Shravani Subramanya: ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ನಲ್ಲಿ ಶ್ರಾವಣಿ ಸಾಲಿಗ್ರಾಮಕ್ಕೆ ಹೋಗುವ ತಯಾರಿಯಲ್ಲಿದ್ದರೆ, ಒಂದು ಕಡೆ ವಿಜಯಾಂಬಿಕ ಕುತಂತ್ರದಲ್ಲಿ ಶ್ರೀವಲ್ಲಿ ಸಿಲುಕಿಕೊಂಡಿದ್ದಾಳೆ, ಮತ್ತೊಂದು ಕಡೆ ವರ ಮತ್ತು ವರದನ ಪ್ರೇಮ ಕಥೆ ಕೇಳಿ ಇಂದ್ರಮ್ಮ ಸುಬ್ಬು ಅವರ ಮನೆ ಮೇಲೆ ಕೆಂಡ ಕಾರಿದ್ದಾಳೆ. ಮನೆ ಖಾಲಿ ಮಾಡಿ ಅಂತ ಸುಬ್ಬು ಅವರ ಮನೆ ಮೇಲೆ ಕೂಗಾಡಿದ್ದಾಳೆ. ಸೀರಿಯಲ್ ನಲ್ಲಿ ಈಗ ಮೂರು ಕಡೆ ಮೂರು ಆಸಕ್ತಿಕರ ಕಥೆಗಳು ನಡೆಯುತ್ತಿದೆ.
ಶ್ರಾವಣಿ ಮಾತನ್ನ ಕೇಳಿ ಸುಬ್ಬು ಶ್ರೀವಲ್ಲಿಗೆ (Srivalli) ಇಂಟರ್ ವ್ಯೂ ಮಾಡಿದ್ದಾನೆ. ಆದರೆ ಸುಬ್ಬು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳೋಕಾಗದೇ ಶ್ರೀವಲ್ಲಿ ಇಂಟರ್ ವ್ಯೂ ನಲ್ಲಿ ಫೇಲ್ ಆಗಿ ಸಿಟ್ಟಿನಿಂದ ಅಲ್ಲಿಂದ ಹೋಗುವಾಗಲೇ ವಿಜಯಾಂಬಿಕ ಶ್ರೀವಲ್ಲಿಯನ್ನ ಕರೆದು ಪಿಂಕಿಗೆ ಡ್ಯಾನ್ಸ್ ಹೇಳ್ಕೊಂಡು ಅಂತ ಉದ್ಯೋಗವನ್ನು ಕೊಟ್ಟಿದ್ದಾಳೆ.
ವಿಜಯಾಂಬಿಕೆ ಶ್ರೀವಲ್ಲಿಯನ್ನು ತನ್ನ ತಮ್ಮನಿಗೆ ಹತ್ತಿರ ಮಾಡಿ ಶ್ರೀವಲ್ಲಿಯನ್ನ ದೂರ ಮಾಡೋ ಪ್ಲಾನ್ ಮಾಡ್ತಿದ್ದಾಳೆ. ಮತ್ತೊಂದು ಕಡೆ ವರಲಕ್ಷ್ಮಿ ಮತ್ತು ವರದನ ಲವ್ ಮ್ಯಾಟರ್ ಗೊತ್ತಾಗಿ ಇಂದ್ರಮ್ಮ ಉಗ್ರರೂಪ ತಾಳಿದ್ದಾಳೆ. ಸುಬ್ಬು ಮನೆಗೆ ಹೋಗಿ ಅರಚಾಡಿ ಮನೆಯಲ್ಲಿನ ವಸ್ತುಗಳನ್ನ ಹೊರಗೆ ಎಸೆದು ಮನೆ ಖಾಲಿ ಮಾಡಿ ಅಂತ ರಂಪಾಟ ಮಾಡಿದ್ದಾಳೆ.
ಸುಬ್ಬುಗೆ (Subbu) ಮನೆಯ ಬಳಿ ನಡೆಯುತ್ತಿರೋ ವಿಚಾರ ಯಾವುದೂ ಗೊತ್ತಿಲ್ಲ. ಮನೆಯವರು ಮನೆ ಕಳ್ಕೊಂಡು ಬೀದಿಗೆ ಬಂದಿದ್ದಾರೆ ಅನ್ನೋ ವಿಚಾರ ತಿಳಿದಿಲ್ಲ. ಈಗ ಸುಬ್ಬು ಏನ್ಮಾಡ್ತಾನೆ. ಪರಿಸ್ಥಿತಿಯನ್ನ ಹೇಗೆ ನಿಭಾಯಿಸ್ತಾನೆ ಅನ್ನೋದನ್ನ ಕಾದು ನೋಡಬೇಕಾಗಿದೆ. ತಂಗಿಗೆ ತಾನು ಸಪೋರ್ಟ್ ಮಾಡ್ತೀನಿ ಅಂದಿದ್ದ ಸುಬ್ಬು ಮುಂದಿನ ನಡೆ ಏನು ಅನ್ನೋದು ಕುತೂಹಲ ಕೆರಳಿಸಿದೆ.
Shravani Subramanya: ಸಾಲಿಗ್ರಾಮ ಬದಲಾಯಿಸುತ್ತಾ ಶ್ರಾವಣಿ ಅದೃಷ್ಟ? ಸುಬ್ಬು ಶ್ರಾವಣಿ ಕುಟುಂಬದ ರಹಸ್ಯ ಏನು ?