Hamare Barah: ಇಸ್ಲಾಂ ಧರ್ಮದ ಅವಹೇಳನ, ಸಿನಿಮಾ ಬಿಡುಗಡೆಗೆ ನಿರ್ಬಂಧ ಹೇರಿದ ಕರ್ನಾಟಕ ಸರ್ಕಾರ

Written by Soma Shekar

Published on:

---Join Our Channel---

Hamare Barah : ಬಾಲಿವುಡ್ ನ ಹಮಾರೆ ಬಾರಾ (Hamare Barah) ಸಿನಿಮಾವನ್ನು ಎರಡು ವಾರಗಳ ಕಾಲ ಬಿಡುಗಡೆ ಆಗದಂತೆ ಕರ್ನಾಟಕ ಸರ್ಕಾರ ನಿಷೇಧವನ್ನು ಹೇರಿದೆ. ಒಂದು ವೇಳೆ ಈ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆದರೆ ಇದು ಕೋಮು ಗಲಭೆ ಗಳಿಗೆ (Communal Tension) ಕಾರಣವಾಗಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ 1964 ಸೆಕ್ಷನ್ 15(1) ಮತ್ತು 15(5) ಅನ್ವಯ ಸರ್ಕಾರ ಇಂತಹುದೊಂದು ನಿರ್ಣಯವನ್ನು ಮಾಡಿದೆ.

ಕಮಲ್ ಚಂದ್ರ (Kamal Chandra) ನಿರ್ದೇಶನದ ಈ ಸಿನಿಮಾದ ಕಾನೂನು ಹೋರಾಟ ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಚಿತ್ರದ ಟೀಸರ್ ನಲ್ಲಿ ಆಕ್ಷೇಪಾರ್ಹ ಅಂಶವಿದೆ ಎನ್ನುವ ಕಾರಣಕ್ಕೆ ಈಗಾಗಲೇ ಬಾಂಬೆ ಹೈಕೋರ್ಟ್ (Bombay High Court) ಸಹಾ ನಿರ್ಬಂಧ ಹೇರಿದೆ. ಸಿನಿಮಾ ಬಿಡುಗಡೆಗೆ ಮೊದಲೇ ಧಾರ್ಮಿಕ ಸಮುದಾಯದ ಕಾರ್ಯಕರ್ತರು ಚಿತ್ರದ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಜೂನ್ 14 ರ ವರೆಗೆ ತಡೆಯಾಜ್ಞೆ ವಿಧಿಸಿದೆ.

ಈ ಸಿನಿಮಾದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕಥೆಯನ್ನು ಹೆಣೆಯಲಾಗಿದೆ ಎನ್ನಲಾಗಿದ್ದು, ಟೀಸರ್ ನಲ್ಲಿ ಇಸ್ಲಾಂ ಧರ್ಮದ ಬಗ್ಗೆ ಕೆಟ್ಟದಾಗಿ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಅಜರ್ ಎಂಬುವವರು ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ್ದರು.. ಬಾಂಬೆ ಹೈಕೋರ್ಟ್ ಅರ್ಜಿಯನ್ನು ಪರಿಶೀಲನೆ ಮಾಡಿದ ನಂತರ ಮೂರು ಜನರ ಸಮಿತಿ ಕಮಿಟಿ ಮಾಡಿ, ಸಿನಿಮಾ ನೋಡಿ ವರದಿ ನೀಡುವಂತೆ ಆದೇಶ ನೀಡಿದೆ.

ಟ್ರೈಲರ್ ನೋಡಿದ ನಂತರ ಅಲ್ಪಸಂಖ್ಯಾತರ ಸಂಘಟನೆಗಳು ಸರ್ಕಾರಕ್ಕೆ ಸಿನಿಮಾ ಕುರಿತಾಗಿ ಮಾಡಿದ ಮನವಿಯನ್ನು ಪರಿಗಣಿಸಿ, ಸಿನಿಮಾ ಬಿಡುಗಡೆ ಆದರೆ ಕೋಮು ಗಲಭೆಗಳ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರ ಎರಡು ವಾರಗಳ ಕಾಲ ಸಿನಿಮಾ ಬಿಡುಗಡೆ ಮೇಲೆ ನಿರ್ಬಂಧ ಹಾಕಿದ್ದು, ಅನಂತರ ಬಿಡುಗಡೆ ಆಗುತ್ತದೆಯೋ ಇಲ್ಲವೋ ಎನ್ನುವುದು ಸದ್ಯಕ್ಕೆ ತಿಳಿದಿಲ್ಲ.

Leave a Comment