Kareena Kapoor: ಬಾಲಿವುಡ್ ನ (Bollywood) ಸ್ಟಾರ್ ನಟಿಯರು ಎಂದ ಕೂಡಲೇ ಅಲ್ಲಿ ಕರೀನಾ ಕಪೂರ್ ಖಾನ್ (Kareena Kapoor) ಹೆಸರು ಸಹಾ ಇದ್ದೇ ಇರುತ್ತದೆ. ಬಾಲಿವುಡ್ ನಲ್ಲಿ ಎರಡು ದಶಕಗಳಿಂದ ಸಿನಿ ಪ್ರೇಮಿಗಳನ್ನು ರಂಜಿಸುತ್ತಿರುವ ಕರೀನಾ ಒಂದು ಕಾಲದಲ್ಲಿ ಬಹು ಬೇಡಿಕೆಯ ಮತ್ತು ದುಬಾರಿ ನಟಿ ಸಹಾ ಆಗಿದ್ದರು ಎನ್ನುವುದು ನಿಜ. ಸಂದರ್ಶನವೊಂದರಲ್ಲಿ ನಟಿಯು ತಾವು ಪಡೆಯುವ ದುಬಾರಿ ಸಂಭಾವನೆಯ ಕುರಿತಾಗಿ ಸಹಾ ಮಾತನಾಡಿದ್ದುಂಟು.
ಸಂದರ್ಶನದಲ್ಲಿ ನೀವು ಬಾಲಿವುಡ್ ನಲ್ಲಿ ಹತ್ತರಿಂದ ಹದಿನೈದು ಕೋಟಿ ಸಂಭಾವನೆ ಪಡೆಯುವ ನಟಿಯಲ್ಲವೇ ಎಂದು ಪ್ರಶ್ನೆ ಮಾಡಿದಾಗ ಅದಕ್ಕೆ ಉತ್ತರಿಸಿದ ಕರೀನಾ, ಹಾಗೆ ಆದರೆ ಚೆನ್ನಾಗಿರುತ್ತೆ ಎಂದು ನಾನು ಅಂದುಕೊಳ್ತೀನಿ. ನಾನು ಸಿನಿಮಾವನ್ನು ಕೇವಕ ಹಣಕ್ಕಾಗಿ ಮಾಡೋದಿಲ್ಲ. ಕೆಲವೊಂದು ಪಾತ್ರಗಳು ಇಷ್ಟವಾದರೆ ಕಡಿಮೆ ಹಣಕ್ಕೆ ಸಹಾ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಂಭಾವನೆ ಅನ್ನೋದು ನನ್ನ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅದು ಯಾವ ಸಿನಿಮಾ, ಯಾವ ಪಾತ್ರ, ನಾನು ಆ ಪಾತ್ರಕ್ಕಾಗಿ ಏನೆಲ್ಲಾ ಕೊಡಬಹುದು ಎಂಬುದನ್ನು ಆಲೋಚನೆ ಮಾಡುತ್ತೇನೆ. ಅದೊಂದು ದೊಡ್ಡ ಕಮರ್ಷಿಯಲ್ ಸಿನಿಮಾ ಆದರೆ 10-15 ಕೋಟಿ ಸಂಭಾವನೆಯನ್ನು ಪಡೆಯುವುದರಲ್ಲಿ ತಪ್ಪೇನಿಲ್ಲ.
ವೃತ್ತಿಯ ವಿಚಾರಕ್ಕೆ ಬಂದರೆ ನಟಿ ಕೊನೆಯದಾಗಿ ಕ್ರ್ಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕರೀನಾ ಜೊತೆಗೆ ತಬು ಮತ್ತು ಕೃತಿ ಸೆನೊನ್ ಸಹಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗ ಸಿಂಗಂ ಅಗೇನ್ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ದಿ ಬಕ್ಕಿಂಗ್ ಹ್ಯಾಮ್ ಮರ್ಡರ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Venu Swamy: ಇನ್ನು ಆರೇ ತಿಂಗಳಲ್ಲಿ ಡಿವೋರ್ಸ್: ಸ್ಟಾರ್ ನಟಿಯ ಬಗ್ಗೆ ವೇಣು ಸ್ವಾಮಿ ಶಾಕಿಂಗ್ ಭವಿಷ್ಯ, ಯಾರು ಆ ನಟಿ ?