ್ಟಾರ್ ನಟನ ಸಿನಿಮಾ

Written by Soma Shekar

Published on:

---Join Our Channel---

Keerthy Suresh: ದಕ್ಷಿಣದ ನಟಿಯರು ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುವ ಮೂಲಕ ಬಾಲಿವುಡ್ ಬೆಡಗಿಯರಿಗೆ ಟಕ್ಕರ್ ನೀಡುತ್ತಿದ್ದಾರೆ. ಬಾಲಿವುಡ್ ನ ಹಾಟ್ ಬ್ಯೂಟಿಗಳಿಗೆ ಸೌತ್ ನಟಿಯರು ನಾವು ಅಂದಕ್ಕೂ ಸೈ, ನಟನೆಗೂ ಸೈ ಎನ್ನುವಂತೆ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಅನಿಮಲ್ ಸಿನಿಮಾದ ಯಶಸ್ಸಿನ ನಂತರ ರಶ್ಮಿಕಾ ಈಗ ಸಲ್ಮಾನ್ ಖಾನ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗ ದಕ್ಷಿಣದ ಮತ್ತೊಬ್ಬ ನಟಿ ಸಹಾ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಾಲಿವುಡ್ ನಟ ವರುಣ್ ಧವನ್ (Varun Dhawan) ಜೊತೆಗೆ ನಾಯಕಿಯಾಗಿ ನಟಿಸುತ್ತಿರುವ ಈ ನಟಿ ಈಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಹೌದು, ಮಹಾನಟಿ ಸಿನಿಮಾ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ನಟಿ ಕೀರ್ತಿ ಸುರೇಶ್ (Keerthi Suresh) ಸದ್ದಿಲ್ಲದೇ ಬಾಲಿವುಡ್ ಗೆ ಎಂಟ್ರಿಯನ್ನು ನೀಡಿದ್ದಾರೆ.

ವರುಣ್ ಧವನ್ ಜೊತೆಗೆ ಬೇಬಿ ಜಾನ್ (Baby John) ಸಿನಿಮಾದಲ್ಲಿ ನಾಯಕಿಯಾಗಿರುವ ಕೀರ್ತಿ ಸುರೇಶ್ ಅವರ ಹಾಟ್ ಲುಕ್ ನೋಡಿ ಅಭಿಮಾ‌ನಿಗಳು ಶಾಕ್ ಆಗಿದ್ದರು. ತಾನು ಹಾಟ್ ಮತ್ತು ಬೋಲ್ಡ್ ಪಾತ್ರ ಮಾಡಲ್ಲ ಅಂತಿದ್ದ ನಟಿ ಬಾಲಿವುಡ್ ಗೆ ಹೋದ ಕೂಡಲೇ ಬದಲಾಗಿ ಬಿಟ್ರಾ ಅಂತ ಕೆಲವರು ಬೇಸರವನ್ನು ಸಹಾ ವ್ಯಕ್ತಪಡಿಸಿದ್ದರು. ನಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಈಗ ಇವೆಲ್ಲವುಗಳ ಬೆನ್ನಲ್ಲೇ, ಬಾಲಿವುಡ್ ನಲ್ಲಿ ತಮ್ಮ ಸತತ ಸೋಲಿನಿಂದ ಕಂಗೆಟ್ಟಿರುವ ನಟ ಅಕ್ಷಯ್ ಕುಮಾರ್ (Akshay Kumar) ಅವರ ಮುಂದಿನ ಸಿನಿಮಾಕ್ಕೆ ಕೀರ್ತಿ ಸುರೇಶ್ ನಾಯಕಿ ಎನ್ನಲಾಗಿದೆ. ಈ ಸಿನಿಮಾವನ್ನು ಪ್ರಿಯದರ್ಶನ್ ಅವರು ನಿರ್ದೇಶನ ಮಾಡಲಿದ್ದಾರೆ‌. ಈ ಸಿನಿಮಾಕ್ಕೆ ಹಲವು ನಟಿಯರ ಹೆಸರು ಕೇಳಿ ಬಂದಿತ್ತಾದರೂ ಕೊನೆಗೆ ಕೀರ್ತಿ ಸುರೇಶ್ ಅವರನ್ನು ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a Comment